ಪಾಕ್ ವಿರುದ್ಧದ ಮಸೂದೆಗೆ ಸಂಸದರ ಬೆಂಬಲ ಕೋರಿದ ರಾಜೀವ್ ಚಂದ್ರಶೇಖರ್

Posted By:
Subscribe to Oneindia Kannada

ಬೆಂಗಳೂರು, ಜುಲೈ 21: ಪಾಕಿಸ್ತಾನ ದೇಶವನ್ನು ಉಗ್ರ ರಾಷ್ಟ್ರವೆಂದು ಘೋಷಿಸಬೇಕೆಂದುಆಗ್ರಹಿಸಿ ಇದೇ ತಿಂಗಳ 28ರಂದು ಸಂಸತ್ತಿನಲ್ಲಿ ತಾವು ಮಂಡಿಸಲಿರುವ ಖಾಸಗಿ ಮಸೂದೆಗೆ ಬೆಂಬಲ ನೀಡಬೇಕೆಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು, ರಾಜ್ಯಸಭೆಯ ಎಲ್ಲಾ ಸದಸ್ಯರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ಪಾಕಿಸ್ತಾನ ದೇಶವನ್ನು ಉಗ್ರ ಪೋಷಕ ರಾಷ್ಟ್ರವೆಂದು ಘೋಷಿಸಲು ಇದು ಸಕಾಲಎಂದು ಒತ್ತಿ ಹೇಳಿರುವ ಅವರು, ದೇಶದ ಸುರಕ್ಷತೆಯ ದೃಷ್ಟಿಯಲ್ಲಿ ಎಲ್ಲಾ ಸಂಸದರೂ ಒಗ್ಗಟ್ಟಾಗಿ ದನಿಯೆತ್ತಬೇಕೆಂದು ಮನವಿ ಮಾಡಿದ್ದಾರೆ.

MP Rajeev Chandrasekhar requests all Rajya Sabha MPs to support his private bill against Pakistan

ಇದೇ ವರ್ಷ, ಇದೇ ಉದ್ದೇಶದೊಂದಿಗೆ ಫೆಬ್ರವರಿ 3 ಹಾಗೂ ಮಾರ್ಚ್ 10ರಂದು ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಯಲ್ಲಿ ಎರಡು ಬಾರಿ ಮಸೂದೆ ಮಂಡಿಸಿದ್ದರು. ಪಾಕಿಸ್ತಾನ ರಾಷ್ಟ್ರವನ್ನು ಉಗ್ರವಾದಿ ರಾಷ್ಟ್ರವೆಂದು ಘೋಷಿಸಲು ವಿಶೇಷ ಠರಾವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದರು.

MP Rajeev Chandrasekhar requests all Rajya Sabha MPs to support his private bill against Pakistan

ಇದಕ್ಕೆ ಉತ್ತರ ನೀಡಿದ್ದ ಕೇಂದ್ರ ಸರ್ಕಾರ, ಪಾಕಿಸ್ತಾನವನ್ನು ಉಗ್ರವಾದ ಪೋಷಕ ರಾಷ್ಟ್ರವೆಂದು ಘೋಷಿಸಲು ಯಾವುದೇ ಠರಾವಿನ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡಿದ್ದರಿಂದಾಗಿ, ಚಂದ್ರಶೇಖರ್ ಅವರು ಆ ಮಸೂದೆಗಳನ್ನು ಹಿಂಪಡೆದಿದ್ದರು.

MP Rajeev Chandrasekhar requests all Rajya Sabha MPs to support his private bill against Pakistan

ಈ ವಿಚಾರವನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಈ ಹಿಂದೆ ತಮ್ಮ ಖಾಸಗಿ ಮಸೂದೆಯನ್ನು ಮಂಡಿಸಿದಾಗ ನಡೆದ ಚರ್ಚೆಗಳಲ್ಲಿ ತಮ್ಮನ್ನು ಬೆಂಬಲಿಸಿದಂತೆ, ಜುಲೈ 28ರಂದು ತಾವು ಎರಡನೇ ಬಾರಿಗೆ ಮಂಡಿಸಲಿರುವ ಮಸೂದೆಗೂ ಬೆಂಬಲ ನೀಡಬೇಕೆಂದು ಕೋರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rajya Sabha MP Rajeev Chandrasekhar will be presenting his private bill in Rajya Sabha on 28th July, 2017. This bill aims to demand the government to declare Pakistan a terror state. Hece, he wrote a letter to all Rajya Sabha Members seeking their support to his bill.
Please Wait while comments are loading...