ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3 ಕೋಟಿ ಹಣ ಕಳ್ಳತನ : ಸಿಸಿಬಿಯಿಂದ ಕಾಂಗ್ರೆಸ್ ನಾಯಕಿ ವಿಚಾರಣೆ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 22 : ಬೆಂಗಳೂರಿನ ಸಿಸಿಬಿ ಪೊಲೀಸರು ಕಾಂಗ್ರೆಸ್ ಪಕ್ಷದ ನಾಯಕಿ ಕೆ.ಟಿ.ವೀಣಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 3 ಕೋಟಿ ರೂ. ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ.

ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಸರೋಜ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಕೆ.ಟಿ.ವೀಣಾ ವಿಚಾರಣೆ ನಡೆಸಿದರು. ಸರೋಜಾ ಅವರ ಮನೆಯಲ್ಲಿದ್ದ ಹಣವನ್ನು ವೀಣಾ ಅವರ ಸೂಚನೆಯಂತೆ ಕಳವು ಮಾಡಲಾಗಿದೆ ಎಂಬುದು ಆರೋಪವಾಗಿದೆ.

18 ಕೋಟಿ ವಂಚನೆ, ಪೊಲೀಸ್ ನೇಮಕಾತಿ ಅಧೀಕ್ಷಕ ಸೇರಿ ಐವರು ಪೊಲೀಸರ ಬಂಧನ18 ಕೋಟಿ ವಂಚನೆ, ಪೊಲೀಸ್ ನೇಮಕಾತಿ ಅಧೀಕ್ಷಕ ಸೇರಿ ಐವರು ಪೊಲೀಸರ ಬಂಧನ

ಹರಿಪ್ರಸಾದ್ ಎಂಬುವವರು ಸಹೋದರಿ ಸರೋಜಾ ಮನೆಯಲ್ಲಿ 3 ಕೋಟಿ ಹಣವಿಟ್ಟಿದ್ದರು. ಸರೋಜಾ ಅವರ ಸಂಬಂಧಿಯಾದ ಕೆ.ಟಿ.ವೀಣಾ ಅವರು ಸರೋಜಾ ಅವರ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಹಣ ಇರುವ ವಿಚಾರವನ್ನು ಅವರಿಗೂ ತಿಳಿಸಲಾಗಿತ್ತು.

Money missing case : CCB police detained Congress leader

ಸರೋಜಾ ಅವರು ಸಂಬಂಧಿಕರ ಮನೆಗೆ ಹೋದಾಗ ವೀಣಾ ಅವರ ಸೂಚನೆಯಂತೆ ನಟರಾಜು ಮತ್ತು ಬಾಬು ಎಂಬುವವರು 3 ಕೋಟಿ ಕಳ್ಳತನ ಮಾಡಿದ್ದಾರೆ ಎಂಬುದು ಆರೋಪವಾಗಿದೆ.

ಬೆಂಗಳೂರು:ರೌಡಿ ಶೀಟರ್‌ ರವಿ ಮೇಲೆ ಸಿಸಿಬಿ ಪೊಲೀಸರಿಂದ ಗುಂಡಿನ ದಾಳಿಬೆಂಗಳೂರು:ರೌಡಿ ಶೀಟರ್‌ ರವಿ ಮೇಲೆ ಸಿಸಿಬಿ ಪೊಲೀಸರಿಂದ ಗುಂಡಿನ ದಾಳಿ

ಸರೋಜಾ ಅವರ ವೀಣಾ ಅವರ ಮೇಲೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಆದ್ದರಿಂದ, ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. 3 ಕೋಟಿ ಹಣ ಗದಗ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

English summary
Bengaluru City Crime Branch (CCB) police detained Congress leader K.T.Veena in connection with the 3 crore Rs threft case. K.T.Veena friend Saroja field a complaint to police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X