ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಸಂದ್ರ ಕೆರೆ ಅಭಿವೃದ್ಧಿ: ಟೈಟಾನ್ ಜತೆ ನಮ್ಮ ಮೆಟ್ರೋ ಒಪ್ಪಂದ

|
Google Oneindia Kannada News

ಬೆಂಗಳೂರು, ಫೆಬ್ರವರಿ20 : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ 17ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವೀರಸಂದ್ರ ಕೆರೆ ಇದೀಗ ಮತ್ತೊಮ್ಮೆ ಗತವೈಭವದ ಸಮೃದ್ಧಿಯನ್ನು ಪಡೆಯಲು ಸಿದ್ಧವಾಗುತ್ತಿದೆ.

ಬಿಎಂಆರ್ ಸಿಎಲ್ ತನ್ನ ಮೆಟ್ರೋ ನಿಲ್ದಾಣಗಳ ಆಸುಪಾಸಿನಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಲೋಚಿಸಿದೆ. ಇದೀಗ ಬಿಎಂಆರ್ ಸಿಎಲ್ ಈ ವೀರಸಂದ್ರ ಕೆರೆಯ ಅಭಿವೃದ್ಧಿಪಡಿಸುವ ಕುರಿತು ಈಗಾಗಲೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಖಾಸಗಿ ಕಂಪನಿಯಾದ ಟೈಟಾನ್ ಜತೆಗೆ ಮಂಗಳವಾರ ಒಪ್ಪಂದ ಮಾಡಿಕೊಂಡಿದೆ.

ಬಿಎಂಆರ್ ಸಿಎಲ್ ಕೆಂಗೇರಿ ಕೆರೆಯ ಅಭಿವೃದ್ಧಿ ಪಡಿಸುವ ಬಗ್ಗೆಯೂ ಭರವಸೆ ನೀಡಿದ್ದು ಆದರೆ ಯಾವುದೇ ಖಾಸಗಿ ಕಂಪನಿಗಳು ಈವರೆಗೆ ಮುಂದೆ ಬಂದಿಲ್ಲ. ಬಿಎಂಆರ್ ಸಿಎಲ್ ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿ ಆಯ್ದುಕೊಂಡಿದ್ದು, ಕಾರ್ಪೊರೇಟ್ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದೆ.

MOU to revive Veerasandra Lake

ಕೆಂಗೇರಿ ಸಮೀಪದದಲ್ಲಿ ಮೈಲಸಂದ್ರ ಮೆಟ್ರೋ ನಿಲ್ದಾಣ ಬರುವ ಕಾರಣ ಅಲ್ಲಿ ಇರುವ ಕೆರೆಯನ್ನೂ ಅಭಿವೃದ್ಧಿಪಡಿಸುವತ್ತ ಆಲೋಚಿಸುತ್ತಿದೆ. ಕೆಂಗೇರಿ ಸೇರಿದಂತೆ ಇನ್ನೂ ಕೆಲ ಕೆರೆಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿಕೊಂಡಿದೆ ಟೈಟಾನ್ ಕಂಪನಿ ವಾಚ್ ಆಗೂ ಆಭರನ ತಯಾರಿಕೆಯಲ್ಲಿ ಹೆಸರು ಮಾಡಿದ್ದು ತನ್ನ ಕಾರ್ಪೊರೇಟ್ ಜವಾಬ್ದಾರಿ ಯೋಜನೆಯಡಿ ಈ ವೀರಸಂದ್ರ ಕೆರೆಯನ್ನು ಅಭಿವೃದ್ಧಿಪಡಿಸುತ್ತಿದೆ.

English summary
Veerasandra Lake,spread over 17 acres in Electronic city, is all set to get a makeover. Bengaluru Metro Rail Corporation, which is entrusted with developing the lake filled with construction debris and weeds, will sign a memorandum ofunderstanding with Titan company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X