ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರಗ ಮತ್ತು ಕುರುಂಬ ಭಾಷೆಗಳು ಅಳಿವಿನಂಚಿನಲ್ಲಿವೆ: ವರದಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 19 : ದೇಶಾದ್ಯಂತ 42 ಭಾಷೆಗಳು ಅಳಿವಿನಂಚಿನಲ್ಲಿವೆ ಎಂಬ ಮಾಹಿತಿ ಬಹಿರಂಗವಾಗಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ವಿಭಾಗ ಜನಗಣತಿ ನಿರ್ದೇಶನಾಲಯ ತಯಾರಿಸಿರುವ ವರದಿಯಂತೆ ಭಾರತದಲ್ಲಿ ಒಟ್ಟಾರೆ22 ನಿಗದಿತ ಮತ್ತು100 ಅನಿಗದಿತ ಭಾಷೆಗಳನ್ನು ದಿನನಿತ್ಯ ಬಳಸುತ್ತಿದ್ದಾರೆ.

ಅಂದಾಜು ಲಕ್ಷಕ್ಕೂ ಅಧಿಕ ಮಂದಿ ಈ ಭಾಷೆಗಳನ್ನು ದಿನನಿತ್ಯ ಸಂವಹನದಲ್ಲಿ ಬಳಸುತ್ತಾರೆ. ಆದರೆ ೪೨ ಭಾಷೆ ಅಥವಾ ಉಪಭಾಷೆಗಳನ್ನು ಕೇವಲ 10 ಸಾವಿರ ಮಂದಿ ಮಾತನಾಡುತ್ತಿದ್ದಾರೆ. ಪರಿಣಾಮ ಮುಂದಿನ ಕೆಲವೇ ವರ್ಷಗಳಲ್ಲಿ ಈ ಭಾಷೆಗಳ ಬಳಕೆಯೇ ಇರುವುದಿಲ್ಲ ಎನ್ನಲಾಗಿದೆ.

ಈ ಪೈಕಿ ಕರ್ನಾಟಕದಲ್ಲಿನ ಕೊರಗ ಸಮುದಾಯ ಬಳಸುವ 'ಕೊರಗ' ಮತ್ತು ಕುರುಬ ಬುಡಕಟ್ಟು ಸಮುದಾಯ ಬಳಸು ಕುರುಂಬ ಭಾಷೆಗಳು ಅಳಿವಿನಂಚಿನಲ್ಲಿವೆ. ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ ಅಳಿವಿನಂಚಿನಲ್ಲಿರುವ ಭಾಷೆಗಳ ರಕ್ಷಣೆಗೆ ವಿಶೇಷ ಯೋಜನೆ ಅನ್ವಯ ನಿರತವಾಗಿದೆ.

More than 40 languages may be heading for extinction

ಇಂಥ ಭಾಷೆಗಳಲ್ಲಿ ಬಳಕೆಯಾಗುವ ವ್ಯಾಕರಣ, ಶಬ್ದಕೋಶ, ಜನಪದಗಳನ್ನು ಸಿದ್ಧಪಡಿಸಿ ಅಧ್ಯಯನ ಮತ್ತು ಅನುಸರಣೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಪಟ್ಟಿ ಮಾಡಲಾದ ಭಾಷೆಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್, ಮಣಿಪುರ, ಹಿಮಾಚಲಪ್ರದದೇಶ, ಆಂಧ್ರ ಪ್ರದೇಶದ ಭಾಷೆಗಳೂ ಸೇರಿವೆ.

English summary
More than 40 languages or dialects in India are considered to be endangered and is believed to be heading towards extinction as only a few thousand people speak them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X