ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂದೀಪ್ ಉನ್ನಿಕೃಷ್ಣನ್ ಸ್ಮಾರಕಫಲಕ ಧ್ವಂಸ: ಸಂಸದ ರಾಜೀವ್ ಆಕ್ರೋಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಯಲಹಂಕದಲ್ಲಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸ್ಮಾರಕ ಫಲಕವನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ, ಅದನ್ನು ಕೂಡಲೇ ಮರುಸ್ಥಾಪನೆಗೊಳಿಸಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರನ್ನು ಆಗ್ರಹಿಸಿದ್ದಾರೆ.

ಸುಪ್ರೀಂ ತೀರ್ಪು ಖಾಸಗಿತನದ ಹಕ್ಕಿನ ಕಡೆಗೆ ಮಹತ್ವದ ಹೆಜ್ಜೆ: ರಾಜೀವ್ಸುಪ್ರೀಂ ತೀರ್ಪು ಖಾಸಗಿತನದ ಹಕ್ಕಿನ ಕಡೆಗೆ ಮಹತ್ವದ ಹೆಜ್ಜೆ: ರಾಜೀವ್

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಎಂಪಿ ರಾಜೀವ್ ಚಂದ್ರಶೇಖರ್ ಮುಂಬೈ ದಾಳಿ ವೇಳೆ ದೇಶಕ್ಕಾಗಿ ಪ್ರಾಣತೆತ್ತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ತ್ಯಾಗ, ಬಲಿದಾನದ ದಿನಕ್ಕೆ ಇನ್ನು ಕೆಲವೇ ದಿನಗಳು ಇರುವ ಸಂದರ್ಭದಲ್ಲಿ ಇಂತಹ ದುರ್ಘಟನೆ ನಡೆದಿರುವುದು ವಿಷಾದಕರ.

ಸಂದೀಪ್ ಅವರಿಗೆ ಅಪಮಾನ ಮಾಡುವಂತಹ ಕೃತ್ಯ ಎಸಗಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಆದ್ದರಿಂದ ಕೂಡಲೇ ಯಲಹಂಕದಲ್ಲಿರುವ ಸಂದೀಪ್ ನಾಮಫಲಕವನ್ನು ಮರು ಸ್ಥಾಪನೆಗೊಳಿಸಿಸಿ ದೇಶಭಕ್ತರಿಗೆ ಆಗಿರುವ ನೋವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಂತೆ ಸಿಎಂಗೆ ರಾಜೀವ್ ಚಂದ್ರಶೇಖರ್ ಮನವಿಮಕ್ಕಳ ಮೇಲಿನ ದೌರ್ಜನ್ಯ ತಡೆಯುವಂತೆ ಸಿಎಂಗೆ ರಾಜೀವ್ ಚಂದ್ರಶೇಖರ್ ಮನವಿ

MP Rajeev Chandrasekhar urges state govt reinstall Maj. Sandeep name board

ಯಲಹಂಕದ ರಸ್ತೆಯೊಂದರಲ್ಲಿ ಮೇಜರ್ ಸಂದೀಪ್ ಅವರ ಸ್ಮಾರಕ ಫಲಕ ಗ್ರಾನೈಟ್ ನಿಂದ ನಿರ್ಮಿಸಿದ ಕಟ್ಟೆಯೊಂದರಲ್ಲಿ ಅಳವಡಿಸಲಾಗಿತ್ತು. ರಾತ್ರೋರಾತ್ರಿ ದುಷ್ಕರ್ಮಿಗಳು ಗ್ರಾನೈಟ್ ನಾಮಫಲಕ ಹಾಗೂ ಇಟ್ಟಿಗೆಯಿಂದ ನಿರ್ಮಿಸಿದ ಕಟ್ಟೆಯನ್ನು ಒಡೆದುಹಾಕಿ ಸಂಪೂರ್ಣ ನೆಲಸಮಗೊಳಿಸಿದ್ದಾರೆ.

ಇಂದಿರಾನಗರ ನಾಗರಿಕರ ಪರ ರಾಜೀವ್ ಚಂದ್ರಶೇಖರ್, ಬಿಡಿಎ ವಿರುದ್ಧ ಕಿಡಿಇಂದಿರಾನಗರ ನಾಗರಿಕರ ಪರ ರಾಜೀವ್ ಚಂದ್ರಶೇಖರ್, ಬಿಡಿಎ ವಿರುದ್ಧ ಕಿಡಿ

ಈ ಘಟನೆ ಕುರಿತು ಸೋಲ್ಜರಿಂಗ್ ಎಂಬ ಮಾಜಿ ಸೇನಾಧಿಕಾರಿಗಳ ವೇದಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಆ ಮಾಹಿತಿಯನ್ನು ರೀಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್ ಸರ್ಕಾರ ಕೂಡಲೇ ಪುನರ್ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ.

English summary
Rajya sabha member Rajeev Chandrasekhar has urged the state government to reinstall the granite name board in Yelahanka which was vandalized and smashed by the unknown miscreants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X