ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬೊಂಬಾಟ್ ಬಂಗಾರಪೇಟೆ ಪಾನಿಪುರಿ ಟೇಸ್ಟ್ ಮಾಡಿ

ನೀರಿನಂತೆ ಕಾಣುವ ಪಾನಿ, ಗರಿಗರಿಯಾದ ಪುರಿ, ಹಬೆಯಾಡುವ ಮಸಾಲೆ-ಬಟಾಣಿ, ನಾಲಗೆ ಮತ್ತಷ್ಟು ಬೇಕು ಎಂದು ಹಪಹಪಿಸುವಂತೆ ಮಾಡುವ ಖಾರ... ತರಹೇವಾರಿ ಬಂಗಾರಪೇಟೆ ಮಸಾಲೆ ಪುರಿ, ಪಾನಿಪುರಿ ತಿನ್ನಲು ಹನುಮಂತನಗರದ ಈ ಅಂಗಡಿಗೆ ಭೇಟಿ ಕೊಡಲೇಬೇಕು

By ಅನಿಲ್
|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಶುಕ್ರವಾರ ರಾತ್ರಿ ತರಕಾರಿ ತರಬೇಕು ಎಂದ ಹೆಂಡತಿಯನ್ನು ಕರೆದುಕೊಂಡು ಹನುಮಂತನಗರ ಪಿಇಎಸ್ ಕಾಲೇಜು ಬಳಿ ಹೋಗ್ತಾ ಇದ್ದೆ. ಅಲ್ಲಿ ಅಮ್ಮ ಪೇಸ್ಟ್ರೀಸ್ ಅಂತ ಬೇಕರಿಯೊಂದಿದೆ. ಅದರ ಪಕ್ಕ ಜನ ಕಿಕ್ಕಿರಿದಿದ್ದರು. ಅದೇನು ಆಯ್ತು ಅಂತ ತುಂಬ ಕುತೂಹಲವಾಗಿ, ಪಕ್ಕದಲ್ಲಿ ಗಾಡಿ ನಿಲ್ಲಿಸಿ ಹೋಗಿ ನೋಡಿದ್ವಿ.

ದಪ್ಪ ಅಕ್ಷರಗಳಲ್ಲಿ ಬಂಗಾರಪೇಟೆ ಪಾನಿಪುರಿ ಎಂದು ಕಾಣಿಸಿತು. ಮೊದಲೇ ಒಂದು ರಾಶಿ ಜನರಿದ್ದರು. ಜೊತೆಗೆ ನನಗಂತೂ ಹೊಸದು ಎನಿಸಿದ್ದು 'ಬಂಗಾರಪೇಟೆ ಪಾನಿಪುರಿ' ಎಂಬ ಬಿಳಿ ಅಕ್ಷರಗಳು. ಇರಲಿ ಎಂದುಕೊಂಡು ಪಾನಿಪುರಿ ಒಂದು ಪ್ಲೇಟ್ ಕೊಡಿ ಅಂತ ಹೇಳುವಷ್ಟರಲ್ಲಿ, ಒಬ್ಬ ಹಿರಿಯ ಹೆಂಗಸು ಫ್ಲೋಟಿಂಗ್ ಪುರಿ ಕೊಡಿ ಅಂದರು.[ಚುರುಮುರಿ ಸವಿಯುವ ಸುಖಕ್ಕೆ ಒಮ್ಮೆಯಾದರೂ ಇಲ್ಲಿ ಹೋಗ್ಬೇಕು!]

Mouthwatering Bangapet panipuri in Hanumanthnagar

ಸರಿ, ನನಗೂ ಅದೇ ಕೊಡಿ ಅಂದೆ. ಹತ್ತು-ಹದಿನೈದು ನಿಮಿಷ ಕಾದ ನಂತರ ನನ್ನ ಸರದಿ ಬಂತು. ನೀರಿನಂತೆಯೇ ಕಾಣುತ್ತಿದ್ದ ಪಾನಿಯೊಳಗೆ ಪುರಿ ಮುಳುಗಿ ಹೋಗಿತ್ತು. ಅದನ್ನು ಬಾಯಲ್ಲಿರಿಸಿಕೊಳ್ಳುತ್ತಿದ್ದಂತೆ, ವಾಹ್ ಇದು ಬೇರೆ ಪಾನಿಪುರಿ ಎಂಬುದು ಖಾತ್ರಿಯಾಗಿ ಹೋಯಿತು. ಅದರ ಖಾರ, ರುಚಿ ವಾಹ್ ಅದ್ಭುತ.

ಅದಾದ ನಂತರ ಬಂಗಾರಪೇಟೆ ಮಸಾಲೆಪುರಿ ಅಂತ ಹೇಳಿದೆ. ಅದೂ ಅಷ್ಟೆ. ಬೇರೆಯ ರೀತಿ ಮಸಾಲೆಪುರಿ. ಅದಕ್ಕೆ ತಯಾರಿಸಿದ್ದ ಮಸಾಲೆ ರುಚಿಯೇ ಬೇರೆ ಥರ ಇತ್ತು. ಹ್ಞಾಂ, ಅದಕ್ಕೆ ಮಾವಿನ ಕಾಯಿಯನ್ನು ತುರಿದು ಹಾಕಿದ್ದರು. ಇದರ ಜೊತೆಗೆ ದಹಿಪುರಿ, ಟೊಮೆಟೋ ಮಸಾಲ, ಕಡ್ಲೇಕಾಯಿ ಬೀಜ ಮಸಾಲ...ಇನ್ನೂ ಏನೇನೋ ಇಷ್ಟುದ್ದ ಪಟ್ಟಿಯೇ ಹೇಳಿದರು.[ಜೆ.ಪಿ. ನಗರದ 'ನಮ್ಮ ಅಡ್ಡ'ದಲ್ಲಿ ಸಾವಯವ ತಿಂಡಿ ಸಿಗತ್ತೆ ಕಣ್ರೀ]

Mouthwatering Bangapet panipuri in Hanumanthnagar

ಅವನ್ನೆಲ್ಲ ಮತ್ತೊಂದು ಸಲ ನಿಧಾನವಾಗಿ ಪ್ರಯತ್ನಿಸೋಣ ಎಂದೆನಿಸಿ ಅಲ್ಲಿಂದ ಹೊರಟುಬಂದೆ. ಆದರೆ ಅಲ್ಲಿದ್ದ ಪಾನಿಯ ರುಚಿ ಬಗ್ಗೆ ಒಂದು ಲೇಖನ ಬರೆಯಬಹುದು. ಅಷ್ಟು ವಿಶೇಷ ಹಾಗೂ ರುಚಿಯಾಗಿತ್ತು. ಪುದೀನ, ಹಸಿ ಮೆಣಸಿನಕಾಯಿ ಹಾಕಿದ ಹಸಿರು ಹಸಿರಾದ ಪಾನಿಯನ್ನು ಕುಡಿದಿರ್ತೀರಿ. ಆದರೆ ಇದಂತೂ ಶುದ್ಧ ನೀರಿನ ಹಾಗೆ ಇತ್ತು.

ಬೆಲೆಯೇನು ಭಾರಿ ಇರಬೇಕು ಅಂದುಕೊಂಡಿದ್ದೆ. ಎಲ್ಲವೂ 20ರಿಂದ 25 ರುಪಾಯಿ ಇದೆ. ಪ್ರಾಯಶಃ ಸಂಜೆ ಮೇಲೆ ಇಲ್ಲಿ ಪಾನಿಪುರಿ ಸಿಗುತ್ತೆ ಅನ್ನಿಸುತ್ತೆ. ಇನ್ನೂ ಹೆಚ್ಚು ನಿಖರವಾದ ವಿಳಾಸ ಹೇಳಬೇಕು ಅಂದರೆ, ಹನುಮಂತನಗರ ಪಿಇಎಸ್ ಕಾಲೇಜಿನ ಹತ್ತಿರವೇ ಶ್ರೀನಗರಕ್ಕೆ ಬಸ್ಸುಗಳು ತಿರುಗಿಕೊಳ್ಳುವ ರಸ್ತೆ ಇದೆ. ಅಲ್ಲಿಂದ ಮೀನಾಕ್ಷಿ ನರ್ಸಿಂಗ್ ಹೋಮ್ ಕಡೆ ಗೆ ಹೋಗುವ ದಾರಿಯಲ್ಲಿ ಸುಲಭ್ ಶೌಚಾಲಯ ಇದೆ. ಅದರ ವಿರುದ್ಧ ದಿಕ್ಕಿನಲ್ಲೇ ರಸ್ತೆ ಪಕ್ಕದಲ್ಲಿ ಬಂಗಾರಪೇಟೆ ಪಾನಿಪುರಿ ಸಿಗುತ್ತದೆ. ['ತೇರಿ ಇಟ್‍ಮೇಲ್ ಅಸ್ಯವಿರೆಕಾಳ್']

English summary
Mouthwatering Bangapet panipuri available near PES college, Hanumanthnagar, Bengaluru. Price between 20 to 25 Rupees. But you can enjoy new variety of panipuri, masala puri and other tasty food here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X