ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ನಿಗೂಢವಾಗಿ ನಾಪತ್ತೆಯಾಗಿದ್ದ 6 ವಿದ್ಯಾರ್ಥಿಗಳು ಪತ್ತೆ

By Manjunatha
|
Google Oneindia Kannada News

ಬೆಂಗಳೂರು, ಜೂನ್ 19: ನಿನ್ನೆ ಸಂಜೆ ಟ್ಯೂಷನ್‌ಗೆಂದು ತೆರಳಿ ನಾಪತ್ತೆಯಾಗಿದ್ದ 6 ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿರುವ ರಾಕೇಶ್ ಅವರ ಅತ್ತೆ ಮನೆಯಲ್ಲಿ ವಿದ್ಯಾರ್ಥಿಗಳು ಇರುವುದಾಗಿ ಮಾಹಿತಿ ದೊರೆತಿದ್ದು ಪೊಲೀಸರು ಹಾಗೂ ಮಕ್ಕಳ ಪೋಷಕರು ರಾಕೇಶ್ ಅವರ ಅತ್ತೆ ಮನೆಯಿರುವ ಮಾಗಡಿಗೆ ತೆರಳುತ್ತಿದ್ದಾರೆ.

ಬೆಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾದ ಐವರು ವಿದ್ಯಾರ್ಥಿಗಳುಬೆಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾದ ಐವರು ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ನಿನ್ನೆ ರಾತ್ರಿ ಕಾಮಾಕ್ಷಿಪಾಳ್ಯದಲ್ಲಿ ಟ್ಯೂಷನ್‌ಗೆಂದು ತೆರಳಿದ್ದರು ಆದರೆ ಟ್ಯೂಷನ್‌ಗೆ ಹೋಗದೆ ರಾತ್ರಿ ಮನೆಗೂ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡಿದ್ದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

Missing 6 students of Bengaluru found in Magadi

ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಸೇಂಟ್ ಕ್ಲಾರೆನ್ಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಒಬ್ಬನ ಬಳಿ ಮೊಬೈಲ್ ಇತ್ತು ಆದರೆ ಅದು ನಿನ್ನೆ ರಾತ್ರಿ ಸ್ವಿಚ್‌ಆಫ್ ಆಗಿತ್ತು.

ನಾಪತ್ತೆಯಾಗಿದ್ದ ವರುಣ್, ರಾಕೇಶ್, ಅನೂಪ್, ಚಂದನ್, ರೇಣು, ಸುಜನ್ ಅವರುಗಳನ್ನು ಪತ್ತೆ ಮಾಡಲು ವಿಜಯನಗರ ಎಸಿಪಿ ಪರಮೇಶ್ವರ್ ನೇತ್ರತ್ವದಲ್ಲಿ ಮಕ್ಕಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

English summary
Six students who gone missing from yesterday night were found in Magadi. they were in relatives house of Rakesh who is one of the missing students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X