ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಭೇಟಿ ಮಾಡಿದ ಸಚಿವ ಸ್ಥಾನ ಆಕಾಂಕ್ಷಿಗಳು, ಮತ್ತೆ ಲಾಬಿ ಶುರು

|
Google Oneindia Kannada News

Recommended Video

ಸಿದ್ದರಾಮಯ್ಯ ಭೇಟಿ ಮಾಡಿದ ಸಚಿವ ಸ್ಥಾನ ಆಕಾಂಕ್ಷಿಗಳು, ಮತ್ತೆ ಲಾಬಿ ಶುರು

ಬೆಂಗಳೂರು, ನವೆಂಬರ್ 27: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಸಚಿವಾಕಾಂಕ್ಷಿಗಳಾದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಮತ್ತು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಭೇಟಿ ಆಗಿದ್ದಾರೆ.

ಸಚಿವ ಸಂಪುಟಕ್ಕೆ ಚಾಲನೆ ದೊರೆತಿರುವ ಕಾರಣ ಸಿದ್ದರಾಮಯ್ಯ ಅವರನ್ನು ಸಚಿವಾಕಾಂಕ್ಷಿಗಳು ಭೇಟಿ ಮಾಡಿದ್ದಾರೆ. ಈ ಇಬ್ಬರು ಶಾಸಕರ ಜೊತೆಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸಹ ಇದ್ದರು. ಮೂವರೂ ಸಹ ಸಚಿವ ಸ್ಥಾನದ ಬಗ್ಗೆ ಸಿದ್ದರಾಮಯ್ಯ ಬಳಿ ಲಾಭಿ ಮಾಡಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರದಿಂದ ಅನುದಾನವೇ ಬರುತ್ತಿಲ್ಲ: ಸತೀಶ್ ಜಾರಕಿಹೊಳಿಸಮ್ಮಿಶ್ರ ಸರ್ಕಾರದಿಂದ ಅನುದಾನವೇ ಬರುತ್ತಿಲ್ಲ: ಸತೀಶ್ ಜಾರಕಿಹೊಳಿ

ಇದೇ ಮೂವರು ಶಾಸಕರು ಹಿಂದೊಮ್ಮೆ ಕಾಂಗ್ರೆಸ್‌ ವಿರುದ್ಧ ಬಂಡಾಯದ ಬಾವುಟ ಹಾರಿಸಿ ತಮಿಳುನಾಡಿಗೆ ತೆರಳಿದ್ದರು. ಅಂದು ಇವರು ಮೂವರೂ ಶಾಸಕರು ಬಿಜೆಪಿಗೆ ಸೇರಲೆಂದೇ ತಮಿಳುನಾಡಿನ ಹಾದಿ ಹಿಡಿದಿದ್ದಾರೆ ಎನ್ನಲಾಗಿತ್ತು. ಆದರೆ ಹಾಗೇನು ಆಗಲಿಲ್ಲ.

ಸಂಪುಟ ವಿಸ್ತರಣೆ ವಿಳಂಬ: ಅತೃಪ್ತ ಶಾಸಕರು ಚಳಿಗಾಲದ ಅಧಿವೇಶನದಿಂದ ಹೊರಗೆ?ಸಂಪುಟ ವಿಸ್ತರಣೆ ವಿಳಂಬ: ಅತೃಪ್ತ ಶಾಸಕರು ಚಳಿಗಾಲದ ಅಧಿವೇಶನದಿಂದ ಹೊರಗೆ?

ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದ ಈ ಮೂವರು ಶಾಸಕರು ಸಚಿವ ಸ್ಥಾನದ ಜೊತೆಗೆ ತಮ್ಮ ಕ್ಷೇತ್ರಕ್ಕೆ ಅನುದಾನದ ಕೊರತೆ ಆಗಿರುವ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗೋಲ್ಲ : 5 ಕಾರಣಗಳು!ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗೋಲ್ಲ : 5 ಕಾರಣಗಳು!

ಸಚಿವ ಸ್ಥಾನಕ್ಕೆ ಎಂಟಿಬಿ ಪಟ್ಟು

ಸಚಿವ ಸ್ಥಾನಕ್ಕೆ ಎಂಟಿಬಿ ಪಟ್ಟು

ಈಗ ಇದೇ ಶಾಸಕರು ಮತ್ತೆ ಸಿದ್ದರಾಮಯ್ಯ ಬಳಿ ಬಂದಿರುವುದು ಆಶ್ಚರ್ಯ ಕೆರಳಿಸಿದೆ. ಎಂಟಿಬಿ ನಾಗರಾಜು ಅವರು ಸತತ ಮೂರು ಬಾರಿ ಪ್ರಬಲ ಬಿಜೆಪಿ ಎದುರು ಗೆದ್ದಿದ್ದು ಕಳೆದ ಬಾರಿ ಸಹ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ದೊರೆತಿರಲಿಲ್ಲ. ಈ ಬಾರಿ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ಎಂಟಿಬಿ ಸಹ ಇದ್ದಾರೆ.

ಸುಧಾಕರ್ ಸಹ ಪ್ರಬಲ ಆಕಾಂಕ್ಷಿ

ಸುಧಾಕರ್ ಸಹ ಪ್ರಬಲ ಆಕಾಂಕ್ಷಿ

ಡಾ.ಸುಧಾಕರ್ ಸಹ ಎರಡು ಬಾರಿ ಶಾಸಕರಾಗಿದ್ದು ಅವರು ಸಹ ಪ್ರಬಲ ಆಕಾಂಕ್ಷಿಯೇ ಆಗಿದ್ದಾರೆ. ಅವರು ಆಗಾಗ್ಗೆ ಮೈತ್ರಿ ಸರ್ಕಾರದ ಮೇಲೆ ಟೀಕಾಪ್ರಹಾರ ನಡೆಸಿ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಇಂದು ಈ ಮೂವರು ಶಾಸಕರ ಸಿದ್ದರಾಮಯ್ಯ ಅವರ ಭೇಟಿ ಮಾಡಿದ ಬೆನ್ನಲ್ಲೆ ನಾಳೆ ಇನ್ನಷ್ಟು ಸಚಿವ ಸ್ಥಾನ ಆಕಾಂಕ್ಷಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಪರಮೇಶ್ವರ್ ಹೇಳಿದ್ದೇನು?

ಪರಮೇಶ್ವರ್ ಹೇಳಿದ್ದೇನು?

ಪರಮೇಶ್ವರ್ ಅವರು ಹೇಳಿರುವ ಪ್ರಕಾರ ಸದ್ಯಕ್ಕೆ ಸಂಪುಟ ವಿಸ್ತರಣೆ ಸಾಧ್ಯವಿಲ್ಲ. ಪಂಚರಾಜ್ಯಗಳ ಚುನಾವಣೆ ಮುಗಿದು ರಾಹುಲ್ ಗಾಂಧಿ ಅವರು ಪುರಸೊತ್ತು ಆದ ನಂತರವೇ ಸಚಿವ ಸಂಪುಟ ವಿಸ್ತರಣೆ ಎಂದಿದ್ದಾರೆ. ಪಂಚ ರಾಜ್ಯ ಚುನಾವಣೆ ಡಿಸೆಂಬರ್ 11 ಕ್ಕೆ ಮುಗಿಯಲಿದೆ. ಆದರೆ ಆ ವೇಳೆಗೆ ವಿಧಾನಸಭೆ ಅಧಿವೇಶನ ನಡೆಯುತ್ತಿರುತ್ತದೆ. ಹಾಗಾಗಿ ಅಧಿವೇಶನದ ನಂತರವೇ ಸಂಪುಟ ವಿಸ್ತರಣೆ ಖಾಯಂ.

ಯಾರ್ಯಾರು ಆಕಾಂಕ್ಷಿಗಳು?

ಯಾರ್ಯಾರು ಆಕಾಂಕ್ಷಿಗಳು?

ಕಾಂಗ್ರೆಸ್‌ ಬಳಿ 6 ಸಚಿವ ಸ್ಥಾನಗಳು ಇದ್ದರೆ, ಜೆಡಿಎಸ್‌ ಬಳಿ ಎರಡು ಸ್ಥಾನಗಳು ಇವೆ. ಕಾಂಗ್ರೆಸ್‌ನಲ್ಲಿ ಎಂಬಿ.ಪಾಟೀಲ್, ಎಚ್‌ಕೆ ಪಾಟೀಲ್, ಎಂಟಿಬಿ ನಾಗರಾಜು, ಸತೀಶ್ ಜಾರಕಿಹೊಳಿ, ಬಿಸಿ ಪಾಟೀಲ್, ರಾಮಲಿಂಗಾರೆಡ್ಡಿ, ತನ್ವೀರ್ ಸೇಠ್, ತುಕಾರಾಂ, ಆನಂದ್ ಸಿಂಗ್, ಮುನಿಯಪ್ಪ, ಸುಬ್ಬಾರೆಡ್ಡಿ, ಸುಧಾಕರ್ ಇನ್ನೂ ಹಲವು ಜನ ಸಚಿವ ಸ್ಥಾನ ಆಕಾಂಕ್ಷಿಗಳು ಇದ್ದಾರೆ.

English summary
Minister post aspirant congress MLAs met Siddaramaiah today and requested him to consider them in second cabinet expansion. MTB Nagraju, Dr Sudhakar and Subba Reddy met Siddaramaiah today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X