ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಗಾರು ದುರ್ಬಲ: ಬೆಂಗಳೂರಲ್ಲಿ ಕಡಿಮೆಯಾದ ಮಳೆ

By Nayana
|
Google Oneindia Kannada News

Recommended Video

ಬೆಂಗಳೂರಿನಲ್ಲಿ ಮುಂಗಾರು ದುರ್ಬಲ, ದಕ್ಷಿಣ ಒಳನಾಡಿನಲ್ಲಿ ಪ್ರಬಲ

ಬೆಂಗಳೂರು, ಜೂನ್ 22: ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ನೈಋತ್ಯ ಮುಂಗಾರು ಪ್ರಬಲವಾಗಿದೆ. ಹಾಗೆಯೇ ಸಾಕಷ್ಟು ಮಳೆಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಇದ್ದಕ್ಕಿದ್ದಂತೆ ಮಳೆ ಕಡಿಮೆಯಾಗಿದೆ. ದಕ್ಷಿಣ ಒಳನಾಡಿನಲ್ಲಿನ ಇತರೆ ಜಿಲ್ಲೆಗಳಂತೆ ಮಳೆ ಸುರಿಸುವ ಮೋಡಗಳು ಇಲ್ಲಿ ಕಂಡುಬಂದಿಲ್ಲ.

ಮುಂಗಾರು ಆರಂಭದ ದಿನಗಳಲ್ಲಿ ನಗರದಲ್ಲಿ ಭಾರಿ ಮಳೆಯಾಗಿತ್ತು. ಜೂನ್ ಎರಡನೇ ವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಪ್ರಬಲವಾಗಿಯೇ ಇದೆ.

ಉ.ಕರ್ನಾಟಕಕ್ಕೆ ಚಾಚಿದ ಮುಂಗಾರು, ಬೀದರ್, ಕಲಬುರಗಿ ಮಳೆ ಉ.ಕರ್ನಾಟಕಕ್ಕೆ ಚಾಚಿದ ಮುಂಗಾರು, ಬೀದರ್, ಕಲಬುರಗಿ ಮಳೆ

ಆದರೆ ಬೆಂಗಳೂರಲ್ಲಿ ಜೋರಾಗಿ ಗಾಳಿ ಬೀಸುವುದು, ಮೋಡಗಳ ದಟ್ಟವಾಗಿ ಸಾಲುಗಟ್ಟುವುದು ಇಂತಹ ಪ್ರಕ್ರಿಯೆ ಕಡಿಮೆಯಾಗಿದೆ. ಉತ್ತರ ಒಳನಾಡಿನಲ್ಲಿ ಕೆಲವೇ ದಿನಗಳಲ್ಲಿ ಜೋರು ಮಳೆ ಸುರಿಯುವ ಮುನ್ಸೂಚನೆ ಇದೆ. ಆದರೆ ನಗರದಲ್ಲಿ ಜೋರಾದ ಮಳೆ ಸುರಿಯುವ ಸೂಚನೆ ಸದ್ಯಕ್ಕಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

Monsoon slowdown in Bengaluru rather than south interior Karnataka

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜೂನ್‌ನಲ್ಲಿ ಸುರಿದಿರುವ ಮಳೆ ಹೆಚ್ಚಾಗಿಯೇ ಇದೆ. ಜೂನ್ 1ರಿಂದ ಇಲ್ಲಿಯವರೆಗೆ ನಗರದ ಕೇಂದ್ರಭಾಗದಲ್ಲಿ 73 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ 25.1 ಮಿ.ಮೀ ಮಳೆ ಸುರಿದಿತ್ತು.

ನೈಋತ್ಯ ಮುಂಗಾರಿ ಕರಾವಳಿ ಭಾಗದಲ್ಲಿ ಇನ್ನಷ್ಟು ಚುರುಕಾಗಿದೆ. ಉತ್ತರ ಒಳನಾಡಿನಲ್ಲಿ ದುರ್ಬಲಗೊಂಡಿದೆ. ಗುರುವಾರ ಮುಲ್ಕಿಯಲ್ಲಿ ಗರಿಷ್ಠ 22 ಸೆಂ.ಮೀ ಮಳೆಯಾಗಿದೆ.ಪುತ್ತೂರು, ಉಡುಪಿ, ಕಾರ್ಕಳ, ಕೊಲ್ಲೂರು, ಕೋಟಾ, ಧರ್ಮಸ್ಥಳ ಸಲ್ಲಿ ತಲಾ 8 ಸೆಂ.ಮೀ ಮಳೆಯಾಗಿದೆ.

English summary
After rain fall in first two weeks of June, monsoon has slow down in and around of Bengaluru as south interior Karnatak a was recieved good rainfall even third week of the month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X