ಮೊಬೈಲ್ ಕದಿಯಲು ಹೋಗಿ ಗೂಸಾ ತಿಂದ ಯುವಕರು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 15 : ಮೊಬೈಲ್ ದೋಚಲು ಪ್ರಯತ್ನಿಸಿದ ಮೂರು ಮಂದಿ ಯುವಕರ ಗುಂಪು ಸಾರ್ವಜನಿಕರ ಕೈಲಿ ಸರಿಯಾಗಿ ಗೂಸಾ ತಿಂದಿರುವ ಘಟನೆ ನವೆಂಬರ್ 14ರ ರಾತ್ರಿ ಜಯನಗರ ಪೊಲೀಸ್ ಠಾಣಾ ಹಿಂಭಾಗ ನಡೆದಿದೆ.

ಜಯನಗರ ಸೌತೆಂಡ್ ಸರ್ಕಲ್ ನ 33ನೇ ಕ್ರಾಸ್ ನಂದಿನಿ ಹೋಟಲ್ ಬಳಿ ಸಾರ್ವಜನಿಕರೊಬ್ಬರನ್ನು ಅಡ್ಡಗಟ್ಟಿ ಹೆದರಿಸಿ ಮೊಬೈಲ್ ಮತ್ತು ಪರ್ಸ್ ದೋಚಲು ಯತ್ನಿಸಿದ ಮೂರು ಮಂದಿ ಯುವಕರ ಗುಂಪನ್ನು ಸಾರ್ವಜನಿಕರು ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ ಈ ಸಮಯ ಇಬ್ಬರು ಕಳ್ಳರು ಪರಾರಿ ಆಗಿದ್ದು ಒಬ್ಬನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

mobile robbers caught by public, two are escaped one man arrested

ಎರಡು ಬೈಕ್ ಗಳಲ್ಲಿ ಬಂದ ಮೂರು ಜನ ಯುವಕರು ಜಯನಗರದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಳ್ಳುವ ಮುಂಚೆಯೂ ಬೇರೆಡೆ ಮೊಬೈಲ್ ಮತ್ತು ಪರ್ಸ್ ಅನ್ನು ದೋಚಿದ್ದರು.

ಕದ್ದ ಬೈಕ್ ನಲ್ಲಿ ಬಂದಿದ್ದ ಮೂರು ಜನ ಕಳ್ಳರು ಗೋರಿಪಾಳ್ಯದ ಕಾಲೇಜೊಂದರ ವಿದ್ಯಾರ್ಥಿಗಳು ಎನ್ನಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three mobile robbers try to rob mobile from a man in Jayanagar. but public caught them and beat. two of them escaped from their and one man arrested.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ