ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಶಾಲೆ ಮಕ್ಕಳಿಗೆ ಎಂಫಸಿಸ್ ನಿಂದ ಡಿಜಿಟಲ್ ಕಲಿಕಾ ವ್ಯವಸ್ಥೆ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 4, 2016: ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಪರಿಹಾರ ಪೂರೈಕೆದಾರ ಸಂಸ್ಥೆಯಾಗಿರುವ ಎಂಫಸಿಸ್ ಅರಿವು-ದಿಶಾ ಎಂಬ ಯೋಜನೆಯ ಎರಡನೇ ವರ್ಷದ ವಿನೂತನ ಉಪಕ್ರಮಗಳನ್ನು ಪ್ರಕಟಿಸಿದೆ.

ಕರ್ನಾಟಕದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ವ್ಯವಸ್ಥೆ ಸಿಗುವಂತೆ ಮಾಡುವ ಯೋಜನೆಯೇ ಅರಿವು-ದಿಶಾ. ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯಾಗಿರುವ ಹೆಡ್‍ಸ್ಟ್ರೀಂ ಸಂಸ್ಥೆ ಈ ಯೋಜನೆಯ ನೇತೃತ್ವ ವಹಿಸಿದೆ. ಇದೊಂದು ಆವಿಷ್ಕಾರಕ ಕಾರ್ಯಕ್ರಮವಾಗಿದ್ದು ಸರ್ಕಾರಿ ಶಾಲೆಗಳ ಮಕ್ಕಳೂ ಸಹ ವಿಭಿನ್ನ ರೀತಿಯಲ್ಲಿ ಶೈಕ್ಷಣಿಕ ಜೀವನವನ್ನು ಕಾಣುವಂತೆ ಮಾಡುವ ಉದ್ದೇಶ ಇದರದ್ದಾಗಿದೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಧಾರಿತ ಡಿಜಿಟಲ್ ಲರ್ನಿಂಗ್ ಆಪ್, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಮತ್ತು ಕಾಮಿಕ್ ಬುಕ್, ಅರಿವು-ಮಿಸ್ಡ್ ಕಾಲ್ ಸೇವೆ, ಶಾಲೆಗಳ ಆಡಳಿತ ಮಂಡಳಿಗಳಿಗೆ ಟ್ಯಾಬ್ಲೆಟ್ ಗಳ ವಿತರಣೆಯಂತಹ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅರಿವು-ದಿಶಾ ಯೋಜನೆಗೆ ಚಾಲನೆ ನೀಡಲಾಯಿತು.

ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ 35 ಸರ್ಕಾರಿ ಶಾಲೆಗಳ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕ ವರ್ಗದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಒಂದು ಸಮಯದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂಜರಿಯುತ್ತಿದ್ದರು.

ಆದರೆ, ಅರಿವು-ದಿಶಾ ಕಾರ್ಯಕ್ರಮ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನೇ ಬದಲಾಯಿಸಿದೆ. ಆಟೋಟ ಮತ್ತು ಡಿಜಿಟಲ್ ಲರ್ನಿಂಗ್ ಮೂಲಕ ಈ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದಾರೆ ಮತ್ತು ಕೌಶಲ್ಯಗಳನ್ನೂ ಕಲಿತುಕೊಂಡಿದ್ದಾರೆ.

 Mphasis gives impetus to improved learning outcomes in government schools

ಅರಿವು-ದಿಶಾ ಬಗ್ಗೆ:

ಅರಿವು- ಮೂರು ವರ್ಷದ ಇಂಗ್ಲೀಷ್ ಕಲಿಕೆ ಮತ್ತು ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮವಾಗಿದೆ. ಇಂಗ್ಲೀಷ್ ನಲ್ಲಿ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಕಲಿಸುವುದು ಹಾಗೂ ಡಿಜಿಟಲ್ ಸಾಕ್ಷರರನ್ನಾಗಿ ಮಾಡಿ ಅವರ ಜೀವನ ಕೌಶಲ್ಯದ ಬಗ್ಗೆ ಹೇಳಿಕೊಡುವುದು ಈ ಕಾರ್ಯಕ್ರಮದ ಆದ್ಯತೆಯಾಗಿದೆ.

ದಿಶಾ- 2 ವರ್ಷದ ಕಾರ್ಯಕ್ರಮವಾಗಿರುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಗೆ ಕುರಿತಾದ ಮಾರ್ಗದರ್ಶನ ಮತ್ತು ಕೌಶಲ್ಯಾಧಾರಿತ ಕಾರ್ಯಕ್ರಮಗಳ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ಇದರಲ್ಲಿ ವೃತ್ತಿಪರ ಮತ್ತು ಶೈಕ್ಷಣಿಕ ಅವಕಾಶಗಳಿಗೆ ಆದ್ಯತೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ವೃತ್ತಿಪರ ಜೀವನ ಆರಂಭಿಸುವುದರ ಬಗ್ಗೆ ಮನನ ಮಾಡಿಕೊಡಲಾಗುತ್ತದೆ.

ಅರಿವು-ದಿಶಾ ಡಿಜಿಟಲ್ ಲರ್ನಿಂಗ್ ಆಪ್

ಆಟ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಕಲಿಯುವ ಆ್ಯಪ್ ಇದು. ಅರಿವು-ದಿಶಾ ಕಾರ್ಯಕ್ರಮದ ಪ್ರಮುಖ ಯುಎಸ್‍ಪಿ ಇದು. ಟ್ಯಾಬ್ಲೆಟ್ ಆಧಾರಿತ ಕಲಿಕಾ ವ್ಯವಸ್ಥೆ ಇದಾಗಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮತ್ತು ಕುತೂಹಲವನ್ನು ಮೂಡಿಸಲಿದೆ. ಲರ್ನಿಂಗ್ ಥ್ರೂ ಪ್ಲೇ ಮೂಲಕ ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಕಲಿಯಲು ನೆರವಾಗುತ್ತದೆ. ಈ ಮೂಲಕ ಮಕ್ಕಳನ್ನು ಡಿಜಿಟಲೀಕರಣದ ಸಾಕ್ಷರರನ್ನಾಗಿ ಮಾಡಬಹುದಾಗಿದೆ.

ಅರಿವು-ದಿಶಾ ಆಕ್ಟಿವಿಟಿ ಕಂಟೆಂಟ್:

ಅರಿವು- ಮೂರು ವರ್ಷದ ಇಂಗ್ಲೀಷ್ ಕಲಿಕೆ ಮತ್ತು ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮವಾಗಿದೆ. ಇಂಗ್ಲೀಷ್‍ನಲ್ಲಿ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಕಲಿಸುವುದು ಹಾಗೂ ಡಿಜಿಟಲ್ ಸಾಕ್ಷರರನ್ನಾಗಿ ಮಾಡಿ ಅವರ ಜೀವನ ಕೌಶಲ್ಯದ ಬಗ್ಗೆ ಹೇಳಿಕೊಡುವುದು ಈ ಕಾರ್ಯಕ್ರಮದ ಆದ್ಯತೆಯಾಗಿದೆ.

ದಿಶಾ- 2 ವರ್ಷದ ಕಾರ್ಯಕ್ರಮವಾಗಿರುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಗೆ ಕುರಿತಾದ ಮಾರ್ಗದರ್ಶನ ಮತ್ತು ಕೌಶಲ್ಯಾಧಾರಿತ ಕಾರ್ಯಕ್ರಮಗಳ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ಇದರಲ್ಲಿ ವೃತ್ತಿಪರ ಮತ್ತು ಶೈಕ್ಷಣಿಕ ಅವಕಾಶಗಳಿಗೆ ಆದ್ಯತೆ ನೀಡಲಾಗುತ್ತದೆ.

ಅರಿವು ಮಿಸ್ಡ್ ಕಾಲ್ ಸರ್ವೀಸ್:

ವಿದ್ಯಾರ್ಥಿಗಳು ಶಾಲೆಯ ಸಮಯದ ನಂತರವೂ ಈ ಕಾರ್ಯಕ್ರಮದ ಜತೆ ಸಂಪರ್ಕದಲ್ಲಿರಲು ಬಯಸುತ್ತಾರೆ. ಈ ಶಿಕ್ಷಣ ಹೇಳಿಕೊಡುವವರೊಂದಿಗೆ ಮಾತನಾಡಿ ತಮ್ಮಲ್ಲಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಬಯಸುತ್ತಾರೆ. ಇವರ ನೆರವಿಗಾಗಿಯೇ ಅರಿವು ಮಿಸ್ಡ್ ಕಾಲ್ ಸರ್ವೀಸ್ ಅನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು 9243777966, 080-39591098 ಸಂಖ್ಯೆಗಳಿಗೆ ಮಿಸ್ಡ್ ಕಾಲ್ ಕೊಟ್ಟರೆ ಮಾರ್ಗದರ್ಶಕರಿಂದ ವಾಪಸ್ ಕರೆ ಬರುತ್ತದೆ. ಅವರೊಂದಿಗೆ ಚರ್ಚಿಸಿ ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

English summary
Arivu–Disha by Headstreams, a not for profit organization based in Bengaluru, supported by Mphasis is an innovative programme conceptualized to make a difference in the lives of students in Government schools in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X