ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ರೇವಣ್ಣ ಮೇಲೆ ಸಿಟ್ಟಾದ ಕೃಷ್ಣಬೈರೇಗೌಡ, ಪರಮೇಶ್ವರ್‌ಗೆ ದೂರು

By Manjunatha
|
Google Oneindia Kannada News

ಬೆಂಗಳೂರು, ಜುಲೈ 16: ಖಾತೆ ಗಡಿ ಮೀರುತ್ತಿರುವ ಲೋಕೋಪಯೋಗಿ ಸಚಿವ ಎಚ್‌ಡಿ.ರೇವಣ್ಣ ಅವರ ಮೇಲೆ ಸಚಿವ ಕೃಷ್ಣಬೈರೇಗೌಡ ಅವರು ಸಿಟ್ಟಾಗಿದ್ದಾರೆ.

ಕೃಷ್ಣಬೈರೇಗೌಡ ಅವರ ಗ್ರಾಮೀಣಾಭಿವೃದ್ಧಿ ಖಾತೆಯಲ್ಲೂ ಮೂಗು ತೂರಿಸಿದ ರೇವಣ್ಣ ಅವರು ನಿರ್ದಿಷ್ಟ ಯೋಜನೆಗೆ ಸಂಬಂಧಿಸಿದ ಖಡತವನ್ನು ಇತ್ಯರ್ಥ ಮಾಡುವಂತೆ ಸಚಿವರಿಗೆ ಸೂಚಿಸಿದ್ದಾರೆ.

'ನನಗೂ ಸ್ವಾಭಿಮಾನ ಇದೆ': ಡಿಕೆಶಿ ಆರೋಪಕ್ಕೆ ರೇವಣ್ಣ ಗರಂ 'ನನಗೂ ಸ್ವಾಭಿಮಾನ ಇದೆ': ಡಿಕೆಶಿ ಆರೋಪಕ್ಕೆ ರೇವಣ್ಣ ಗರಂ

ರೇವಣ್ಣ ಅವರ ಸೂಚನೆಯನ್ನು ಸಾರಾಸಗಟು ತಳ್ಳಿ ಹಾಕಿರುವ ಕೃಷ್ಣಬೈರೇಗೌಡ ಅವರು, 'ಹಾಗೆಲ್ಲಾ ಒಮ್ಮೆಲೆ ಫೈಲ್ ಕ್ಲಿಯರ್ ಮಾಡಲಾಗದು, ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ಯಾಬಿನೆಟ್‌ನಲ್ಲಿ ಇಟ್ಟು ಆ ನಂತರ ಕ್ಲಿಯರ್ ಮಾಡುವುದಾಗಿ' ಹೇಳಿದ್ದಾರೆ.

Minister Krishna byre gowda angry on HD Revanna

ಲೋಕೋಪಯೋಗಿ ಸಚಿವರು ತಮ್ಮ ಖಾತೆ ಹೊರತಾಗಿ ಬೇರೆ ಖಾತೆಗಳಲ್ಲೂ ಮೂಗು ತೂರಿಸುತ್ತಿರುವುದು ಕೆಲವು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.

ಮೊದಲಿಗೆ ಜಲಸಂಪನ್ಮೂಲ ಇಲಾಖೆ ಆ ನಂತರ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಮೂಗು ತೂರಿಸಿದ್ದರು ಈಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೇಲೂ ಕಣ್ಣು ಹಾಕಿದ್ದಾರೆ.

ಸಿದ್ದರಾಮಯ್ಯ ಅವರನ್ನು ಭೇಟಿಯಾದ ಎಚ್.ಡಿ.ರೇವಣ್ಣ!ಸಿದ್ದರಾಮಯ್ಯ ಅವರನ್ನು ಭೇಟಿಯಾದ ಎಚ್.ಡಿ.ರೇವಣ್ಣ!

ರೇವಣ್ಣ ಅವರ ಈ ವರ್ತನೆಯಿಂದ ಸಿಟ್ಟಾಗಿರುವ ಸಚಿವ ಕೃಷ್ಣಬೈರೇಗೌಡ ಅವರು, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

English summary
Minister HD Revanna try to interfere in Krishna Byre Gowda's ministry so He is angry on Revanna and thinking to give complaint to DCM Parameshwar and leader Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X