ಅತಿ ವೇಗದ ಬೈಕ್ ರೈಡಿಗೆ ಇಬ್ಬರು ವಿದ್ಯಾರ್ಥಿಗಳು ಬಲಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 24: ಸ್ನೇಹಿತನ ಹುಟ್ಟುಹಬ್ಬ ಸಮಾರಂಭ ಮುಗಿಸಿಕೊಂಡು ಅತಿ ವೇಗವಾಗಿ ಬೈಕ್ ರೈಡ್ ಮಾಡುತ್ತಿದದ್ ವಿದ್ಯಾರ್ಥಿಗಳು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಹೊಸ ಬಿಇಎಲ್ ರಸ್ತೆಯಲ್ಲಿ ನಡೆದಿದೆ.

ಕೆಟಿಎಂ ಡ್ಯೂಕ್ ಬೈಕ್‌ ನಿಯಂತ್ರಣಕ್ಕೆ ಬಾರದೆ ರಸ್ತೆ ಡಿವೈಡರ್‌ ಹಾಗೂ ಮರಕ್ಕೆ ಗುದ್ದಿದ ಪರಿಣಾಮ ಬೈಕ್‌ ಸಾವರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ನಗರದ ಎಂ ಎಸ್ ರಾಮಯ್ಯ ಕಾಲೇಜು ಮುಖ್ಯ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ವಿಷ್ಣು ನಾಯ್ಡು(19), ಗುಣವಂತ ಸಾಯಿ(19) ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಎಂ ಎಸ್‌ ರಾಮಯ್ಯ ಕಾಲೇಜಿನಲ್ಲಿ ಇಂಜನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದರು.

MS Ramaiah College engineering students killed in road accident

ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳು ಹೇಳಿದ್ದಾರೆ.

ಘಟನೆ ವಿವರ : ಸಂಜಯ್ ನಗರದ 80 ಅಡಿ ರಸ್ತೆಯಲ್ಲಿರುವ ಪೇಯಿಂಗ್ ಗೆಸ್ಟ್ ವಸತಿ ಗೃಹದಲ್ಲಿ ವಿಷ್ಣು ಹಾಗೂ ಗುಣವಂತ್ ನೆಲೆಸಿದ್ದರು. ಘಟನೆ ದಿನದಂದು ಯಶವಂತಪುರದಲ್ಲಿರುವ ಗೆಳೆಯನೊಬ್ಬನ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಗುಣವಂತ ಸಾಯಿ ಕೋಲಾರ ಮೂಲದವರಾಗಿದ್ದು, ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ಓದುತ್ತಿದ್ದರು. ವಿಷ್ಣು ಅವರು ನಂಜನಗೂಡು ಮೂಲದವರಾಗಿದ್ದು, ಆರ್ಕಿಟೆಕ್ಚರ್ ಇಂಜಿನಿಯಂಗ್ ವ್ಯಾಸಂಗ ಮಾಡುತ್ತಿದ್ದರು. ಮೃತರ ಶವಗಳನ್ನು ಎಂಎಸ್ ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two 19-year-old engineering students of MS Ramaiah College died in a road accident after the rider lost control of the bike and rammed into the median and a tree on New BEL Road in the early hours of Wednesday.
Please Wait while comments are loading...