ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಕೆ ನನ್ನ ಮಗಳಿದ್ದಂತೆ. ಹಲ್ಲೆ ನಡೆದಿಲ್ಲ : ಡಿಕೆ ಶಿವಕುಮಾರ್

By Mahesh
|
Google Oneindia Kannada News

ಬೆಂಗಳೂರು, ಮಾ.13: ಟಿವಿ 9 ಸಂಸ್ಥೆ ನಡೆಸಿದ ಸ್ಟಿಂಗ್ ಅಪರೇಷನ್ ಪ್ರಕರಣದ ಬಗ್ಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಟಿವಿ 9 ಪ್ರತಿನಿಧಿ ನನ್ನ ಮಗಳಿದ್ದಂತೆ ಆಕೆ ಮೇಲೆ ಹಲ್ಲೆ ನಡೆಸಿಲ್ಲ. ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ಸಂಚು ರೂಪಿಸಲಾಗಿದೆ. ನನಗಾಗಿರುವ ಅನ್ಯಾಯಕ್ಕೆ ಮೊದಲು ನ್ಯಾಯ ಕೊಡಿ ಎಂದು ಡಿಕೆ ಶಿವಕುಮಾರ್ ಕೇಳಿಕೊಂಡರು

ಅವರು ನನಗೆ ಲಂಚ ನೀಡಲು ಮುಂದಾದರು. ನಾನು ಅದನ್ನು ತಪ್ಪಿಸಿ ಕಾನೂನು ರೀತಿ ಯಾವ ಕ್ರಮ ತೆಗೆದುಕೊಳ್ಳಬೇಕೋ ಹಾಗೆ ಮಾಡಿದೆ. ನಂತರ ಅವರ ಸಂಸ್ಥೆಯಿಂದ ಕರೆ ಬಂತು ಸ್ಟಿಂಗ್ ಆಪರೇಷನ್ ಮಾಡಿದ್ದು ನಾವೇ, ಇನ್ನೂ ಮೂರ್ನಾಲ್ಕು ಇದೇ ರೀತಿ ರಹಸ್ಯ ಕಾರ್ಯಾಚರಣೆ ಯೋಜನೆ ಹಾಕಿಕೊಂಡಿದ್ದೇವೆ ಎಂದರು. ಡಿಕೆ ಶಿವಕುಮಾರ್ ಅವರ ಸುದ್ದಿ ಗೋಷ್ಠಿ ವಿವರ ಮುಂದಿದೆ: [ಟಿವಿ 9 ಪ್ರತಿನಿಧಿಗಳಿಗೆ ಜಾಮೀನು]

* ಮಾದ್ಯಮದವರ ಸ್ಟಿಂಗ್ ಅಪರೇಷನ್ ಹಾಗೂ ವ್ಯವಸ್ಥೆಗಳು ಬದಲಾಗಬೇಕು ಅಥವಾ ನಿಲ್ಲಿಸಬೇಕು.
* ಈ ರಾಜ್ಯಕ್ಕೆ ಸಾಕಷ್ಟು ನಾಯಕರನ್ನು ನೀಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನಾಲ್ಕು ಬಾರಿ ನಿರಂತರ ಆಯ್ಕೆ ಯಾಗುತ್ತಾ ಬಂದಿದ್ದೇನೆ.
* ನನ್ನ ತಮ್ಮ(ಡಿಕೆ ಸುರೇಶ್)ನಿಗೂ ಇದೀಗ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಹೀಗೇ ನನ್ನ ಕುಟುಂಬದ ರಾಜಕೀಯ ಏಳಿಗೆಯನ್ನೇ ಬುಡ ಸಮೇತ ಕಿತ್ತು ಹಾಕಬೇಕೆಂಬ ಲೆಕ್ಕಾಚಾರದಿಂದ ನನ್ನ ರಾಜಕೀಯ ವೈರಿಗಳು ಸಾಕಷ್ಟು ಷಡ್ಯಂತ್ರ ನಡೆಸಿದ್ದಾರೆ.
*ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ನಡೆಸಿದ್ದಾರೆ. ನನ್ನ ಎಲ್ಲಾ ವೈರಿಗಳ ಆರೋಪಗಳನ್ನು ಸೂಕ್ಷ್ಮವಾಗಿ ಗಮನಿಸಿ, ನನ್ನನ್ನು ಹತ್ತಿರದಿಂದ ನೋಡಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನನಗೆ ಸಚಿವ ಸ್ಥಾನ ನೀಡಿದ್ದಾರೆ.
* ಇಂಧನ ಸಚಿವನಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಸುಧಾರಣೆ ಕಾರ್ಯಕ್ಕೆ ಮುಂದಾಗಿದ್ದೇನೆ. ಯಾರೂ ಮಾಡದ ಸಾಧನೆಗಳ ಮೈಲಿಗಲ್ಲುಗಳನ್ನು ಒಬ್ಬ ಸಚಿವನಾಗಿ ಮಾಡುತ್ತಿದ್ದೇನೆ.

ನನ್ನನ್ನು ರಾಜಕೀಯವಾಗಿ ತುಳಿಯಲು ಯತ್ನ

ನನ್ನನ್ನು ರಾಜಕೀಯವಾಗಿ ತುಳಿಯಲು ಯತ್ನ

* ನನ್ನನ್ನು ರಾಜಕೀಯವಾಗಿ ತುಳಿಯಲು ಈ ರೀತಿ ಕೆಲವೊಂದು ಮಾದ್ಯಮದ ಮುಖಾಂತರ ಸ್ಟ್ರಿಂಗ್ ಅಪರೇಶನ್ ಮಾಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ
* ಟಿ.ವಿ 9 ಸಂಸ್ಥೆಯ ಮಿಶ್ರಾ ನನ್ನನ್ನು ರಾಜಕೀಯವಾಗಿ ಮುಗಿಸಿ ಹಾಕಲು ನನ್ನ ವಿರುದ್ಧ ಈ ರೀತಿಯ ಲಂಚದ ಆಮಿಷವೊಡ್ಡಿ ನನ್ನನ್ನೇ ಇಕ್ಕಟ್ಟಿಗೆ ಸಿಲುಕಿಸಿ ನನ್ನ 30 ವರ್ಷಗಳ ರಾಜಕೀಯ ಜೀವನವನ್ನೇ ಮುಗಿಸಿ ಹಾಕಲು ಯತ್ನಿಸಿದ್ದಾರೆ.
* ಒಂದಲ್ಲಾ ಹತ್ತಾರು ರಾಜಕಾರಣಿಗಳಿಂದ ಈ ಮಾದ್ಯಮ ಸಂಸ್ಥೆ ಸುಳಿಗೆ ಮಾಡಿದೆ. ಕಳೆದ ಚುನಾವಣೆಯಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಲೇ ಇದ್ದಾರೆ.

* ನನಗೆ ಫೋನ್ ಮಾಡಿ ನಿಮ್ಮ ವಿರುದ್ಧದ ದಾಖಲೆಗಳಿದೆ. ಇನ್ನೂ ಮೂರು ದಾಖಲೆಗಳಿದೆ. ಅದನ್ನೂ ಮಾದ್ಯಮದಲ್ಲಿ ಪ್ರಸಾರ ಮಾಡಬೇಕಾಗುತ್ತದೆ. ನಿಮ್ಮ ಜತೆ ನಮ್ಮ ಬಾಸ್ ಮಾತನಾಡಬೇಕು. ಎಂದೆಲ್ಲಾ ಬೆದರಿಸಿ ಹಣ ವಸೂಲಿ ಮಾಡುವ ಯತ್ನ ನಡೆಸಿದ್ದರು.
ಪತ್ರಕರ್ತರಿಗೆ ಹೊಡೆಸುವುದರಿಂದ ಏನು ಸಿಗುತ್ತದೆ

ಪತ್ರಕರ್ತರಿಗೆ ಹೊಡೆಸುವುದರಿಂದ ಏನು ಸಿಗುತ್ತದೆ

* ಅಲ್ಲಾರಿ ಪತ್ರಕರ್ತರಿಗೆ ಹೊಡೆಸುವುದರಿಂದ ನನಗೆ ಏನು ಸಿಗುತ್ತದೆ. ಈ ಕಾರ್ಯಾಚರಣೆಯಿಂದ ಲಾಭವೇನಿದ್ದರೂ ಮಿಶ್ರಾಗೇ ಗೊತ್ತಿರಬೇಕು.
* ಪೊಲೀಸರಿಗೆ ಮಾಹಿತಿ ನೀಡಿ ಮಾದ್ಯಮದ ವ್ಯವಸ್ಥಿತ ಸಂಚನ್ನು ಬಹಿರಂಗಗೊಳಿಸಿದ್ದೇನೆ. ನಾನು ಶುದ್ಧನಿದ್ದೇನೆ. ಲಂಚ ಪಡೆದು ಬದುಕುವ ದರ್ದು ನನಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟು ಸೇವೆ ಮಾಡುತ್ತಿದ್ದೇನೆ.
* ನನಗೆ ಹೆಣ್ಣು ಮಕ್ಕಳ ಮೇಲೆ ಗೌರವವಿದೆ. ಆದರೆ, ಇಲ್ಲಿ ನನ್ನ ವಿರುದ್ಧ ಸ್ಟ್ರಿಂಗ್ ಅಪರೇಷನ್'ಗೆ ಬಂದಿದ್ದ ಯುವತಿಯೊಬ್ಬಳು ಎಷ್ಟು ಚೆನ್ನಾಗಿ ನಾಟಕ ಮಾಡಿದ್ದಳೆಂದರೆ ಸತ್ಯವಾಗಿಯೂ ನನಗೆ ಅಷ್ಟು ಬೇಗ ಅರಿವಾಗಲೇ ಇಲ್ಲ. ಡ್ರೈವರ್ ಕೂಡಾ ಚೆನ್ನಾಗಿ ನಟಿಸಿದ.

ತುಂಬಾ ಚೆನ್ನಾಗಿ ಇಂಗ್ಲೀಷ್ ಮಾತನಾಡಿದ್ದಳು

ತುಂಬಾ ಚೆನ್ನಾಗಿ ಇಂಗ್ಲೀಷ್ ಮಾತನಾಡಿದ್ದಳು

* ಪಾಪ ಏನು ಮಾಡುವುದು ಆ TV9 ಮಿಶ್ರಾ ಇವಳಿಗೆ ಹಣ ಕೊಟ್ಟು ಹೀಗೆಲ್ಲಾ ಮಾಡು ಎಂದಿರ್ತಾನೆ ಅದಕ್ಕಾಗಿ ಈಕೆ ಹೀಗೆ ಮಾಡಿದ್ದಾಳೆ.
ತುಂಬಾ ಚೆನ್ನಾಗಿ ಇಂಗ್ಲೀಷ್ ಮಾತನಾಡಿದ್ದಳು. ಥೇಟ್ ವಿದೇಶದಿಂದ ಬಂದಂತೆ ಮಾತನಾಡಿದ್ದಳು. ಕನ್ನಡದ ಅಕ್ಷರವೇ ಬಾರದಂತೆ ಮಾತನಾಡಿದ್ದಳು ಪಾಪ. ಲಂಚ ಪಡೆದು ಜೀವನ ಮಾಡುವ ಪರಿಸ್ಥಿತಿ ನನಗಿಲ್ಲ.
* ಯುದ್ಧಕ್ಕೆ ಹೊರಟ ಸಂದರ್ಭದಲ್ಲಿ ತಮ್ಮ ವಿರುದ್ಧ ನಮ್ಮ ಅಣ್ಣನೋ ಅಥವಾ ಮಾವನೋ ಯಾರೇ ಎದುರಿಗೆ ಕೊಲೆ ಮಾಡಲು ಬಂದರೂ ಅದ್ಯಾವುದನ್ನೂ ನೋಡಲೇ ಬಾರದು.

TV9 ಮಾದ್ಯಮದ ಮಿಶ್ರಾ ಯಾರು

TV9 ಮಾದ್ಯಮದ ಮಿಶ್ರಾ ಯಾರು

* TV9 ಮಾದ್ಯಮದ ಮಿಶ್ರಾ ಯಾರು, ಆತ ಎಲ್ಲಿಂದ ಬಂದ, ಬಂದಾಗ ಏನಿತ್ತು, ಈಗ ಏನಿದೆ, ಎಷ್ಟೆಲ್ಲಾ ಆಸ್ತಿ ಮಾಡಿದ್ದಾನೆ, ಎಲ್ಲೆಲ್ಲಿ ಆಸ್ತಿ ಮಾಡಿದ್ದಾನೆ ಎಂಬೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನೀವೇ ಒಂದು ಸ್ಟಿಂಗ್ ಆಪರೇಷನ್ ಮಾಡಿ ಸಾಕು ಸತ್ಯ ಹೊರಬರುತ್ತದೆ.
* TV 9 ಮಾದ್ಯಮದ ಸಿಬ್ಬಂದಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು. ವಿಚಾರಣೆ ಕೋರ್ಟಿನಲ್ಲಿದೆ ಎಂದು ಹೇಳಿ ಡಿಕೆ ಶಿವಕುಮಾರ್ ಮೈಕ್ ಪಕ್ಕಕ್ಕಿಟ್ಟು ಎದ್ದರು.

English summary
Minister DK Shivakumar denies reports of his men assualting on TV 9 Journalists. Two reporters of the 24×7 Kannada news channel TV9 alleged DK Shivakumar and his men attacked following a 'sting' operation in which they were reportedly trying to entrap a powerful and controversial Congress minister DK Shivakumar by offering him a bribe with secret cameras, went awry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X