ಡ್ರಗ್ಸ್ ಮಾಫಿಯಾ: ಚಿಕ್ಕಮಗಳೂರಿನ ರೂಪದರ್ಶಿ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜೂನ್ 23: ಮಾದಕ ದ್ರವ್ಯ ಮಾರಾಟ ಹಾಗೂ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ 26 ವರ್ಷದ ರೂಪದರ್ಶಿಯೊಬ್ಬರನ್ನು ಆರ್ ಟಿ ನಗರದಲ್ಲಿ ಎಸ್ ಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಪೊಲೀಸರು, 26 ವರ್ಷ ವಯಸ್ಸಿನ ದರ್ಶಿತ್ಮಿತಾ ಜಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. [ಬೆಂಗ್ಳೂರು ಈಗ ಡ್ರಗ್ ಮಾಫಿಯಾ ಡೀಲ್ ಗೆ ತಂಗುದಾಣ!]

ದರ್ಶಿತ್ಮಿತಾ ಅವರಿದ್ದ ಆರ್ ಟಿ ನಗರದ ಅಪಾರ್ಟ್ಮೆಂಟ್ ವೊಂದರ ಮೇಲೆ ನವೆಂಬರ್ 2015ರಲ್ಲಿ ದಾಳಿ ನಡೆಸಿ 110 ಗ್ರಾಮ್ ಕೊಕೈನ್, 19 ಗ್ರಾಮ್ ಹಶೀಶ್, 1.2 ಗ್ರಾಮ್ ಎಂಡಿಎಂ ಹಾಗೂ 1 ಎಲ್ ಎಸ್ ಡಿ ವಶ ಪಡಿಸಿಕೊಳ್ಳಲಾಗಿತ್ತು. ಆ ಸಮಯದಲ್ಲಿ ದರ್ಶಿಶ್ಮಿತಾ ವಿರುದ್ಧ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.

Model arrested in connection with drug peddling racket

ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ದರ್ಶಿತ್ಮಿತಾ ಅವರ ಗೆಳೆಯ ನಿಶಾಂತ್ ಬಹುದೊಡ್ಡ ಮಾದಕ ಜಾಲ ನಡೆಸಿದ್ದು,
ಬೆಂಗಳೂರು, ಮಂಗಳೂರು ಹಾಗೂ ಗೋವಾದಲ್ಲಿ ಗ್ರಾಹಕರನ್ನು ಹೊಂದಿದ್ದಾನೆ. ಈತನಿಗೆ ದರ್ಶಿತ್ಮಿತಾ ಪೂರ್ಣ ಬೆಂಬಲ ನೀಡುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.[ಬೆಂಗಳೂರು ರೇವ್ ಪಾರ್ಟಿಗೆ ದಕ್ಷಿಣ ಅಮೆರಿಕಾದ ನಂಟು]

ಇಬ್ಬರೂ ಗೋವಾದಿಂದ ಹಾಗೂ ವಿದೇಶದಿಂದ ಮಾದಕ ವಸ್ತುಗಳನ್ನು ತಂದು, ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಬೆಂಗಳೂರು, ಮಂಗಳೂರು ಹಾಗೂ ಗೋವಾದಲ್ಲಿ ವಿದ್ಯಾರ್ಥಿಗಳು ಹಾಗೂ ಇನ್ನಿತರೆ ಗ್ರಾಹಕರಿಗೆ ಮಾರುತ್ತಿದ್ದರು ಎನ್ನಲಾಗಿದೆ. ಆದರೆ, ಆರೋಪವನ್ನು ಅಲ್ಲಗೆಳೆದಿರುವ ದರ್ಶಿತ್ಮಿತಾ, ಗೆಳೆಯನ ಅವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ, ಇಬ್ಬರು ಒಂದೆ ಕಡೆ ವಾಸ ಮಾಡುತ್ತಿದ್ದದ್ದು ನಿಜ ಎಂದಿದ್ದಾರೆ.

1985ರ ನಾರ್ಕೊಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಚ್ ಸಬ್ಟೆಸಸ್ ಕಾಯಿದೆ ಪ್ರಕಾರ ಈಗ ದರ್ಶಿತ್ಮಿತಾರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿ ತನಕ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 26-year-old model Darshithmita who is based in Bengaluru was arrested by the Narcotics Control Bureau on Tuesday in connection with a drug peddling case. The suspect is from Chikkamagaluru
Please Wait while comments are loading...