ಬೆಂಗಳೂರು ಯಾತ್ರಾರ್ಥಿಗೆ ನೆರವಿನ ಹಸ್ತ ಚಾಚಿದ ಅನಂತ್‌ ಕುಮಾರ್

Posted By:
Subscribe to Oneindia Kannada

ಬೆಂಗಳೂರು, ಜೂನ್ 01 : ಉತ್ತರಾಖಂಡ್‌ನಲ್ಲಿ ನಡೆದ ಮೇಘಸ್ಫೋಟದಲ್ಲಿ ಗಾಯಗೊಂಡಿದ್ದ ಬೆಂಗಳೂರಿನ ಯಾತ್ರಾರ್ಥಿಗೆ ದೆಹಲಿಯಿಂದ ಬೆಂಗಳೂರಿಗೆ ಮರಳಲು ಸಂಸದ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ನೆರವಿನ ಹಸ್ತ ಚಾಚಿದ್ದಾರೆ.

ಮೇ 29ರಂದು ನಡೆದ ಮೇಘಸ್ಫೋಟದಲ್ಲಿ ಗಾಯಗೊಂಡಿದ್ದ ಬೆಂಗಳೂರಿನ ವಿಜಯನಗರದ ನಿವಾಸಿ ಅನ್ನಪೂರ್ಣ ಅವರು, ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲು ಅನಂತ್ ಕುಮಾರ್ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. [ಮೇಘಸ್ಪೋಟದಲ್ಲಿ ಸಿಲುಕಿದ್ದ ಕನ್ನಡಿಗರು ಪಾರು]

annapurna muniraju

ಬೆಂಗಳೂರಿನ ವಿಜಯನಗರದ 50 ಯಾತ್ರಾರ್ಥಿಗಳ ಗುಂಪು ಮೇ 16ರಂದು ಕೇದರನಾಥ ತೀರ್ಥಯಾತ್ರೆಗಾಗಿ ತೆರಳಿತ್ತು. ಈ ಗುಂಪಿನಲ್ಲಿ ಅನ್ನಪೂರ್ಣ ಮುನಿರಾಜು ಅವರು ಇದ್ದರು. ಯಾತ್ರೆ ಮುಗಿಸಿಕೊಂಡು ಮೇ 29ರಂದು ವಾಪಸ್ ಆಗುವಾಗ ಉತ್ತರಾಖಂಡ್‌ನಲ್ಲಿ ಮೇಘಸ್ಫೋಟ ಸಂಭವಿಸಿತ್ತು. [ದಲಿತ ಮಹಿಳೆಗೆ ಆರ್ಥಿಕ ಸಹಾಯ ಮಾಡಿದ ಕುಮಾರಸ್ವಾಮಿ]

ಈ ಸಮಯದಲ್ಲಿ ಉಂಟಾದ ಭೂ ಕುಸಿತದಲ್ಲಿ ಬಂಡೆ ಉರುಳಿ ಬಿದ್ದು, ಅನ್ನಪೂರ್ಣ ಮುನಿರಾಜು ಅವರ ಎಡಗೈ ಮತ್ತು ಎಡಗಾಲಿಗೆ ತೀವ್ರವಾದ ಪೆಟ್ಟಾಗಿತ್ತು. ಅವರನ್ನು ಅಲ್ಲಿಂದ ರಕ್ಷಿಸಿ ದೆಹಲಿಯಲ್ಲಿರುವ ಕರ್ನಾಟಕ ಭವನಕ್ಕೆ ಕರೆತರಲಾಗಿತ್ತು.

-
-
-
-

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕರ್ನಾಟಕ ಭವನದಲ್ಲಿ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಸಕಲ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅನ್ನಪೂರ್ಣ ಅವರು ಮನೆಗೆ ತೆರಳುವ ತವಕದಲ್ಲಿದ್ದರು. ಎಡಗೈ ಹಾಗೂ ಎಡಗಾಲಿಗೆ ತೀವ್ರಪೆಟ್ಟಾಗಿದ್ದರಿಂದ ಅವರು ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಿರಲಿಲ್ಲ. ದುಬಾರಿ ಹಣ ಕೊಟ್ಟು ವಿಮಾನದಲ್ಲಿಯೂ ಪ್ರಯಾಣಿಸುವ ಶಕ್ತಿ ಹೊಂದಿರಲಿಲ್ಲ.

ಇದನ್ನು ಅರಿತ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ಅನ್ನಪೂರ್ಣ ಅವರಿಗೆ ಉಚಿತ ಟಿಕೆಟ್‌ ಕೊಡಿಸಿ, ನೆರವಿನ ಹಸ್ತ ಚಾಚಿದರು. ಬೆಂಗಳೂರಿಗೆ ಪ್ರಯಾಣ ಮಾಡಲು ಅನುಕೂಲ ಮಾಡಿಕೊಟ್ಟರು.

ಬುಧವಾರ ಮಧ್ಯಾಹ್ನ 12.30ಕ್ಕೆ ಇಂಡಿಗೋ 6ಇ 147 ವಿಮಾನದ ಮೂಲಕ ಅನ್ನಪೂರ್ಣ ಮುನಿರಾಜು ಅವರು ದೆಹಲಿಯಿಂದ ಹೊರಟಿದ್ದು, ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru south MP and Minister of Chemicals and Fertilizers Ananth Kumar extended financial support to Annapurna Muniraju to reach Bengaluru from New Delhi through flight. Annapurna, one of the 50 pilgrims to visit Kedarnath, was badly injured in Uttarakhand cloudburst on May 29, 2016.
Please Wait while comments are loading...