ಆಧಾರ್ ಗೊಲ್ ಮಾಲ್: ಲಿಂಕ್ ಮಾಡಿ ಹಣ ಪಡೆದವರಾರು?

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ನವೆಂಬರ್ 11: ವಿದ್ಯಾರ್ಥಿನಿಯೊಬ್ಬಳು ಬ್ಯಾಂಕಿನಲ್ಲಿ ತನ್ನ ಹಣವನ್ನು ಬದಲಾಯಿಸಲು ಹೋದಾಗ ನಿಮ್ಮ ಆಧಾರ್ ಕಾರ್ಡ್ ಈಗಾಗಲೇ ಬೇರೊಂದು ಅಕೌಂಟಿಗೆ ಲಿಂಕ್ ಮಾಡಲಾಗಿದೆ ಹಣವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದಾಳೆ.

ಎಂಬಿಎ ಓದುತ್ತಿರುವ ಅಭಿಲಾಷಾ ಶುಕ್ರವಾರ ರೇಸ್ ಕೋರ್ಸ್ ರೋಡಿನ ವಿಜಯಾ ಬ್ಯಾಂಕಿಗೆ ಹೋಗಿದ್ದಾಳೆ. ದಾಖಲೆಗೆಂದು ಅಧಾರ್ ಕಾರ್ಡ್ ಅನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದಾಳೆ. ಅದನ್ನು ಬ್ಯಾಂಕ್ ಸಿಬ್ಬಂದಿಗೆ ನೀಡಿದ್ದು, ತನ್ನ ಕಂಪ್ಯೂಟರಿನಲ್ಲಿ ವೀಕ್ಷಿಸಿದ ಸಿಬ್ಬಂದಿ ನಿಮ್ಮ ನಂಬರ್ ಆಗಲೇ ಯಾರೋ ಬೇರೆ ಅಕೌಂಟಿಗೆ ಲಿಂಕ್ ಮಾಡಿಕೊಂಡಿದ್ದಾರೆ ಹಾಗು ಹಣ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳುತ್ತಿದ್ದಂತೆ ಅಭಿಲಾಷಾ ಆಘಾತಕ್ಕೊಳಗಾಗಿದ್ದು, ಹಣವನ್ನು ಪಡೆಬಹುದೆಂಬ ಆಸೆಯೂ ನಿರಾಸೆಯಾಗಿದೆ.[ಹಳೆ 500, 1,000 ನೋಟುಗಳ ವೈಕುಂಠ ಸಮಾರಾಧನೆ!]

misused to exchange currency without her knowledge

ಅಭಿಲಾಷಾ ಒನ್ ಇಂಡಿಯಾದೊಂದಿಗೆ ಮಾತನಾಡಿ, ನಾನು ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ನಿಮಗೆ ಸಹಾಯ ಮಾಡುವುದಾದರೆ ಯಾವುದಾದರೊಂದು ನಿಮ್ಮ ಐಡಿ ಕೇಳುತ್ತಿದ್ದಾರೆ. ಯಾರು ನನ್ನ ಆಧಾರ್ ಕಾರ್ಡ್ ಅನ್ನು ದುರುಪಯೋಗ ಮಾಡಿದ್ದಾರೆ. ಎಂಬುದಕ್ಕೆ ಉತ್ತರವೇ ಸಿಗುತ್ತಿಲ್ಲ ಎಂದು ಆಕೆ ಆದಾರ್ ದುರುಪಯೋಗ ಸಂಬಂಧ ಬೆಂಗಳೂರು ಪೊಲೀಸ್ ಪೇಸ್ ಬುಕ್ ಪೇಜಿನಲ್ಲಿ ಪರೀಕ್ಷಿಸಲು ಕೋರಿದ್ದಾಳೆ.[ಕೊಲ್ಲುತ್ತೇನೆಂದು ಬೆದರಿಸಿದರೂ 2 ಸಾವಿರಕ್ಕಿಂತ ಹೆಚ್ಚು ಹಣವಿಲ್ಲ]

ಬ್ಯಾಂಕ್ ಬೇರೆ ಪುರಾವೆಯನ್ನು ಕೇಳಿದ ಕಾರಣಕ್ಕೆ ದುರುಪಯೋಗ ತಿಳಿದಿದೆಯಾದರೂ ಬ್ಯಾಂಕಿನವರು ಹೇಳುವ ಪ್ರಕಾರ ನೀವು ನೀಡುವ ಮತ್ತೊಂದು ಐಡಿಯೂ ದುರುಪಯೋಗವಾಗಿದ್ದರೆ ಏನು ಮಾಡುವುದು. ನಿಮ್ಮ ಪ್ರಶ್ನೆ ಏನಿದ್ದರೂ ಹಿರಿಯ ಅಧಿಕಾರಿಗಳೊಂದಿಗೆ ಮಾತಾಡಿ ಎಂದು ವ್ಯವಸ್ಥಾಪಕರು ಕಳುಹಿಸಿದ್ದಾರೆ ಎಂದು ವಿದ್ಯಾರ್ಥಿನಿ ನೋಂದು ನುಡಿದಿದ್ದಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
he girl pursuing her MBA course was shocked when bank authorities on Friday told her that her Aadhar number was already used for a transaction and may not be able to use it to exchange currency.
Please Wait while comments are loading...