ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಸಿಎಂ ಆಗಿದ್ದೇ ದೊಡ್ಡ ವ್ಯಂಗ್ಯ ಎಂದು ಟೀಕಿಸಿದ ತೇಜಸ್ವಿನಿ

By Nayana
|
Google Oneindia Kannada News

ಬೆಂಗಳೂರು, ಜು.27: 'ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದೇ ದೊಡ್ಡ ವ್ಯಂಗ್ಯ' ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್‌ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಟೀಕಿಸಿದರು.

ಎಚ್‌ಡಿ ಕುಮಾರಸ್ವಾಮಿ ಬಿಜೆಪಿಯವರನ್ನು ವ್ಯಂಗ್ಯದಿಂದ ಆಹ್ವಾನಿಸಿದ ವಿಚಾರ ಮಾತನಾಡಿದ ತೇಜಸ್ವಿನಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದೇ ದೊಡ್ಡ ವ್ಯಂಗ್ಯ, ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದರು ಭರವಸೆ ನೀಡಿದ್ದರೂ ಇದುವರೆಗೂ ಮನ್ನಾ ಆಗಿಲ್ಲ, ಅದರಲ್ಲೂ ಸಂಪೂರ್ಣ ಸಾಲ ಮನ್ನಾ ಮಾಡದಿದ್ದರಿಂದ ರೈತರ ಕಷ್ಟ ಇನ್ನೂ ಬರೆಹರಿದಿಲ್ಲ ಎಂದರು.

ದುರ್ಯೋಧನ- ದುಶ್ಶಾಸನರು ಸೇರಿ ರಾಜ್ಯದಲ್ಲಿ ಆಡಳಿತ: ತೇಜಸ್ವಿನಿ ಗೌಡ ದುರ್ಯೋಧನ- ದುಶ್ಶಾಸನರು ಸೇರಿ ರಾಜ್ಯದಲ್ಲಿ ಆಡಳಿತ: ತೇಜಸ್ವಿನಿ ಗೌಡ

ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಹೋರಾಟ ಮಾಡುತ್ತೇವೆ, ಯಾವುದೇ ರೈತರು ಬ್ಯಾಂಕ್‌ ಸಾಲ ಕಟ್ಟಬಾರದು, ಹೊರತಾಗಿ ಸಾಲಕೊಡಿ ಎಂದು ಅವರನ್ನು ಕೇಳಬೇಕು, ಸಾಲ ಕಟ್ಟಿ ಎಂದರೆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಉತ್ತರ ಹೇಳಿಕೊಳ್ಳಲಿ ಎಂದು ಹೇಳಿದರು.

MLC Tejaswini criticizes that irony of HDK became CM

ನಮ್ಮ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ರೈತ ಸಂಕಷ್ಟಗಳನ್ನು ದೂರ ಮಾಡುತ್ತದೆ, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗೇ ಆಗುತ್ತಾರೆ, ಜೆಡಿಎಸ್‌ ಕಾಂಗ್ರೆಸ್‌ ಜತೆಗೆ ಇನ್ನೊಮ್ಮೆ ಚರ್ಚೆ ನಡೆಸಿ ಸಂಪೂರ್ಣ ಸಾಲಮನ್ನಾ ಮಾಡುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಿ, ಕುಮಾರಸ್ವಾಮಿ ಅಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

English summary
Bjp MLC Tejaswini Ramesh criticized that it was an irony that H.D.Kumarswamy has became chief minister of the state even despite majority
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X