ರೂಪದರ್ಶಿ ಹೇಳಿದ ಲವ್- ಲಿವಿನ್ ಟುಗೆದರ್ ಅಸಲಿ ಕಥೆ

By: ನ್ಯೂಸ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಜೂನ್ 15:'ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಕೈಕೊಟ್ಟಿದ್ದಾನೆ' ಎಂದು ಆರೋಪಿಸಿ ರೂಪದರ್ಶಿಯೊಬ್ಬಳು ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ರೂಪದರ್ಶಿ ಆರೋಪದಲ್ಲಿ ಹುರುಳಿಲ್ಲ ಎಂದು ಯುವಕ ಕೂಡಾ ಪ್ರತಿ ದೂರು ನೀಡಿದ್ದಾನೆ. ಈ ಪ್ರಕರಣದ ಅಸಲಿ ಕಥೆ ಇಲ್ಲಿದೆ..ಗೌಪ್ಯತೆಯ ಕಾರಣ ಯುವಕ, ಯುವತಿಯ ಹೆಸರನ್ನು ಬಹಿರಂಗಪಡಿಸಿಲ್ಲ.

ಯುವತಿ ಮಾಡಿರುವ ಎಲ್ಲಾ ಆರೋಪವನ್ನು ಶಿವಮೊಗ್ಗ ಮೂಲದ ಯುವಕ ಅಲ್ಲಗೆಳೆದಿದ್ದು, ಆಕೆಯ ಶೀಲದ ಮೇಲೆ ಕಳಂಕ ಹೊರೆಸಿ ಪ್ರತಿ ಆರೋಪ ಮಾಡಿದ್ದಾನೆ. ಸದಾಶಿವನಗರದಲ್ಲಿ ಕೇಸು ದಾಖಲಾಗಿ ವಾರ ಕಳೆದಿದೆ. ಸುದ್ದಿ ವಾಹಿನಿಗಳ ಮೂಲಕ ಈಗ ಈ ಕೇಸು ಪ್ರಚಾರ ಪಡೆದುಕೊಳ್ಳುತ್ತಿದೆ.

ಸುದ್ದಿ ಸಾರಾಂಶ: ಫೇಸ್ ಬುಕ್, ವಾಟ್ಸಾಪ್ ನಿಂದ ಪರಿಚಯವಾಗಿ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿ, ಮಂಚವೇರಿ ಕೆಳಗಿಳಿದ ಬಳಿಕ, ಸಹ ಜೀವನ ಕಂಡ ಈ ಜೋಡಿ ಈಗ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದೆ. ಯಾವುದು ಸುಳ್ಳು? ಯಾವುದು ಸತ್ಯ? ಪೊಲೀಸ್ ತನಿಖೆ ಇಂದಷ್ಟೇ ಬಯಲಾಗಲಿದೆ. ಆಕೆ ಹೊರೆಸಿರುವ ರೇಪ್ ಆರೋಪ, ಲವ್ ಬ್ರೇಕ್ ಅಪ್ ಕಥೆ ಸುಳ್ಳು ಎಂದು ಯುವಕನ ವಾದ.. ಕಥೆ ಇಲ್ಲಿಗೆ ಮುಗಿಯುವುದಿಲ್ಲ ಇನ್ನೂ ಇದೆ...

ನಟಿ ನೀಡಿರುವ ದೂರಿನ ವಿವರ

ನಟಿ ನೀಡಿರುವ ದೂರಿನ ವಿವರ

ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿರುವ ಉ** ಪಟೇಲ್ ಎಂಬಾತನ ವಿರುದ್ಧ ಮೋಸ, ವಂಚನೆ, ಅತ್ಯಾಚಾರದ ಆರೋಪ ಹೊರೆಸಿ ವಿ** ವಿ. ಆರ್ ಅವರು ದೂರು ದಾಖಲಿಸಿದ್ದಾರೆ. ಸದಾಶಿವನಗರದಲ್ಲಿ ನಾವಿಬ್ಬರು ಕಳೆದ 8 ತಿಂಗಳಿನಿಂದ ಒಟ್ಟಿಗೆ ವಾಸವಾಗಿದ್ದೇವೆ. ಆತ ನನಗೆ ಒಂದು ವರ್ಷದಿಂದ ಪರಿಚಿತ, ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ಲಿವ್ ಇನ್ ಟುಗೆದರ್ ನಲ್ಲಿದ್ದೆವು. ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ...

8 ತಿಂಗಳ ನಂಬಿಕೆಗೆ ದ್ರೋಹ

8 ತಿಂಗಳ ನಂಬಿಕೆಗೆ ದ್ರೋಹ

ಕೋರಮಂಗಲದಲ್ಲಿ ನೆಲೆಸಿದ್ದ ನನಗೆ ಈ ವ್ಯಕ್ತಿ ಪರಿಚಯವಾಗಿ ಆತನ ಮೇಲೆ ನನಗೆ ನಂಬಿಕೆ ಹುಟ್ಟಿದ ಬಳಿಕ ಮದ್ವೆ ಬಗ್ಗೆ ಮಾತುಕತೆ ನಡೆಸಿದೆ. ಎರಡು ತಿಂಗಳಿನಲ್ಲಿ ಮದುವೆಗಾಗುವೆ ಎಂದು ಹೇಳಿ ಸದಾಶಿವನಗರದ ಈಗಿನ ನಿವಾಸಕ್ಕೆ ಕರೆ ತಂದ. ಈಗ 8 ತಿಂಗಳಾಗಿದ್ದು, ಮದುವೆ ಮಾತೆದ್ದಿದ್ದಕ್ಕೆ ಮನೆಯಲ್ಲಿ ಅಪ್ಪ-ಅಮ್ಮ ಒಪ್ಪುತ್ತಿಲ್ಲ ಎಂದು ನಾಟಕ ವಾಡಿದ್ದಾನೆ. ಮುಂದಿನ ವಾರ ಇದಕ್ಕೆ ಪರಿಹಾರ ಸಿಗಲಿದೆ ಎಂದವನು ಈಗ ನಾಪತ್ತೆ.

ಹಣ ತೆಗೆದುಕೊಂಡು ಹೋಗಿದ್ದಾನೆ

ಹಣ ತೆಗೆದುಕೊಂಡು ಹೋಗಿದ್ದಾನೆ

ಈಗ ಇರುವ ಮನೆಗೆ ಅಡ್ವಾನ್ಸ್ ನಾನೇ ಕೊಟ್ಟಿದ್ದೇನೆ. ಹಲವು ಬಾರಿ ಮನೆಯಲ್ಲಿ ಕಷ್ಟ ಎಂದು ಹೇಳಿ ಹಣ ಪಡೆದಿದ್ದಾನೆ. ಜೂನ್ 03ರಂದು ನಾನು ನನ್ನ ಊರು ಮೈಸೂರಿಗೆ ಹೋಗಿ ಬರುವಷ್ಟರಲ್ಲಿ ಅವನು ಮನೆ ಬಿಟ್ಟು ಹೋಗಿದ್ದಾನೆ. ನಾನು ಫೋನ್, ಮೆಸೇಜ್ ಮಾಡಿದರೆ ಪ್ರತಿಕ್ರಿಯೆ ಇಲ್ಲ. ಒಮ್ಮೆ ಕಾಲ್ ರಿಸೀವ್ ಮಾಡಿ ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನೆ. ಅವನ ತಾಯಿ ಒಮ್ಮೆ ಮಾತನಾಡಿ ನನ್ನ ಮೇಲೆ ಕಳಂಕ ಹೊರೆಸಿ, ಮದುವೆ ಮಾಡಿಕೊಡುವುದಿಲ್ಲ ಎಂದು ಕೆಟ್ಟಪದಗಳಿಂದ ಬೈದಿದ್ದಾರೆ.

ಬೆದರಿಕೆ ಹಾಕಿದ್ದಾನೆ

ಬೆದರಿಕೆ ಹಾಕಿದ್ದಾನೆ

ಅಪರಿಚಿತ ವ್ಯಕ್ತಿಯನ್ನು ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಇನ್ನೊಮ್ಮೆ ಗೆಳೆಯನೊಬ್ಬನ ಜತೆ ಬಂದು ಬಲವಂತವಾಗಿ ನನ್ನಿಂದ ಆಡಿಯೋ ರೆಕಾರ್ಡ್ ಮಾಡಿಸಿಕೊಂಡು, ಮದುವೆ ಬೇಡ, ನನ್ನ ಕ್ಯಾರೆಕ್ಟರ್ ಸರಿಯಲ್ಲ ಎಂದು ನನ್ನಿಂದ ಹೇಳಿಕೆ ಪಡೆದಿದ್ದಾರೆ. ಅವನಿಂದ ಮಾನಸಿಕ ದೈಹಿಕ ಹಿಂಸೆ ಅನುಭವಿಸಿದರೂ ನಾನು ಈಗಲೂ ಅವನನ್ನು ಮದ್ವೆಯಾಗಲು ಸಿದ್ಧ ಎಂದು ಮಾಡೆಲ್ ಹೇಳಿದ್ದಾಳೆ. ಈ ಘಟನೆ ಸೇರಿದಂತೆ ಆತನ ಜತೆಗಿನ ವಾಟ್ಸಾಪ್ ಚಾಟ್, ಕಾಲ್ ಹಿಸ್ಟರಿ ಹೊಂದಿದ್ದಾಳೆ. ಆದರೆ, ಫೇಸ್ ಬುಕ್ ನಲ್ಲಿ ಹಳೆ ಫೋಟೋಗಳು ಈಗ ಕಾಣುತ್ತಿಲ್ಲ.

ಮಾಡೆಲ್ ಹಿನ್ನಲೆ ಏನು?

ಮಾಡೆಲ್ ಹಿನ್ನಲೆ ಏನು?

ಮೈಸೂರು ಮೂಲದ ರೂಪದರ್ಶಿ 17ವರ್ಷಕ್ಕೆ ಮದ್ವೆಯಾಗಿ, ತಾಯ್ತನವನ್ನು ಅನುಭವಿಸಿದ್ದಾಳೆ. ಗಂಡನನ್ನು ತೊರೆದ ಬಳಿಕ ವಿನೋದ್ ಎಂಬಾತನ ಜತೆ ಗಾಢವಾದ ಸ್ನೇಹ, ಪ್ರೇಮ ಬೆಳೆದಿದೆ. ವಿನೋದ್ ಆತ್ಮಹತ್ಯೆ ಮಾಡಿಕೊಂಡು ಮೃತನಾದ ಮೇಲೆ ಮಾನಸಿಕ ಖಿನ್ನತೆ ಅನುಭವಿಸಿದ್ದ ಈಕೆಗೆ ಪಟೇಲ್ ಪರಿಚಯವಾಗಿದೆ. ತನ್ನ ಮೇಲಿನ ಎಲ್ಲಾ ಆರೋಪವನ್ನು ಯುವಕ ಅಲ್ಲಗೆಳೆದಿದ್ದಾನೆ.

ಸದಾಶಿವನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376, 417ನಂತೆ 09/06/2017ರಂದು ಪ್ರಕರಣ ದಾಖಲಾಗಿದೆ(ಕೇಸ್ ಸಂಖ್ಯೆ 69/17)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A model cum small time actress accused her Live in Partner of Rape in Sadashiva Nagar Police Station limits
Please Wait while comments are loading...