RERA ಕಾಯ್ದೆ ಲೋಪಗಳ ಬಗ್ಗೆ ಸಿಎಂಗೆ ಸಂಸದ ರಾಜೀವ್ ಚಂದ್ರಶೇಖರ್ ಪತ್ರ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10: ರಾಜ್ಯ ಸರ್ಕಾರ ಜಾರಿಗೊಳಿಸಿರುವ ರಿಯಲ್ ಎಸ್ಟೇಟ್ ಕಾಯ್ದೆಯಲ್ಲಿ (RERA - ರೆರಾ) ಹಲವಾರು ಲೋಪ ದೋಷಗಳಿದ್ದು, ಅವುಗಳು ಈ ಕಾಯ್ದೆಯ ಲಾಭವು ಗ್ರಾಹಕರಿಗೆ ಸಿಗದಂತೆ ನಿರ್ಬಂಧಿಸುವಂತಾಗಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಕೆರೆಗಳನ್ನು ಕಾಪಾಡಿ ಎಂದು ಸಿಎಂಗೆ ಕಿಚ್ಚ ಸುದೀಪ್ ಪತ್ರ

ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಎಂ. ಕೃಷ್ಣಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕಾಯ್ದೆಯಲ್ಲಿನ ಲೋಪದೋಷಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

MP Rajiv Chandrasekhar writes to Siddaramaiah on the dilutions of RERA rules in Karnataka

ಹೊಸದಾಗಿ ಬಂದಿರುವ ಈ ರೆರಾ ನಿಯಮಗಳನ್ವಯ, ಈಗಾಗಲೇ ಚಾಲ್ತಿಯಲ್ಲಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಕಾಯ್ದೆಯ ವ್ಯಾಪ್ತಿಯ ಹೊರಗಿಡುವ ಪ್ರಯತ್ನ ಮಾಡಲಾಗಿದೆ. ರಿಯಲ್ ಎಸ್ಟೇಟ್ ಉದ್ದಿಮೆದಾರರ ಮೇಲೆ ಹಿಡಿತ ಸಾಧಿಸಲು ಸರ್ಕಾರಕ್ಕೆ ಸಾಧ್ಯವಿಲ್ಲದಂಥ ನಿಯಮಗಳು ಇವಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯ ದಿವಸ್ ಅಂಗವಾಗಿ ಸಂಸದ ರಾಜೀವ್ ಚಂದ್ರಶೇಖರ್ ವಿಶೇಷ ಲೇಖನ

ಸಾಮಾನ್ಯವಾಗಿ ಹೊಸ ಕಾಯ್ದೆ, ಕಾನೂನುಗಳನ್ನು ಮಾಡುವುದು, ಅಂಕೆಯಿಲ್ಲದೆ ಸಾಗುವ ಇಂಥ ವಾಣಿಜ್ಯ ವ್ಯವಹಾರಗಳನ್ನು ಸರ್ಕಾರದ, ಕಾನೂನಿನ ಸುಪರ್ದಿಗೆ ತರುವ ಉದ್ದೇಶವನ್ನು ಹೊಂದಿರುತ್ತದೆ. ಆದರೆ, ರೆರಾ ಕಾಯ್ದೆಯಡಿ ರೂಪಿಸಲಾಗಿರುವ ಯಾವುದೇ ನಿಯಮಗಳು ಇಂಥ ಉದ್ದೇಶಗಳಿಗೆ ತದ್ವಿರುದ್ಧವಾಗಿವೆ ಎಂದು ರಾಜೀವ್ ಚಂದ್ರಶೇಖರ್ ಅವರು ಪತ್ರದಲ್ಲಿ ಹೇಳಿದ್ದಾರೆ.

ಕಾಯ್ದೆಯು ಸ್ಪಷ್ಟವಾಗಿ ಅಧಿಕಾರ ದುರುಪಯೋಗವನ್ನು ಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MP Rajiv Chandrasekhar writes to Chief Minister Siddaramaiah and Housing Minister M. Krishnappa, on the dilutions in RERA (Real Estate Regulatory Authority rules).
Please Wait while comments are loading...