ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ-ಬಿಟಿ ಮುಖ್ಯಸ್ಥರ ಭೇಟಿ ಮಾಡಿ ಕ್ಷೇತ್ರ ಬೆಳವಣಿಗೆ ಮಾಹಿತಿ ಪಡೆದ ಜಾರ್ಜ್

By Nayana
|
Google Oneindia Kannada News

Recommended Video

ಐಟಿ-ಬಿಟಿ ಮುಖ್ಯಸ್ಥರ ಭೇಟಿ ಮಾಡಿ ಕ್ಷೇತ್ರ ಬೆಳವಣಿಗೆ ಮಾಹಿತಿ ಪಡೆದ ಜಾರ್ಜ್ | Oneindia Kannada

ಬೆಂಗಳೂರು, ಜೂನ್ 27: ಸಚಿವ ಕೆ.ಜೆ. ಜಾರ್ಜ್ ಅವರು ಇದೇ ಮೊದಲ ಬಾರಿಗೆ ಮೆಡಿಸಿನ್, ಬಯೋಟೆಕ್ನಾಲಜಿ ಹಾಗೂ ವಿಜ್ಞಾನ ಕ್ಷೇತ್ರದ ಮುಖ್ಯಸ್ಥರನ್ನು ಭೇಟಿ ಮಾಡಿ ಕ್ಷೇತ್ರದ ಬೆಳವಣಿಗೆಯನ್ನು ತಿಳಿದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸಂಶೋಧನೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೂಲಸೌಕರ್ಯದಿಂದ ಕೂಡಿದ ಹಾಸ್ಟೆಲ್‌ ಸ್ಥಾಪಿಸಲಾಗಿದೆ. 2500 ವಿಸ್ತೀರ್ಣದಲ್ಲಿ ನಿರ್ಮಿಇಸಿರುವ ಈ ಹಾಸ್ಟೆಲ್‌ನಲ್ಲಿ 24 ಡಬಲ್‌ ಬೆಡ್‌ ರೂಂ ಹಾಗೂ ನಾಲ್ಕು ಸ್ಟುಡಿಯೋ ಅಪಾರ್ಟ್‌ಮೆಂಟ್‌ ಒಳಗೊಂಡಿದ್ದು, 7.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

'ಸಂಶೋಧನೆ ಸಮಾಜಕ್ಕೆ ತಲುಪಿಸುವುದೇ ವಿಜ್ಞಾನಿಗಳಿಗೆ ಸವಾಲು''ಸಂಶೋಧನೆ ಸಮಾಜಕ್ಕೆ ತಲುಪಿಸುವುದೇ ವಿಜ್ಞಾನಿಗಳಿಗೆ ಸವಾಲು'

ಮೂಲಸೌಕರ್ಯದಿಂದ ಪುನರ್‌ನಿರ್ಮಾಣ ಮಾಡಿರುವ ಹ್ಯೂಮನ್‌ ಜೆನೆಟಿಕ್ ಕೇಂದ್ರದ ಹಾಸ್ಟೆಲ್‌ ಉದ್ಘಾಟಿಸಿದರು. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ 2017-18ನೇ ಸಾಲಿನಲ್ಲಿ ಸುಮಾರು 700 ಕೋಟಿ ರೂ. ಅನುದಾನ ನೀಡಲಾಗಿದೆ. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು. ಹೀಗಾಗಿ ಹಾಸ್ಟೆಲ್‌ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

Minister George meets IT-BT industrialists

ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಬಯೋ ಇನ್ಫಾರ್ಮಾಟಿಕ್ಸ್‌ ಅಂಡ್ ಅಪ್ಲೈಡ್‌ ಬಯೋ ಟೆಕ್ನಾಲಜಿ ಸಂಸ್ಥಗೆ ಭೇಟಿ ನೀಡಿದ್ದ ಅವರು ಡಾ. ಕಿರಣ್‌ ಮಜುಂದಾರ್‌ ಷಾ ಹಾಗೂ ಕ್ರಿಸ್ ಗೋಪಾಲಕೃಷ್ಣ, ಕೃಷ್ಣಕುಮಾರ್‌ ಅವರೊಂದಿಗೆ ಚರ್ಚಿಸಿದರು.

English summary
Industries minister K.J.George has met many IT, BT Industrialists including Biocon chief Dr. Kiran Muzumdar Shaw to discuss about the development of the concern industry in Bangalore and provide infrastructure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X