ಲಾಲ್ ಬಾಗ್ ನಲ್ಲಿ ಜನವರಿ ಹೊತ್ತಿಗೆ ಮಿನಿ ನಯಾಗರ ಜಲಪಾತ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10: ಇಲ್ಲಿನ ಲಾಲ್ ಬಾಗ್ ಬಹು ದೊಡ್ಡ ಆಕರ್ಷಣೆ ಎಂಬುದರಲ್ಲಿ ಎರಡು ಮಾತಿಲ್ಲ. ಮುಂದಿನ ಜನವರಿ ವೇಳೆಗೆ ಈ ಆಕರ್ಷಣೆಗೆ ಮತ್ತಷ್ಟು ಮೆರುಗು ಸೇರ್ಪಡೆಯಾಗಲಿದೆ. ಅಂದುಕೊಂಡಂತೆ ಎಲ್ಲವೂ ನೆರವೇರಿದರೆ ಲಾಲ್ ಬಾಗ್ ನ ಸಸ್ಯೋದ್ಯಾನದಲ್ಲಿ ಮುಂದಿನ ಜನವರಿ ಹೊತ್ತಿಗೆ ಮಿನಿ ನಯಾಗರ ಜಲಪಾತ ನಿರ್ಮಾಣವಾಗುತ್ತದೆ.

ಅಯ್ಯಯ್ಯೋ, ಇಲ್ನೋಡಿ, ಲಾಲ್ ಬಾಗ್ ಕೆರೆ ತುಂಬ ಹಾವೋ ಹಾವು!

ಕೃತಕವಾಗಿ ನಿರ್ಮಿಸುವ ಈ ಜಲಪಾತ 25 ಅಡಿಯಷ್ಟು ಎತ್ತರ ಇರಲಿದೆ. 120 ಅಡಿಯಷ್ಟು ವಿಸ್ತಾರವಾಗಿ ನೀರು ಧುಮ್ಮಿಕ್ಕಲಿದೆ. ಈ ಯೋಜನೆಗೆ 2.7 ಕೋಟಿ ರುಪಾಯಿ ವೆಚ್ಚ ತಗುಲಲಿದ್ದು, ಆ ಮೊತ್ತವನ್ನು ರಾಜ್ಯ ತೋಟಗಾರಿಕೆ ಇಲಾಖೆಯಿಂದ ನೀಡಲಾಗಿದೆ. ಕಳೆದ ಒಂದು ವರ್ಷದಿಂದ ಲೋಕೋಪಯೋಗಿ ಇಲಾಖೆಯಿಂದ ಈ ಕಾಮಗಾರಿ ನಡೆಯುತ್ತಿದೆ.

'Mini Niagara Falls' at Bengaluru’s Lalbagh to be ready by January

ಲಾಲ್ ಬಾಗ್ ಕೆರೆಯ ಬಳಿಯೇ ಈ ಜಲಪಾತ ನಿರ್ಮಿಸುತ್ತಿದ್ದು, ಕೆರೆಯ ನೀರನ್ನೇ ಇದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲು ಇನ್ನು ಹದಿನೈದು ದಿನದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಲಾಲ್ ಬಾಗಿನಲ್ಲಿ ಕಂಗೊಳಿಸುತ್ತಿದೆ ಕುಸುಮ ಕವಿಶೈಲ

ಕಳೆದ ಮೇನಲ್ಲಿ ಈ ಮಿನಿ ನಯಾಗರ ನಿರ್ಮಾಣ ಆಗುವ ಬಗ್ಗೆ ವರದಿಯಾಗಿತ್ತು. ಮಿನಿ ನಯಾಗರ ನಿರ್ಮಾಣಕ್ಕಾಗಿ ಲಾಲ್ ಬಾಗ್ ನ ದೊಡ್ಡ ಕೆರೆಯಿಂದ ಸಣ್ಣ ಕೆರೆಗೆ ನೀರು ಪಂಪ್ ಮಾಡಲಾಗುತ್ತದೆ. ಅದಕ್ಕಾಗಿ 250 ಎಚ್ ಪಿ ಸಾಮರ್ಥ್ಯದ ಮೋಟಾರ್ ಬಳಸಲಾಗುತ್ತದೆ.

ಈ ರೀತಿ ವಿಶ್ವ ಪ್ರಸಿದ್ಧ ಜಲಪಾತವೊಂದರ ತದ್ರೂಪು ಮಾದರಿ ನಿರ್ಮಿಸುವುದರಿಂದ ದೇಶ- ವಿದೇಶದ ಪ್ರವಾಸಿಗರನ್ನು ಸೆಳೆಯುವುದಷ್ಟೇ ಅಲ್ಲ, ಸ್ಥಳೀಯರ ಪಾಲಿಗೂ ಪ್ರಮುಖ ಆಕರ್ಷಣೆ ಆಗಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru’s iconic Lalbagh botanical gardens will soon sport a mini Niagara Falls and it is expected to be ready by January.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ