ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಗೆ ಸಚಿವ 'ಭಾಗ್ಯ'?

Posted By:
Subscribe to Oneindia Kannada

ಬೆಂಗಳೂರು, ಜೂನ್ 19: ಸಚಿವ ಸಂಪುಟ ಸೇರಲು ಇನ್ನಿಲ್ಲದ ಕಸರತ್ತು ನಡೆಸಿ ಸುಸ್ತಾದವರು ಬೆರಗಿನಿಂದ ನೋಡುವಂತೆ ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.

ಶಾಸಕ ಸಿಪಿ ಯೋಗೇಶ್ವರ್ ಅವರು ಭಾನುವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕಾಣಿಸಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಒತ್ತಡ, ಲಾಬಿ ನಡೆಸಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನಗಳನ್ನು ನಡೆಸಿ ಅಚ್ಚರಿ ಮೂಡಿಸಿದ್ದರು.[ಸಿದ್ದರಾಮಯ್ಯ ಸಂಪುಟ ಸೇರುವ ಶಾಸಕರ ಪಟ್ಟಿ]

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಯೋಗೇಶ್ವರ್, 'ನನಗೆ ಮಂತ್ರಿ ಪದವಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹೈಕಮಾಂಡ್ ನನಗೆ ನೀಡಿರುವ ಭರವಸೆ ಉಳಿಸಿಕೊಳ್ಳುವ ವಿಶ್ವಾಸವಿದೆ. ಆತ (ಡಿಕೆ ಶಿವಕುಮಾರ್) ಅಧ್ಯಕ್ಷ(ಕೆಪಿಸಿಸಿ) ನಾಗಲು ಯಾರ ಬೆಂಬಲ ಬೇಕಾಗಿಲ್ಲ. ಅದೇ ರೀತಿ ನನಗೆ ಸಚಿವನಾಗಲು ಯಾರ ಬೆಂಬಲ ಬೇಕಿಲ್ಲ' ಎಂದಿದ್ದಾರೆ. [ಸಂಪುಟದಿಂದ ಹೊರಹೋಗಲಿರುವ 13 ಸಚಿವರು]

MLA CP Yogeshwar Confident of getting Cabinet berth Siddaramaiah Governement

ಐದು ಬಾರಿ ಶಾಸಕನಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಈ ಹಿಂದೆ ಕೂಡಾ ಸಚಿವನಾಗಿ (ಬಿಜೆಪಿ ಸರ್ಕಾರ) ದುಡಿದ ಅನುಭವವಿದೆ. ಹೀಗಾಗಿ ನನ್ನನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡುವ ಭರವಸೆ ಇದೆ ಎಂದಿದ್ದಾರೆ. ಯೋಗೇಶ್ವರ್ ಅವರ ಈ ಮಟ್ಟದ ಆತ್ಮವಿಶ್ವಾಸ ವ್ಯಕ್ತಪಡಿಸಿರುವುದು ಎಲ್ಲರ ಹುಬ್ಬೇರಿಸಿದೆ.[ಸಿಐಡಿಗೆ ಬೇಕಾದ ಯೋಗೇಶ್ವರ್ ಗೆ ಸಚಿವ ಸ್ಥಾನ ಏಕೆ]

ಒಕ್ಕಲಿಗ ಕೋಟಾದ ಮೂಲಕ ಪ್ರವೇಶ: ಸಚಿವ ಸಂಪುಟದಲ್ಲಿ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಜೊತೆಗೆ ಮಂಡ್ಯದಿಂದ ವಸತಿ ಸಚಿವ ಅಂಬರೀಶ್ ಅವರ ಬದಲಿಗೆ ಚನ್ನಪಟ್ಟಣದಿಂದ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಲು ಒಂದು ಬಣ ಬೆಂಬಲ ವ್ಯಕ್ತಪಡಿಸಿದೆ. ಆದರೆ, ಒಕ್ಕಲಿಗ ಕೋಟಾದ ಮಾಜಿ ಸಂಸದೆ ರಮ್ಯಾ ಅವರನ್ನು ತಡವಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವ ಯತ್ನಗಳು ನಡೆದಿರುವ ಹಿನ್ನಲೆಯಲ್ಲಿ ಯೋಗೇಶ್ವರ್ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟಾಗುವ ಬೆಳವಣಿಗೆಗಳು ನಡೆದರೂ ಅಚ್ಚರಿ ಪಡಬೇಕಾಗಿಲ್ಲ.[ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಕೃಷ್ಣಪ್ಪ ಬೆಂಬಲಿಗರು]

ಖಾಸಗಿ ಟೌನ್‌ಶಿಪ್ ನಿವೇಶನ ಹಂಚಿಕೆ ಹಗರಣದಲ್ಲಿ ಸಿಲುಕಿದ್ದ ವೇಳೆಯಲ್ಲೇ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ಕಂಡಿದ್ದ ಯೋಗೇಶ್ವರ್ ಅವರು ಮಧ್ಯದಲ್ಲಿ 'ಸೈಕಲ್ ' ಸವಾರಿ ಮಾಡಿ ಸಮಾಜವಾದಿ ಎನಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ನಂತರ ಕಾಂಗ್ರೆಸ್ ಗೆ ಮರಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Channapatna MLA CP Yogeshwar Confident of getting Cabinet berth Siddaramaiah Government. Yogeshwar was made minister by then BJP government when he was facing illegal township distribution case.Now, he is confident of getting berth via Vokkaliga quota.
Please Wait while comments are loading...