ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ; ನೋಟಿಸ್ ಜಾರಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 14: ಕಾಂಗ್ರೆಸ್ ಹೈಕಮಾಂಡ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1000 ಕೋಟಿ ರು. ನೀಡಿದ್ದಾರೆಂದು ಡೈರಿಯಲ್ಲಿ ಉಲ್ಲೇಖಿಸಿರುವುದಾಗಿ ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿಯಾಗಿದೆ.

ಇತ್ತೀಚೆಗೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಗೆ 1000 ಕೋಟಿ ರು. ಕಪ್ಪ ಕಾಣಿಕೆ ಸಲ್ಲಿಸಿದ್ದಾರೆ. ಹಾಗಾಗಿಯೇ ಅವರ ಕುರ್ಚಿ ಗಟ್ಟಿಯಾಗಿ ಉಳಿದಿದೆ ಎಂದು ಹೇಳಿದ್ದರು.[ಸಿದ್ದು ವಿರುದ್ಧ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ: ಯಡಿಯೂರಪ್ಪ]

MLC Govindaraju files defamation Case against Yadiyurappa

ತಮ್ಮ ಆರೋಪಕ್ಕೆ ಪೂರಕವಾಗಿ, ''ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು ಅವರ ಮನೆಯ ಮೇಲಾದ ತೆರಿಗೆ ಅಧಿಕಾರಿಗಳ ದಾಳಿಯ ವೇಳೆ ಅಧಿಕಾರಿಗಳ ಕೈಗೆ ಸಿಕ್ಕ ಗೋವಿಂದರಾಜು ಅವರ ಡೈರಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ ಎಂದೂ ಯಡಿಯೂರಪ್ಪ'' ತಿಳಿಸಿದ್ದರು.[ಚಿತ್ರ ಸುದ್ದಿ: ಕಾಂಗ್ರೆಸ್ ಸಿಡಿ ಸ್ಫೋಟ - ಈವರೆಗಿನ ಐದು ಬೆಳವಣಿಗೆ]

ಯಡಿಯೂರಪ್ಪ ಅವರ ಆರೋಪದ ವಿರುದ್ಧ ಕಿಡಿಕಾರಿದ್ದ ಗೋವಿಂದರಾಜು, ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸೋಮವಾರ ಗುಡುಗಿದರು. ಅದರಂತೆ, ಮಂಗಳವಾರ ಹೈಕೋರ್ಟ್ ನಲ್ಲಿ ಅವರು ಮೊಕದ್ದಮೆ ಹೂಡಿದ್ದು, ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.[ಹೈಕಮಾಂಡ್ ಗೆ ಕಪ್ಪ ವಿವಾದ: ಕುಮಾರಸ್ವಾಮಿ ಹೇಳಿದ್ದೇನು?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Member of Karnataka Legislative Assembly K. Govindaraju has filed the defamation case against former chief minister of Karnataka B.S. Yadiyurappa on the basis of later's '1000 crore to Congress Hicommand by CM Siddaramaiah' allegation.
Please Wait while comments are loading...