ಬೆಂಗಳೂರು ರಾಜಕೀಯ : ಮಲ್ಲೇಶ್ವರಂಗೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮ?

Posted By: Gururaj
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20 : ಕರ್ನಾಟಕ ಕಾಂಗ್ರೆಸ್ 2018ರ ಚುನಾವಣೆಯಲ್ಲಿ ಪುನಃ ಅಧಿಕಾರದ ಗದ್ದುಗೆ ಏರಲು ರಣತಂತ್ರ ರೂಪಿಸುತ್ತಿದೆ. ಬೆಂಗಳೂರು ನಗರದಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬುದು ಪಕ್ಷದ ಗುರಿಯಾಗಿದೆ.

ನಗರದ ಪುರಾತನ ಬಡಾವಣೆ ಮಲ್ಲೇಶ್ವರಂನಲ್ಲಿ ಈ ಬಾರಿ ಗೆಲ್ಲಬೇಕು ಎಂದು ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ. ಆದ್ದರಿಂದ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ ಎಂ.ಆರ್.ಸೀತಾರಾಮ್ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ.

ಸಂದರ್ಶನ - ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ದೋಣಿ!

ಮೊದಲು ಕಾಂಗ್ರೆಸ್ ಪಕ್ಷಕ್ಕೆ ಮಣೆ ಹಾಕಿದ್ದ ಕ್ಷೇತ್ರದ ಜನರು ನಂತರ ಬಿಜೆಪಿ ಬೆಂಬಲಿಸಿದರು. ಕ್ಷೇತ್ರದ ಹಾಲಿ ಶಾಸಕರು ಡಾ.ಸಿ.ಎನ್.ಅಶ್ವಥ್ ನಾರಾಯಣ. 2008, 2013ರ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ. ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.

ಬಿ.ಕೆ.ಶಿವರಾಂ ಮಲ್ಲೇಶ್ವರಂ ಅಭ್ಯರ್ಥಿ

2013ರ ಚುನಾವಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಲ್ಲೇಶ್ವರಂನಿಂದ ಸ್ಪರ್ಧಿಸಿದ್ದರು. 36,543 ಮತಗಳನ್ನು ಪಡೆದು ಸೋಲು ಅನುಭವಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಕ್ಷೇತ್ರ 'ಕೈ' ತಪ್ಪಿತು. ಎಂ.ಆರ್.ಸೀತಾರಾಮ್ ಅವರು ಸಚಿವರಾದ ಮೇಲೆ ಸಿದ್ದರಾಮಯ್ಯ ಆಪ್ತರಾಗಿದ್ದಾರೆ. ಆದ್ದರಿಂದ, ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆದಿವೆ.

ಎಂ.ಆರ್.ಸೀತಾರಾಂ ಕಾಂಗ್ರೆಸ್ ಅಭ್ಯರ್ಥಿ

ಎಂ.ಆರ್.ಸೀತಾರಾಂ ಕಾಂಗ್ರೆಸ್ ಅಭ್ಯರ್ಥಿ

ಮಲ್ಲೇಶ್ವರಂ ಕ್ಷೇತ್ರದ ಎರಡು ಬಾರಿಯ ಶಾಸಕ ಎಂ.ಆರ್.ಸೀತಾರಾಂ (1999, 2004) ಅವರನ್ನು ಈ ಬಾರಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಮೂಲಕ ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಹಾಕಲು ತಂತ್ರ ರೂಪಿಸಿದೆ.

ವಿಧಾನಪರಿಷತ್ ಸದಸ್ಯರು

ವಿಧಾನಪರಿಷತ್ ಸದಸ್ಯರು

ಎರಡು ಬಾರಿ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿದ್ದ ಎಂ.ಆರ್.ಸೀತಾರಾಮ್ ಅವರು 2012ರಲ್ಲಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಅವರನ್ನು ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಮುಖ್ಯಮಂತ್ರಿಗಳ ಆಪ್ತರು ಎಂ.ಆರ್.ಸೀತಾರಾಮ್

ಮುಖ್ಯಮಂತ್ರಿಗಳ ಆಪ್ತರು ಎಂ.ಆರ್.ಸೀತಾರಾಮ್

ಎಂ.ಎಸ್.ರಾಮಯ್ಯ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಎಂ.ಆರ್.ಸೀತಾರಾಮ್ ಅವರು ಸಂಪುಟ ಪುನಾರಚನೆ ಸಮಯದಲ್ಲಿ ಸಚಿವರಾಗಿದ್ದಾರೆ. ಯೋಜನೆ, ಸಾಂಖ್ಯಿಕ, ಹಣಕಾಸು ಮತ್ತು ಅನುಷ್ಠಾನ ಖಾತೆ ಸಚಿವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರು ಎಂ.ಆರ್.ಸೀತಾರಾಮ್.

ಡಾ.ಅಶ್ವಥ್‌ ನಾರಾಯಣಗೆ ಟಿಕೆಟ್‌ ಖಚಿತ

ಡಾ.ಅಶ್ವಥ್‌ ನಾರಾಯಣಗೆ ಟಿಕೆಟ್‌ ಖಚಿತ

2008, 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆದ್ದಿರುವ ಡಾ.ಸಿ.ಎನ್.ಅಶ್ವಥ್‌ ನಾರಾಯಣ ಅವರಿಗೆ ಈ ಬಾರಿಯೂ ಟಿಕೆಟ್‌ ಖಚಿತ. ಕ್ಷೇತ್ರದಲ್ಲಿ ಅವರು ಜನಪ್ರಿಯತೆ ಹೊಂದಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುವ ಮೂಲಕ ಪ್ರಚಾರ ಆರಂಭಿಸಿದ್ದಾರೆ.

ಮಲ್ಲೇಶ್ವರಂ ಕ್ಷೇತ್ರದ ಫಲಿತಾಂಶ

ಮಲ್ಲೇಶ್ವರಂ ಕ್ಷೇತ್ರದ ಫಲಿತಾಂಶ

* 1999 : ಎಂ.ಆರ್.ಸೀತಾರಾಮ್ 39, 864 ಮತ ಪಡೆದು ಗೆದ್ದಿದ್ದರು
* 2004 : ಸೀತಾರಾಮ್ 47,029, ಡಾ.ಅಶ್ವಥ್ ನಾರಾಯಣ 37,252 ಮತ ಪಡೆದಿದ್ದರು
* 2008 : ಡಾ.ಅಶ್ವಥ್ ನಾರಾಯಣ 53, 794, ಸೀತಾರಾಮ್ 45,611 ಮತ ಪಡೆದಿದ್ದರು
* 2013 : ಡಾ.ಅಶ್ವಥ್ ನಾರಾಯಣ 57, 609, ಬಿ.ಕೆ.ಶಿವರಾಂ 36,543 ಮತ ಪಡೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Member of legislative council, Minister for Planning, Statistics, Science and Technology M.R. Seetharam may contest for Karnataka assembly elections 2018 form Malleshwaram assembly constituency, Bengaluru. BJP's Dr. Ashwath Narayan is sitting MLA of the constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ