ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಲ್ದರ್ಜೆಗೇರಲಿವೆ ಭಾರತೀಯ ರೈಲ್ವೆಯ 90 ನಿಲ್ದಾಣಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 27: ಹೆಚ್ಚು ಪ್ರಯಾಣಿಕರನ್ನು ರೈಲ್ವೆ ಎಡೆಗೆ ಸೆಳೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಗೆ ಬರುವ 90 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ.

ಭಾರತೀಯ ರೈಲ್ವೆ ಇಲಾಖೆಗೆ ಒಳಪಡುವ 90 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ 90 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಪ್ರೇಕ್ಷಣೀಯ ಸ್ಥಳಗಳು, ದೇವಸ್ಥಾನಗಳು ಇರುವ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣ ಹಾಗೂ ಪ್ರತಿನಿತ್ಯ ಕನಿಷ್ಠ 45 ಸಾವಿರ ಪ್ರಯಾಣಿಕರು ಓಡಾಡುವ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತದೆ.

ಬಜೆಟ್ : ಬೆಂಗಳೂರು ಉಪನಗರ ರೈಲಿಗೆ 17 ಸಾವಿರ ಕೋಟಿಬಜೆಟ್ : ಬೆಂಗಳೂರು ಉಪನಗರ ರೈಲಿಗೆ 17 ಸಾವಿರ ಕೋಟಿ

ಭಾರತೀಯ ರೈಲ್ವೆಯು ಈಗಾಗಲೇ 600 ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿದೆ. ಹಲವಾರು ನಿಲ್ದಾಣಗಳಲ್ಲಿ ದೇಶದ ಇತಿಹಾಸ, ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಮಾಡಲು ತಯಾರಿ ನಡೆಸಲಾಗುತ್ತಿದೆ.

Ministry of Railways plans upgradation of 90 stations

ಶೀಘ್ರದಲ್ಲಿ ಅಜಂತ, ಯಲ್ಲೋರ ರೀತಿಯಲ್ಲಿ ಔರಂಗಾಬಾದ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತದೆ. ತಾಜ್ ಮಹಲ್ ಹತ್ತಿರವಿರುವ ಕಾರಣ ಆಗ್ರಾ, ಮಹಾಕಾಳೇಶ್ವರ ದೇವಾಲಯ ಹತ್ತಿರವಿರುವ ಉಜ್ಜೈನ್ ನಿಲ್ದಾಣ, ಬೆಳಗಾವಿಯ ರೈಲ್ವೆ ನಿಲ್ದಾಣ ಕೂಡ ಇದರಲ್ಲಿ ಒಂದಾಗಿದೆ. ಲಖನೌನ ಚಾರ್‌ಬಾಗ್, ಗೋಮ್ಟಿ ನಗರ, ತಿರುಪತಿ ರೈಲ್ವೆ ನಿಲ್ದಾಣ, ಪಾಂಡಿಚೇರಿ, ಗೋವಾದಲ್ಲಿ ಕೋಟಾ ನೆಲ್ಲೂರು ಎರ್ನಾಕ್ಯುಲಮ್ ರೈಲ್ವೆ ನಿಲ್ದಾಣಗಳು ಹೊಸ ವಿನ್ಯಾಸವನ್ನು ಪಡೆಯಲಿವೆ.

ಬಜೆಟ್ : ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್, ವೈ-ಫೈ, ಸಿಸಿಟಿವಿಬಜೆಟ್ : ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್, ವೈ-ಫೈ, ಸಿಸಿಟಿವಿ

English summary
In an attempt ti increase passenger amenities and to give an aesthetic makeover to the most visited stations across Indian Railways,Ministry of Railways formulated the plan to redevelop 90 stations across Indian railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X