ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ಕಿಡ್ಸ್ ಶಾಲೆ ಪ್ರಕರಣದ ಬಗ್ಗೆ ಎಂಎನ್ ರೆಡ್ಡಿ ಹೇಳಿದ್ದೇನು?

By Mahesh
|
Google Oneindia Kannada News

ಬೆಂಗಳೂರು, ಅ.22: ಜಾಲಹಳ್ಳಿ ಸಮೀಪದ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಬಾಲಕಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ, ಪೋಷಕರ ಪ್ರತಿಭಟನೆ ಆಡಳಿತ ಮಂಡಳಿ ವಿರುದ್ಧವೇ ಹೊರತೂ ಪೊಲೀಸರ ವಿರುದ್ಧವಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಪೋಷಕರ ಸಮಿತಿ ರಚನೆ ಮಾಡಿಕೊಳ್ಳುವಂತೆ ತಿಳಿ ಹೇಳಲಾಗಿದೆ. ಆಡಳಿತ ಮಂಡಳಿಗೆ ಸಮನ್ಸ್ ಜಾರಿ ಮಾಡಲಾಗಿದೆ. ತಿರುಪತಿಯಲ್ಲಿರುವ ಶಾಲಾ ಮುಖ್ಯಸ್ಥರು ಸಂಜೆ ವೇಳೆಗೆ ಆಗಮಿಸುವ ಸಾಧ್ಯತೆಯಿದೆ ಎಂದು ಎಂಎನ್ ರೆಡ್ಡಿ ಹೇಳಿದ್ದಾರೆ. ಈ ನಡುವೆ ಶಾಲಾ ಆಡಳಿತ ಮಂಡಳಿ ಘಟನೆ ಬಗ್ಗೆ ಲಿಖಿತ ಹೇಳಿಕೆಯನ್ನು ಪೊಲೀಸರಿಗೆ ನೀಡಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಎಂಎನ್ ರೆಡ್ಡಿ ಹೇಳಿದ್ದೇನು? ಮುಂದೆ ಓದಿ...

MN Reddi, Bangalore Police Commissioner on Orchids School Rape Incident

* ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಂಗಳವಾರ ರಾತ್ರಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
* ಪೊಲೀಸರು ಶಾಲೆಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆಗೆ ಎಸಿಪಿ(ಮಲ್ಲೇಶ್ವರ) ಸಾರಾ ಫಾತಿಮಾ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. [ಆರ್ಕಿಡ್ಸ್ ಶಾಲೆಯಲ್ಲಿ ಅತ್ಯಾಚಾರ, ಆರೋಪಿ ಎಲ್ಲಿ?]
* ಶಾಲಾ ಅಡಳಿತ ಮಂಡಳಿಯಿಂದ ಗೈಡ್ ಲೈನ್ಸ್ ಅನುಸರಿಸಲಾಗಿದೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಇದನ್ನು ಪರಿಗಣಿಸಲಾಗುವುದು.
* ಡಿಸಿಪಿ ಸುರೇಶ್​ ನೇತೃತ್ವದಲ್ಲಿ ಶಾಲೆಯ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದೆ.
* ಒಟ್ಟು 6 ಜನ ಸಿಬ್ಬಂದಿ ಇದ್ದಾರೆ. ಆರು ಜನರ ವಿಚಾರಣೆ ಮುಗಿಸಲಾಗಿದೆ. ಇನ್ನೂ ನಾಲ್ಕು ಮಂದಿ ಕೆಲಸಕ್ಕೆ ಬಂದಿರಲಿಲ್ಲ.


* ಮಂಗಳವಾರದ ಸಿಸಿಟಿವಿ ಫುಟೇಜ್ ಈಗ ಲಭ್ಯವಾಗಿದೆ. ಮಗುವಿನ ತರಗತಿ ಬಳಿ ಹೊರಗಿನ ವ್ಯಕ್ತಿಗಳು ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
* ಘಟನೆ ನಡೆದ ದಿನ ಮೂರು ಬಾರಿ ಬಾಲಕಿ ತರಗತಿ ಕೊಠಡಿಯಿಂದ ಹೊರ ಬಂದಿರುವುದು ತಿಳಿದು ಬಂದಿದೆ.
*ಪ್ರತಿ ನರ್ಸರಿಗೂ ಒಬ್ಬ ಶಾಲಾ ಶಿಕ್ಷಕಿ ಇರುತ್ತಾರೆ. ತರಗತಿಯಿಂದ ಹೊರ ಹೋಗುವಾಗ ಆಯಾ ಜೊತೆ ಮಾತ್ರ ಕಳಿಸಲಾಗುತ್ತದೆ ಎಂದು ಆಡಳಿತ ಮಂಡಳಿ ಪತ್ರ ಬರೆದು ಪೊಲೀಸರಿಗೆ ತಿಳಿಸಿದೆ. [ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿ]

ದೂರಿನಲ್ಲಿ ಏನಿದೆ?: ಮಂಗಳವಾರ ಬೆಳಗ್ಗೆ 8.30ಗೆ ಶಾಲೆಗೆ ಬಂದಿದ್ದಾಳೆ. ಮಧ್ಯಾಹ್ನ 12.30 ಸುಮಾರಿಗೆ ಶಾಲೆಯಿಂದ ಮಗುವನ್ನು ಆಕೆ ತಂದೆ ಮನೆಗೆ ಕರೆದೊಯ್ದಿದ್ದಾರೆ. ಮನೆಗೆ ಬಂದ ಮಗು ತನಗೆ ಹೊಟ್ಟೆನೋವು ಎಂದು ಹೇಳಿದ್ದಾಳೆ. ತಾಯಿಗೆ ಅನುಮಾನ ಬಂದು ಪರೀಕ್ಷಿಸಿದಾಗ ಮಗುವಿನ ಗುಪ್ತಾಂಗದಲ್ಲಿ ಗಾಯವಾಗಿರುವುದು ಕಂಡು ಬಂದಿದೆ. ತಕ್ಷಣವೇ ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ನಂತರ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ನಂತರ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 ಅನ್ವಯ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

English summary
MN Reddi,Bangalore Police Commissioner on Orchids School Rape Incident:Case of child abuse reported yesterday with regard to girl child who was studying in nursery, Special team is investigating the case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X