ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸುಂದರಿ ಮೋಹಿನಿಗೆ ಮಿಸಸ್ ಇಂಡಿಯಾ ಕಿರೀಟ?

|
Google Oneindia Kannada News

ಬೆಂಗಳೂರು, ಜೂನ್ 19: ಮದುವೆಯಾದ ಮೇಲೆ ಇನ್ನೇನು, ಜೀವನ ಮುಗೀತು ಎನ್ನುವ ಗೃಹಿಣಿಯರು ಸಾಕಷ್ಟು ಜನರಿದ್ದಾರೆ. ಆದರೆ, ಮದುವೆಯಾದರೂ ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂದು ನಿರಂತರ ಪರಿಶ್ರಮ ಪಡುವವರು ಕೆಲವೇ ಕೆಲವರು. ಅವರಲ್ಲಿ ಬೆಂಗಳೂರಿನ ಮೋಹಿನ ಪಠಾಣ್ಕರ್ ಸಹ ಒಬ್ಬರು.

ಮಿಸಸ್ ಇಂಡಿಯಾ ವರ್ಲ್ಡ್ ವೈಡ್-2018 ನ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿರುವ ಇವರು ಬೆಂಗಳೂರಿನವರು ಎಂಬುದು ಮತ್ತಷ್ಟು ಹೆಮ್ಮೆಯ ವಿಷಯ.

ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!

ಇಬ್ಬರು ಮುದ್ದು ಮಕ್ಕಳ ತಾಯಿಯಾಗಿರುವ ಮೋಹಿನಿ ಪಠಾಣ್ಕರ್ ಅವರ ಎಲ್ಲ ಸಾಧನೆಗೂ ಆಕೆಯ ಕುಟುಂಬ ಬೆನ್ನೆಲುಬಾಗಿ ನಿಂತಿದೆ.

ವೈಯಕ್ತಿಕ ಬದುಕು

ವೈಯಕ್ತಿಕ ಬದುಕು

ಖ್ಯಾತ ವಕೀಲ ರಾಮ್ ಪಠಾಣ್ಕರ್ ಮತ್ತು ಖ್ಯಾತ ಕಲಾವಿದೆ ರೋಹಿಣಿ ಪಠಾಣ್ಕರ್ ಅವರ ಪುತ್ರಿ ಮೋಹಿನಿ ಪಠಾಣ್ಕರ್. ಇಂಜಿನಿಯರಿಂಗ್ ಮುಗಿಸುತ್ತಿದ್ದಂತೆಯೇ ಮೋಹಿತ್ಸನ್ ಪಠಾಣ್ಕರ್ ಎಂಬುವವರನ್ನು ಮದುವೆಯಾದ ಮೋಹಿನಿ ನಮತರದ ಕೆಲ ವರ್ಷಗಳ ಕಾಲ ಅಮೆರಿಕದಲ್ಲೇ ವಾಸವಿದ್ದರು. ಮಗ ಮಿಹಿರ್ ಜನಿಸಿದ ಆರು ತಿಂಗಳ ನಂತರ ಭಾರತಕ್ಕೆ ಬಂದ ದಂಪತಿ ಬೆಂಗಳೂರಿನಲ್ಲೇ ಮತ್ತೆ ಬದುಕು ಆರಂಭಿಸಿದರು. ಕೆಲ ವರ್ಷಗಳಲ್ಲಿ ಈ ದಂಪತಿಗೆ ಮಾಹಿ ಎಂಬ ಮಗಳೂ ಜನಿಸಿದಳು. ಮಗಳು ಜನಿಸಿದ ನಂತರ ಸಂಗೀತ, ಈಜು, ಕೋರಿಯಾಗ್ರಫಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು ಮೋಹಿನಿ. ಎಂಬಿಎ ಪದವಿಯನ್ನೂ ಪಡೆದರು.

ಅತ್ಯುತ್ತಮ ಗಾಯಕಿ

ಅತ್ಯುತ್ತಮ ಗಾಯಕಿ

ಅತ್ಯುತ್ತಮ ಗಾಯಕಿಯೂ ಆಗಿರುವ ಮೋಹಿನಿ ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಸರಾಗವಾಗಿ ಹಾಡಬಲ್ಲರು. ಸದ್ಯಕ್ಕೆ ಛತ್ತೀಸಗರಿ ಮತ್ತು ತಮಿಳು ಭಾಷೆಯಲ್ಲೂ ಹಾಡು ಕಲಿಯುತ್ತಿದ್ದಾರೆ. ಇದರೊಟ್ಟಿಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿರುವ ಈಕೆ ಹಲವು ಮ್ಯಾರಥಾನ್ ಗಳಲ್ಲೂ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ.

ಮಿಸ್ ವ್ಹೀಲ್ ಚೇರ್ ಗೆದ್ದುಬರಲಿ ನಮ್ಮ ಕನ್ನಡತಿ ಡಾ.ರಾಜಲಕ್ಷ್ಮಿಮಿಸ್ ವ್ಹೀಲ್ ಚೇರ್ ಗೆದ್ದುಬರಲಿ ನಮ್ಮ ಕನ್ನಡತಿ ಡಾ.ರಾಜಲಕ್ಷ್ಮಿ

ಎಷ್ಟು ಜನ ಸ್ಪರ್ಧಿಗಳು?

ಎಷ್ಟು ಜನ ಸ್ಪರ್ಧಿಗಳು?

ಈ ಸ್ಪರ್ಧೆಗೆ ಭಾರತದಾದ್ಯಂತ ಸುಮಾರು 20 ಸಾವಿರ ಜನ ಭಾಗವಹಿಸಿದ್ದರು. ಅವರಲ್ಲಿ ಆಅಯ್ಕೆಯಾಗಿದ್ದು ಕೇವಲ 80 ಜನ ಮಾತ್ರ! ಅಕ್ಟೋಬರ್ 2017 ರಿಂದ ಸೆಪ್ಟೆಂಬರ್ 2018 ರವರೆಗೆ ಆಡಿಶನ್ ಗಳು, ಸಂದರ್ಶನಗಳು ನಡೆದಿದ್ದವು. ಭಾರತೀಯ ಮೂಲದವರಾದರೂ ವಿದೇಶದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೂ ಈ ಸ್ಪರ್ಧೆಗೆ ಅವಕಾಶವಿತ್ತು. ದೆಹಲಿ, ಗ್ರೀಸ್ ನಲ್ಲೂ ಹಲವು ಸುತ್ತಿನ ಸ್ಪರ್ಧೆಗಳು ನಡೆಯಲಿದ್ದು, ಕಿರೀಟ ಯಾರ ಪಾಲಗಲಿದೆ ಎಂಬುದು ಅಂತಿಮ ಸ್ಪರ್ಧೆಯಲ್ಲಿ ತಿಳಿಯಲಿದೆ.

ಸ್ಪರ್ಧೆ ಯಾವಾಗ? ಎಲ್ಲಿ?

ಸ್ಪರ್ಧೆ ಯಾವಾಗ? ಎಲ್ಲಿ?

ಮಿಸಸ್ ಇಂಡಿಯಾ ವರ್ಲ್ಡ್ ವೈಡ್ 2018 ಸ್ಪರ್ಧೆ ರಾಜಧಾನಿ ದೆಹಲಿಯ ಜವಹರಲಾಲ್ ನೆಹರೂ ಸ್ಟೇಡಿಯಂ ನಲ್ಲಿ ಸೆಪ್ಟೆಂಬರ್ 22 ರಂದು ನಡೆಯಲಿದೆ. ಈ ಸ್ಪರ್ಧೆಗೆ ಬಾಲಿವುಡ್ ಗಣ್ಯರಾದ ಜೀನತ್ ಅಮಾನ್ ಮತ್ತು ಸೋಹಾ ಅಲಿ ಖಾನ್ ಅವರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೆ, ಈ ಕ್ಷೇತ್ರದ ಪ್ರಸಿದ್ಧ ಮಹಿಳೆಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

English summary
Mohini Patankar, a Bengaluru house wife, has selected in Haut Monde Mrs India Worldwide-2018 Grand Finale. The For this competition 86 participants out of 20 thousand have been selected from India. Grand Finale will be organised on September 22 in Jawaharlal Nehru Stadium, Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X