ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜಾವಧೂತ ಸ್ವಾಮೀಜಿ ಜತೆ ತಡರಾತ್ರಿ ಎಚ್‌.ಡಿ. ರೇವಣ್ಣ ಮಾತುಕತೆ

|
Google Oneindia Kannada News

Recommended Video

ಪಟ್ಟನಾಯಕನಹಳ್ಳಿ ಶ್ರೀ ಸ್ಫಟಿಕಪುರಿ ನಂಜಾವಧೂತ ಸ್ವಾಮೀಜಿಗಳನ್ನ ಭೇಟಿ ಮಾಡಿದ ಎಚ್ ಡಿ ರೇವಣ್ಣ | Oneindia Kannada

ಬೆಂಗಳೂರು, ಜೂನ್ 8: ನೂತನ ಸಚಿವ ಎಚ್‌.ಡಿ. ರೇವಣ್ಣ ಅವರು ಪಟ್ಟನಾಯಕನಹಳ್ಳಿ ಶ್ರೀ ಸ್ಫಟಿಕಪುರಿ ಮಹಾಸಂಸ್ಥಾನದ ಶಾಖಾಮಠಕ್ಕೆ ಗುರುವಾರ ತಡರಾತ್ರಿ ಭೇಟಿ ನೀಡಿದರು.

ಬೆಂಗಳೂರಿನ ಉಲ್ಲಾಳದಲ್ಲಿರುವ ಶಾಖಾಮಠಕ್ಕೆ ಬೆಂಬಲಿಗರ ಜತೆ ತೆರಳಿದ ರೇವಣ್ಣ, ಶ್ರೀ ನಂಜಾವಧೂತ ಸ್ವಾಮೀಜಿ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಸಮಯ ಗೋಪ್ಯ ಮಾತುಕತೆ ನಡೆಸಿದರು.

ಇನ್ನೊಂದು ತಿಂಗಳಲ್ಲಿ ಜೆಡಿಎಸ್ ಸಚಿವರೊಬ್ಬರ ರಾಜೀನಾಮೆಯಂತೆ, ಯಾರದು?ಇನ್ನೊಂದು ತಿಂಗಳಲ್ಲಿ ಜೆಡಿಎಸ್ ಸಚಿವರೊಬ್ಬರ ರಾಜೀನಾಮೆಯಂತೆ, ಯಾರದು?

ಪ್ರಸ್ತುತದ ರಾಜಕೀಯ ವಿದ್ಯಮಾನಗಳ ಕುರಿತು ಸ್ವಾಮೀಜಿ ಮತ್ತು ಎಚ್.ಡಿ. ರೇವಣ್ಣ ಅವರು ಸಮಾಲೋಚನೆ ನಡೆಸಿದರು. ಸ್ವಾಮೀಜಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

minister hd revanna met nanjavadhootha swamiji at late night

ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿರುವ ಕಾರಣ ಸರ್ಕಾರವನ್ನು ಕೊನೆವರೆಗೂ ಉಳಿಸಿಕೊಳ್ಳಲು ಪ್ರತಿ ಹಂತದಲ್ಲೂ ಎಚ್ಚರಿಕೆಯ ನಡೆ ಅನುಸರಿಸಲು ಸ್ವಾಮೀಜಿ ಸಲಹೆ ನೀಡಿದರು ಎನ್ನಲಾಗಿದೆ.

ಕ್ಷಮಿಸಿ, ದೇವೇಗೌಡರದು ಕುಟುಂಬ ರಾಜಕಾರಣ ಅಲ್ಲವೇ ಅಲ್ಲ!ಕ್ಷಮಿಸಿ, ದೇವೇಗೌಡರದು ಕುಟುಂಬ ರಾಜಕಾರಣ ಅಲ್ಲವೇ ಅಲ್ಲ!

ಕೊಡುವ ಮತ್ತು ತೆಗೆದುಕೊಳ್ಳುವ ಮನೋಧರ್ಮವನ್ನು ಪಾಲಿಸಿದರೆ ಮಾತ್ರ ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿರುತ್ತದೆ. ಆರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಉಭಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸಾಗುವುದು ಅನಿವಾರ್ಯ ಎಂದು ಸ್ವಾಮೀಜಿ ಹೇಳಿದರು.

ಡಿಕೆಶಿ- ರೇವಣ್ಣ ಜಗಳ ಹತ್ತಲ್ಲ, ಹರಿಯಲ್ಲ ಏಕೆ? ಜ್ಯೋತಿಷ್ಯ ವಿಶ್ಲೇಷಣೆ ಡಿಕೆಶಿ- ರೇವಣ್ಣ ಜಗಳ ಹತ್ತಲ್ಲ, ಹರಿಯಲ್ಲ ಏಕೆ? ಜ್ಯೋತಿಷ್ಯ ವಿಶ್ಲೇಷಣೆ

minister hd revanna met nanjavadhootha swamiji at late night

ಪ್ರತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಸಚಿವ ಸಂಪುಟ‌ ರಚನೆ ವಿಚಾರದಲ್ಲಿ, ಖಾತೆ ಹಂಚಿಕೆ ಸಮಯದಲ್ಲಿ ಜನಪ್ರತಿನಿಧಿಗಳ ನಡುವೆ ಅಸಮಾಧಾನ, ಭಿನ್ನಮತ ಹೊಸತಲ್ಲ.

ಈ ಎಲ್ಲ ಗೊಂದಲಗಳನ್ನೂ ನಿಭಾಯಿಸಿಕೊಂಡು ಹೋಗಬೇಕು. ಅಭಿವೃದ್ಧಿಪರ, ರೈತಪರ ಆಡಳಿತ ನಡೆಸುವಂತೆ ಸ್ವಾಮೀಜಿ ಕಿವಿಮಾತು ಹೇಳಿದರು ಎಂದು ಮೂಲಗಳು ಹೇಳಿವೆ.

English summary
Minister HD Revanna visited Sphatikapuri Mahasansthan's shakha branch in Ullal on Thursday late night. He had a discussion with Nanjavadhootha swamiji regarding the present situation of karnataka politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X