ನೈಋತ್ಯ ರೈಲ್ವೆಯಲ್ಲಿ ಕಾಯ್ದಿರಿಸದ ಟಿಕೇಟ್ ಬುಕ್ ಮಾಡಲು ಆ್ಯಪ್

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 13: ಕಾಯ್ದಿರಿಸದ ಮತ್ತು ಪ್ಲ್ಯಾಟ್ ಫಾರಂ ಟಿಕೆಟ್ ಗಳನ್ನು ಬುಕ್ ಮಾಡಲು ರೈಲ್ವೆ ಇಲಾಖೆ ನೈಋತ್ಯ ರೈಲ್ವೆ ವಲಯದಲ್ಲಿ ಮೊಬೈಲ್ ಅಪ್ಲಿಕೇಷನ್ ಸೇವೆ ಆರಂಭಿಸಿದೆ.

ಈಗಾಗಲೇ ಹುಬ್ಬಳ್ಳಿ, ಮೈಸೂರು ರೈಲ್ವೆ ವಿಭಾಗ, ಬೆಂಗಳೂರಿನಲ್ಲಿ ಕಾರ್ಯಾರಂಭಿಸಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್. ಸಕ್ಸೇನಾ ತಿಳಿಸಿದ್ದಾರೆ. ಆಂಡ್ರ್ಯಾಯ್ಡ್ ಮತ್ತು ವಿಂಡೊ ಫೋನ್ ಗಳಲ್ಲಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡರೆ ಕಾಯ್ದಿರಿಸಿದ ಟಿಕೆಟ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಯಂತ್ರ

ನೈಋತ್ಯ ರೈಲ್ವೆ ವಲಯದ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಟಿಕೇಟ್ ತೆಗೆದುಕೊಳ್ಳಲು ಸಾಲಿನಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

Mobile APP for Unreserved train tickets launched in Bengaluru

ಟಿಕೇಟ್ ದರವನ್ನು ಪಾವತಿ ಮಾಡಲು ಪ್ರಯಾಣಿಕರು ರೈಲ್ವೆ ವಾಲೆಟ್ ನ್ನು ರಿಚಾರ್ಜ್ ಮಾಡಿಕೊಳ್ಳಬೇಕು. ಟಿಕೇಟ್ ಬುಕ್ ಮಾಡಲು ಅಪ್ಲಿಕೇಷನ್ ಬಳಸಿಕೊಳ್ಳಬಹುದು. ಅಪ್ಲಿಕೇಷನ್ ನಲ್ಲಿ ಶೋ ಟಿಕೇಟ್ ಆಯ್ಕೆ ಮೂಲಕ ಪ್ರಯಾಣಿಕರು ಈ ಟಿಕೇಟ್ ತೋರಿಸಬಹುದು ಎಂದಿದ್ದಾರೆ.

ಮೊಬೈಲ್ ವಾಲೆಟ್ ಗಳ ಮಾದರಿಯಲ್ಲಿ ಆರ್ ವಾಲೆಟ್ ಗಳಿದ್ದು ಕನಿಷ್ಟ 100 ರೂ ಹಾಗೂ ಗರಿಷ್ಠ 5 ಸಾವಿರ ರೂಗಳ ವರೆಗೆ ರೀಚಾರ್ಜ್ ಮಾಡಿಕೊಳ್ಳಬಹುದು. ಕಾಗದ ಟಿಕೇಟ್ ಬೇಕೆಂದು ಬಯಸುವವರು ರೈಲ್ವೆ ನಿಲ್ದಾಣಗಳಲ್ಲಿರುವ ವೆಂಡಿಂಗ್ ಮೆಶಿನ್ ಗಳಿಂದ ಪಡೆಯಬಹುದು.

ಪ್ಲಾಟ್ ಫಾರಂ ಟಿಕೇಟ್ ಗಳು ಕೇವಲ 2 ಗಂಟೆಯವರೆಗೆ ಅದರ ಬಳಕೆ ಕಾಲಾವಧಿಯನ್ನು ಹೊಂದಿರುತ್ತದೆ. ಕಾಯ್ದಿರಿಸದ ಟಿಕೇಟ್ ಅಪ್ಲಿಕೇಷನ್ ನಲ್ಲಿ ಮಾಡಿಕೊಳ್ಳುವವರು ಅಪ್ಲಿಕೇಷನ್ ಅಥವಾ ವೆಬ್ ಸೈಟ್ ವಿಳಾಸ www.utsonmobile.indianrail.gov.in ಮೂಲಕ ದಾಖಲು ಮಾಡಿಕೊಳ್ಳಬೇಕು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bengaluru division of the South western Railway on Monday unveiled a dedicated mobile application for purchasing unreserved tickets on mobile by commuters and passangers travelling daily ot at short notice.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ