• search
For bengaluru Updates
Allow Notification  

  ಡಿಜಿಟಲ್ ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಸಂಸದ ರಾಜೀವ್ ಆಗ್ರಹ

  |

  ಬೆಂಗಳೂರು, ಡಿಸೆಂಬರ್ 24: ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪತ್ರ ಬರೆದು, ಡಿಜಿಟಲ್ ಮೂಲಕ ಹೆಚ್ಚುತ್ತಿರುವ ‌ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣಕ್ಕೆ ಮನವಿ ಮಾಡಿದ್ದಾರೆ. ಜತೆಗೆ ಮಕ್ಕಳ ಸುರಕ್ಷತೆಗೆ ಮಾರಕವಾದ ಮೊಬೈಲ್ ಅಪ್ಲಿಕೇಶನ್ ಗಳ ಸ್ಥಗಿತಕ್ಕೆ ಕೇಳಿಕೊಂಡಿದ್ದಾರೆ.

  ಮಾಧ್ಯಮದ ವರದಿಯೊಂದನ್ನು ಉದಾಹರಣೆಯಾಗಿ ನೀಡಿರುವ ಅವರು, ಸಣ್ಣ ಅವಧಿಯ ವಿಡಿಯೋಗಳನ್ನು ಒಳಗೊಂಡ ಮೊಬೈಲ್ ಅಪ್ಲಿಕೇಷನ್ ಗಳು ಹೆಚ್ಚುತ್ತಿವೆ. ಗೂಗಲ್ ಪ್ಲೇ ಅಥವಾ ಇತರೆ ಅಪ್ಲಿಕೇಷನ್ ಸ್ಟೋರ್ ಮೂಲಕ ಡೌನ್ ಲೋಡ್ ಕೂಡ ಸುಲಭವಾಗಿದೆ. ಕ್ವಾಯ್, ಕ್ಲಿಪ್, ಟಿಕ್ ಟಾಕ್, ನ್ಯೂಸ್ ಡಾಗ್, ಲೈವ್ ಮಿ ಹಾಗೂ ಹಲೋದಂಥ ಅಪ್ಲಿಕೇಷನ್ ಗಳು ಮಕ್ಕಳಿಗೆ ಮಾರಕವಾಗಿವೆ ಎಂದಿದ್ದಾರೆ.

  ಬನ್ನೇರುಘಟ್ಟದಲ್ಲಿ ಗಣಿಗಾರಿಕೆ ನಿರ್ಬಂಧಿಸುವಂತೆ ರಾಜೀವ್ ಮನವಿ

  ಮಕ್ಕಳಲ್ಲಿ ಅಶ್ಲೀಲತೆಯನ್ನು ಈ ಅಪ್ಲಿಕೇಷನ್ ಗಳು ಬಿತ್ತುತ್ತಿವೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಇಂಟರ್ ಪೋಲ್ ಪ್ರಕಾರ ಕಳೆದ ವರ್ಷವೊಂದರಲ್ಲೇ ಭಾರತದಲ್ಲಿ ಆನ್ ಲೈನ್ ಮೂಲಕ ಇಪ್ಪತ್ನಾಲ್ಕು ಲಕ್ಷ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಅಮೆರಿಕ ಸಂಸ್ಥೆಯೊಂದರ ಪ್ರಕಾರ ಇಪ್ಪತ್ನಾಲ್ಕು ಲಕ್ಷ ಮಕ್ಕಳು ನಾಪತ್ತೆಯಾಗಿದ್ದಾರೆ ಮತ್ತು ಅವರ ಮೇಲೆ ದೌರ್ಜನ್ಯ ಆಗಿದೆ. ಇದು ವರದಿ ಆಗಿರುವ ಲೆಕ್ಕಾಚಾರ ಮಾತ್ರ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

  MP Rajeev Chandrasekhar urges to take action to prevent child abuse in India

  ಡಿಜಿಟಲ್ ಮೂಲಕ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ವಿಚಾರವಾಗಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಮಕ್ಕಳಿಗೆ ಸೂಕ್ತ ಅಲ್ಲದ ಮಾಹಿತಿ ಒಳಗೊಂಡ ಅಪ್ಲಿಕೇಷನ್ ಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಇತರ ಕಾನೂನು ನಡಾವಳಿ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಬೆಂಗಳೂರು ಸುದ್ದಿಗಳುView All

  English summary
  Rajya Sabha MP Rajeev Chandrasekhar wrote to the Honourable Minister for Law & Justice, Electronics & Information Technology, Sh. R S Prasad urging his intervention to curb the growing digital sexual abuse of children as well as to regulate and shut down Mobile apps which threatens the safety of children.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more