ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಶಾಸಕ ಹ್ಯಾರಿಸ್ ಅವರೇ ನಿಮ್ಮ ಶುಭಾಶಯ ಬೇಕು ಆದರೆ ಹೀಗಲ್ಲ!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜನವರಿ 05 : ಚುನಾವಣೆಗಳೇ ಇರಲಿ ಹಬ್ಬಗಳೇ ಬರಲಿ ರಾಜಕಾರಣಿಗಳ ಫ್ಲೆಕ್ಸ್ ಮತ್ತು ಬ್ಯಾನರ್ ಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆ ತಪ್ಪಿದ್ದಲ್ಲ.

  ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ವಿರುದ್ಧ ಸಮರವನ್ನೇ ಸಾರಿದ್ದರೂ ಈ ಕಾಯಿದೆ ಜನಪ್ರತಿನಿಧಿಗಳಿಗೆ ಅನ್ವಯಿಸುದಿಲ್ಲ ಎಂಬಂತೆ ಭಾಸವಾಗುತ್ತಿದೆ. ಬೆಂಗಳೂರಿನ ಶಾಂತಿನಗರಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಕ್ರಿಸ್ ಮಸ್ ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಶುಭ ಕೋರಲು ಹಾಕಿರುವ ಫ್ಲೆಕ್ಸ್ ಟ್ರಾಫಿಕ್ ಸಿಗ್ನಲ್ ನ್ನು ಮರೆಮಾಚುವಂತೆ ತೂಗು ಹಾಕಲಾಗಿದೆ.

  ಫ್ಲೆಕ್ಸ್ ತೆರವಿಗೆ ಜ.6ರ ಗಡುವು: ಕ್ರಮ ಕೈಗೊಳ್ಳದಿದ್ದರೆ ತಲೆ ದಂಡ

  ಇದರಿಂದ ಮದರ್ ತೆರೆಸಾ ರಸ್ತೆ ಹಾಗೂ ಯಲ್ಲಗೊಂಡನಪಾಳ್ಯದಲ್ಲಿ ಅವೈಜ್ಞಾನಿಕ ಫ್ಲೆಕ್ಸ್ ಗಳಿಂದ ನಿತ್ಯ ಸಂಚರಿಸುವ ಲಕ್ಷಾಂತರ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

  ಟ್ರಾಫಿಕ್ ಪೊಲೀಸರಿಗೆ ಸಿಗ್ನಲ್ ನಲ್ಲಿರುವ ಫ್ಲೆಕ್ಸ್ ಕಾಣುತ್ತಿಲ್ಲವೇ?

  ಟ್ರಾಫಿಕ್ ಪೊಲೀಸರಿಗೆ ಸಿಗ್ನಲ್ ನಲ್ಲಿರುವ ಫ್ಲೆಕ್ಸ್ ಕಾಣುತ್ತಿಲ್ಲವೇ?

  ಟ್ರಾಫಿಕ್ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ಅಂತರದಲ್ಲಿರುವ ಈ ಸಿಗ್ನಲ್ ಗೆ ಶಾಸಕರ ಫ್ಲೆಕ್ಸ್ ಅಡ್ಡವಾಗಿದ್ದರೂ ಟ್ರಾಫಿಕ್ ಪೊಲೀಸರು ಈ ಬಗ್ಗೆ ತಲೆಕಡಸಿಕೊಂಡಿಲ್ಲ. ಇದು ಶಾಸಕ ಶಾಸಕ ಹ್ಯಾರಿಸ್ ಗೆ ಸೇತರಿದ ಫ್ಲೆಕ್ಸ್ ಆಗಿರುವುದರಿಂದಲೇ ಟ್ರಾಫಿಕ್ ಪೊಲೀಸರು ಇದನ್ನು ಮುಟ್ಟಲು ಹೆದರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

  ಬಿಬಿಎಂಪಿ ಇಂತಹ ಫ್ಲೆಕ್ಸ್ ಗಳ ವಿರುದ್ಧ ಮತ್ತೆ ಸಮರ ಸಾರುತ್ತಾ?

  ಬಿಬಿಎಂಪಿ ಇಂತಹ ಫ್ಲೆಕ್ಸ್ ಗಳ ವಿರುದ್ಧ ಮತ್ತೆ ಸಮರ ಸಾರುತ್ತಾ?

  ಟ್ರಾಫಿಕ್ ಸಿಗ್ನಲ್ ಗೆ ಅಡ್ಡವಾಗಿರುವ ಈ ಫ್ಲೆಕ್ಸ್ ನ್ನು ತೆರವುಗೊಳಿಸುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಇನ್ನುಮುಂದಾದರೂ ಟ್ರಾಫಿಕ್ ಪೊಲೀಸರು ಇಲ್ಲವೇ ಬಿಬಿಎಂಪಿ ಕ್ರಮ ಕೈಗೊಳ್ಳಬೇಕಿದೆ. ಜನಪ್ರತಿನಿಧಿಯಾಗಿರುವ ಎನ್.ಎ. ಹ್ಯಾರಿಸ್ ಕೂಡ ಸಾರ್ವಜನಿಕರ ಕಳಕಳಿಯಿಂದಾದರೂ ಇದನ್ನು ತೆರವುಗೊಳಿಸಲು ಸೂಚನೆ ನೀಡಬೇಕಿದೆ.

  ಎನ್.ಎ. ಹ್ಯಾರಿಸ್ ಮೊದಲು ಫ್ಲೆಕ್ಸ್ ಗಳ ತೆರವಿಗೆ ಸೂಚನೆ ನೀಡಿ

  ಎನ್.ಎ. ಹ್ಯಾರಿಸ್ ಮೊದಲು ಫ್ಲೆಕ್ಸ್ ಗಳ ತೆರವಿಗೆ ಸೂಚನೆ ನೀಡಿ

  ಕ್ರಿಸ್ ಮಸ್ ಹಬ್ಬ ಹಾಗೂ ಹೊಸ ವರ್ಷಾಚರಣೆ ಮುಗಿದು ವಾರಗಳೇ ಕಳೆಯುತ್ತಾ ಬಂದಿದ್ದರೂ ಇನ್ನು ಇಂತಹ ಬ್ಯಾನರ್ ಹಾಗೂ ಫ್ಲೆಕ್ಸ್ ಗಳು ಬೇಕೆ ಎಂಬ ನೈತಿಕ ಪ್ರಶ್ನೆಯನ್ನು ಶಾಸಕ ಹ್ಯಾರಿಸ್ ಕೇಳಿಕೊಳ್ಳಬೇಕಿದೆ. ಈ ಹಿಂದೆ ಲಕ್ಷಾಂತರ ಜನರು ಫ್ಲೆಕ್ಸ್ ನಿಂದ ತೊಂದರೆ ಅನುಭವಿಸಿದ್ದರೂ ಯಾರೂ ಕೂಡ ಧ್ವನಿ ಎತ್ತಿಲ್ಲ.

  ಸಾರ್ವಜನಿಕರು ಧ್ವನಿ ಎತ್ತಿಲ್ಲ ಎಂದ ಮಾತ್ರಕ್ಕೆ ನಿಮ್ಮ ನಡೆ ಉಚಿತವೇ:

  ಸಾರ್ವಜನಿಕರು ಧ್ವನಿ ಎತ್ತಿಲ್ಲ ಎಂದ ಮಾತ್ರಕ್ಕೆ ನಿಮ್ಮ ನಡೆ ಉಚಿತವೇ:

  ಆದರೆ ಸಾರ್ವಜನಿಕರು ಧ್ವನಿ ಎತ್ತಿಲ್ಲ ಎಂದ ಮಾತ್ರಕ್ಕೆ ಶಾಸಕರು ಈ ರೀತಿ ನಡೆದುಕೊಳ್ಳುವುದು ಉಚಿತವೇ ಎಂಬುದನ್ನು ಅವರೇ ಪ್ರಶ್ನಿಸಿಕೊಳ್ಳಬೇಕಿದೆ. ಸದ್ಯಕ್ಕೆ ಸಾರ್ವಜನಿಕರು ಪ್ರಶ್ನಿಸದಿದ್ದರೂ ಸಮಯ ಬಂದಾಗ ಉತ್ತರ ನೀಡುವುದು ಸಾರ್ವಜನಿಕರಿಗೆ ತಿಳಿದ ವಿಷಯವೇ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Mr NA Harris, your wishes needed to general public not by flexes which hindering traffic signal in the heart of the city. This is urged by the Bengalurians regarding flex installed by MLA Harris.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more