ಉದ್ಯಾನನಗರಿ ಬೆಂಗಳೂರಿನಲ್ಲೂ ಭೂಕಂಪ?!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 18: ಮಂಡ್ಯ, ತುಮಕೂರು, ರಾಮನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪವಾಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿರುವಾಗಲೇ, ರಾಜಧಾನಿ ಬೆಂಗಳೂರಿನಲ್ಲೂ ಕೆಲವೆಡೆ ಭೂಕಂಪದ ಅನುಭವವಾಗಿದೆ ಎಂಬ ಮಾಹಿತಿ ಬಂದಿದೆ.

Minor earthquake in garden city Bengaluru

ಕೆಂಗೇರಿ, ಬಸವನಗುಡಿ, ಮಾಗಡಿ ರಸ್ತೆ, ಗಿರಿನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 7:30 ರ ಸಮಯದಲ್ಲಿ 2-3 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ರಾಜಧಾನಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ನಟಿ ಲೀಲಾವತಿ ಅವರ ಮನೆಯ ಗೋಡೆ ಬಿರುಕುಬಿಟ್ಟಿದೆ.

ಯಲಹಂಕ ನ್ಯೂಟೌನ್, ಹನುಮಂತನಗರ, ಶ್ರೀನಗರ, ನೆಲಮಂಗಲ ಮುಂತಾದ ಸ್ಥಳಗಳಲ್ಲೂ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.[ಮಂಡ್ಯ, ರಾಮನಗರದಲ್ಲಿ ಭೂಕಂಪ: ಆತಂಕದಲ್ಲಿ ಜನರು ]

ತಳ್ಳಿಹಾಕಿದ ಹವಾಮಾನ ಇಲಾಖೆ

ಭೂಕಂಪದ ಸುದ್ದಿಯನ್ನು ಹವಾಮಾನ ಇಲಾಖೆ ತಳ್ಳಿಹಾಕಿದ್ದು, ರಾಜ್ಯದ ಯಾವ ಭಾಗದಲ್ಲೂ ಭೂಕಂಪವಾಗಿರುವ ಬಗ್ಗೆ ರಿಕ್ಟರ್ ಮಾಪನದಲ್ಲಿ ಮಾಹಿತಿ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು ಹಲವರ ಅನುಭವಕ್ಕೆ ಬಂದಿದ್ದು, ರಾಜಧಾನಿಯ ಜನರು ಆತಂಕದಲ್ಲಿರುವುದಂತೂ ಸತ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Minor earthquake in few areas of state capital Bengaluru, Karnataka creates tension among the people. But Meteorological Department told, there is no records of earthquake in the richter scale.
Please Wait while comments are loading...