ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಬ್ ಅರ್ಬನ್ ರೈಲ್ವೆಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್

By Mahesh
|
Google Oneindia Kannada News

ಬೆಂಗಳೂರು, ಫೆ.15: ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಮೆಟ್ರೋ ರೈಲಿನ ಜೊತೆಗೆ ಸಬ್ ಅರ್ಬನ್ ರೈಲು ಅಗತ್ಯವಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಕೇಂದ್ರ ಸಚಿವ ಅನಂತಕುಮಾರ್ ಮನವಿ ಮಾಡಿಕೊಂಡಿದ್ದು ಫಲ ನೀಡಿದೆ. ಸುಮಾರು 9 ಸಾವಿರ ಕೋಟಿ ರೂ. ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಉಪನಗರಗಳ ನಡುವೆ ರೈಲು ಮಾರ್ಗ ನಿರ್ಮಾಣ ಮಾಡುವ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ (ಫೆಬ್ರವರಿ 15) ದಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. [ಪೀಣ್ಯ-ನಾಗಸಂದ್ರ ಮೆಟ್ರೋ ಜೊತೆ ರಿಯಲ್ ಎಸ್ಟೇಟ್ ನಾಗಾಲೋಟ!]

ಮಂಡ್ಯ-ಕೆಂಗೇರಿ, ತುಮಕೂರು, ಯಶವಂತಪುರ, ವೈಟ್‌ಫೀಲ್ಡ್ -ಬೈಯಪ್ಪನಹಳ್ಳಿ, ನಡುವೆ ಸಬ್‌ಅರ್ಬನ್ ರೈಲ್ವೆ ಯೋಜನೆ ಜಾರಿಗೆ ತರುವ ಉದ್ದೇಶವಿದೆ ಎಂದು ತಿಳಿಸಿದರು.

ಮುಖ್ಯವಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಸಬ್ ಅರ್ಬನ್ ರೈಲು ಅಗತ್ಯವಿದ್ದು, ಹೊರವರ್ತುಲ ರಸ್ತೆಗಳಲ್ಲಿರುವ ಪ್ರಮುಖ ಬಡಾವಣೆಗಳಿಗೂ ನಗರದ ಒಳ ವಲಯಕ್ಕೂ ಸಂಪರ್ಕ ಒದಗಿಸಲು ಇದು ಅವಶ್ಯಕ ಎಂದು ಸಂಸದ ಅನಂತ್ ಕುಮಾರ್ ಅವರು ಮನವಿ ಸಲ್ಲಿಸಿದ್ದರು. [ಚೆನ್ನೈ ಮೆಟ್ರೋ ಟಿಕೆಟ್ ದರ ದೇಶದಲ್ಲೇ ಅಧಿಕ!]

ಸಬ್ ಅರ್ಬನ್ ರೈಲು ಯೋಜನೆ ಜೊತೆಗೆ ಹಾಲಿ ಸಂಚರಿಸುತ್ತಿರುವ ಲೋಕಲ್ ಟ್ರೈನ್ ಗಳ ಸಂಖ್ಯೆ ಹೆಚ್ಚಳಕ್ಕೂ ಒತ್ತು ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಇನ್ನಷ್ಟು ವಿವರ ಮುಂದಿದೆ...

 ಸಬ್ ಅರ್ಬನ್ ರೈಲು ಅಗತ್ಯವಿದೆಯೇ?

ಸಬ್ ಅರ್ಬನ್ ರೈಲು ಅಗತ್ಯವಿದೆಯೇ?

ಬೆಂಗಳೂರಿನ ನಗರವ್ಯಾಪ್ತಿಯ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಒದಗಿಸಲು ಮೆಟ್ರೋ ರೈಲಿನ ವಿವಿಧ ಹಂತಗಳಿವೆ. ಆದರೆ, ಬೆಂಗಳೂರು ಸುತ್ತಲಿನ 50 ಕಿ.ಮೀ.ಗೂ ಅಧಿಕ ವ್ಯಾಪ್ತಿಯಲ್ಲಿರುವ ಉಪ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಅಗತ್ಯವಿದೆ. ಹೀಗಾಗಿ ಸಬ್ ಅರ್ಬನ್ (ಕಮ್ಯೂಟರ್) ರೈಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ, ಪ್ರಸ್ತುತ ಯೋಜನೆಯಂತೆ ಮಂಡ್ಯ, ತುಮಕೂರಿಗೂ ರೈಲು ಸಂಪರ್ಕ ಸಿಗಲಿದೆ.

ನಾಗರಿಕರಿಂದ ಹೆಚ್ಚಿದ ಒತ್ತಡ ಹಾಗೂ ಅಗತ್ಯ

ನಾಗರಿಕರಿಂದ ಹೆಚ್ಚಿದ ಒತ್ತಡ ಹಾಗೂ ಅಗತ್ಯ

ವಿಜಯನಗರದಿಂದ ವೈಟ್ ಫೀಲ್ಡ್ ನಿಂದ ಬಿಎಂಟಿಸಿ ಮೂಲಕ ಹೋಗುವುದಕ್ಕಿಂತ ರೈಲಿನಲ್ಲಿ 35 ನಿಮಿಷಗಳ ನಗರ ರೈಲ್ವೆ ನಿಲ್ದಾಣದಿಂದ ವೈಟ್ ಫೀಲ್ಡ್ ಗೆ ಕ್ರಮಿಸಬಹುದು. ಸರಿ ಸುಮಾರು 25,000ಕ್ಕೂ ಅಧಿಕ ಮಂದಿ ಲೋಕಲ್ ರೈಲು ಬಳಕೆದಾರರಂತೆ ಗುರುತಿಸಿಕೊಂಡಿದ್ದಾರೆ. ಈ ವ್ಯವಸ್ಥೆಯಲ್ಲಿ ಸಬ್ ಅರ್ಬನ್ ರೈಲು ಪರಿಚಯಿಸಿದರೆ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ನಾಗರಿಕ ಸಮಿತಿಯ ಮಹೇಶ್ ಎಂ ವಿವರಿಸಿದ್ದಾರೆ.

ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ

ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ

ಬೆಂಗಳೂರಿನಲ್ಲಿನ ರೈಲು ನಿಲ್ದಾಣಗಳ ಮೂಲಕ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಒಟ್ಟು 204 ಕಿ.ಮೀ. ಉದ್ದದ 15 ಮಾರ್ಗಗಳು ಇದರಲ್ಲಿ ಬರಲಿವೆ. ಯೋಜನೆಯ ವೆಚ್ಚ 8.5 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.ರಾಜ್ಯ ಭೂ ಸಾರಿಗೆ ನಿರ್ದೇಶನಾಲಯದ ಪ್ರಸ್ತಾವನೆಯಂತೆ ಯೋಜನೆಗೆ ರಾಜ್ಯ ಸರ್ಕಾರ 2013ರಲ್ಲೇ ಅನುಮೋದನೆ ನೀಡಲಾಗಿದೆ.ಆದರೆ, ಯೋಜನೆ ಮಂಜೂರಾತಿ ಮಾಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ

ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ

ಸಬ್ ಅರ್ಬನ್ ರೈಲು ಯೋಜನೆಗೆ ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ. ಇರುವ ನಿಲ್ದಾಣಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಲೋಕಲ್ ಟ್ರೈನ್ ಸಂಚಾರ ಆರಂಭವಾದರೆ ಶೇ.40ರಷ್ಟು ಸಂಚಾರ ಸುಗಮವಾಗುತ್ತದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಾಗರಿಕರೊಬ್ಬರು ಹಾಲಿ ಸಂಚರಿಸುತ್ತಿರುವ 32 ಲೋಕಲ್ ಟ್ರೈನ್ ಗಳ ಸಂಖ್ಯೆಯನ್ನು 68ಕ್ಕೇರಿಸಿದರೆ ಸಾಕು. ರೈಲ್ವೆ ಟರ್ಮಿನಲ್ ನಿರ್ಮಾಣ ಸದ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ಯೋಜನೆಗೆ ಚಾಲನೆ ನೀಡಬಹುದು ಎಂದಿದ್ದಾರೆ.

English summary
City Development Minister K J George sadi Union government has agreed to the proposal to develop a suburban rail system linking it to the Metro network. The first phase of this system, he had informed, would link Tumakuru with Yeshwantpur, Whitefield with Baiyappanahalli and Mandya with Kengeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X