'ಹಾಲು ಮಾರಾಟಕ್ಕೆ ಪ್ಲಾಸ್ಟಿಕ್ ಬದಲು ಗಾಜಿನ ಬಾಟಲಿ ಬಳಸಿ'

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ನಗರದಲ್ಲಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ಕೆಎಂಎಫ್ ನಿಂದ ಮಾರಾಟವಾಗುವ ನಂದಿನಿ ಹಾಲಿನ ಪ್ಯಾಕೇಜಿಂಗ್‌ ಗೆ ಬಳಸುವ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಗಾಜಿನ ಬಾಟಲಿಯನ್ನು ಬಳಸಿ ಎಂದು ಬಿಬಿಎಂಪಿ ಸಲಹೆ ನೀಡಿದೆ.

ಹಾಪ್‌ಕಾಮ್ಸ್: ಹಣ್ಣು, ತರಕಾರಿಗಳ ಜತೆ ಹಾಲಿನ ಉತ್ಪನ್ನವೂ ಲಭ್ಯ

ಸಾಕಷ್ಟು ದೇಶಗಳಲ್ಲಿ ಹಾಲಿನ ಪ್ಯಾಕೇಜಿಂಗ್‌ ಗೆ ಪ್ಲಾಸ್ಟಿಕ್ ತ್ಯಜಿಸಿ ಇದೀಗ ಬಾಟಲಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ನಾವೂ ಕೂಡ ಬಾಟಲಿಯಲ್ಲಿ ಹಾಲನ್ನು ಮಾರಾಟ ಮಾಡುವ ಕುರಿತು ಆಲೋಚಿಸಬೇಕಿದೆ ಎಂದು ಬಿಬಿಎಂಪಿ ಘನ ತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರೋಜ್ ಖಾನ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಗಾಜಿನ ಬಾಟಲಿಗಳನ್ನು ಮರುಬಳಕೆ ಮಾಡಬಹುದಾಗಿದೆ. ಎರಡು ಪದರ ಪ್ಯಾಕೇಜ್ ಮಾಡುವುದು ಒಳ್ಳೆಯ ಆಯ್ಕೆಯಲ್ಲ. ಈ ಎರಡು ಲೇಯರ್ ಪ್ಯಾಕೇಟ್‌ಗಳು ಕರಗುವುದಿಲ್ಲ. ಸಾಹಸ್ ಎನ್‌ಜಿಓದ ವಿಲ್ಮಾ ಅವರು ಹೇಳುವ ಪ್ರಕಾರ ಕೆಎಂಎಫ್ ಗಾಜಿನ ಬಾಟಲಿಯಲ್ಲಿ ಹಾಲನ್ನು ನೀಡಬಹುದು ಮತ್ತೆ ಅದೇ ಬಾಟಲಿಗಳನ್ನು ಕುದಿಸಿ ಮರುಬಳಕೆ ಮಾಡಬಹುದು. ಈಗಾಗಲೇ ಕೆಲವು ಕೆಎಂಎಫ್ ಪ್ಯಾಕೇಟ್ ಗಳನ್ನು ಪುನಃ ಪಡೆಯಲಾಗುತ್ತಿದೆ. ಅದರಲ್ಲಿ ಕೆಲವೊಂದನ್ನು ಮರುಬಳಕೆ ಮಾಡಬಹುದಾಗಿದೆ ಎಂದಿದ್ದಾರೆ.

Milk packets are here to stay: KMF

ಘನ ತ್ಯಾಜ್ಯ ನಿರ್ವಹಣೆಯ ತಜ್ಞ ರಾಮ್‌ಪ್ರಸಾದ್ ಹೇಳುವ ಪ್ರಕಾರ, ಸುಮಾರು ಶೇ.95 ರಷ್ಟು ಕೆಎಂಎಫ್ ಹಾಲಿನ ಪ್ಯಾಕೇಟ್‌ಗಳನ್ನು ಮರು ಬಳಕೆ ಮಾಡಬಹುದಾಗಿದೆ. ಹಾಲಿನ ಪ್ಯಾಕೇಟ್‌ಗಳಿಗೆ ಹೆಚ್ಚು ಬೆಲೆ ಇರುವ ಕಾರಣ ತ್ಯಾಜ್ಯದಲ್ಲಿ ದೊರೆಯುವಂತಹ ಹಾಲಿನ ಪ್ಯಾಕೇಟ್‌ಗಳನ್ನು ಪೌರಕಾರ್ಮಿಕರು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ.

ನಗರದಲ್ಲಿ ಸಾಕಷ್ಟು ಖಾಸಗಿ ಡೈರಿಗಳು ಹಾಲಿನ ಮಾರಾಟ ವ್ಯವಸ್ಥೆಗೆ ಗಾಜಿನ ಬಾಟಲಿಗಳನ್ನು ಬಳಕೆ ಮಾಡುತ್ತಿವೆ. ಅದರಲ್ಲಿ ಎರ್ಡನ್ ಕ್ರಿಮರಿ ಎನ್ನುವ ಒಂದು ಡೈರಿ ವರ್ತೂರಿನಲ್ಲಿದೆ.ಒಂದು ದಿನದಲ್ಲಿ ನಗರದಲ್ಲಿ 38 ಲಕ್ಷ ಹಾಲು ಮಾರಾಟವಾಗುತ್ತದೆ. ಅದರಲ್ಲಿ ಸುಮಾರು ಐದು ಲಕ್ಷ ಹಾಲು ಎರಡು ಪದರ ಹೊಂದಿರುವ ಪ್ಯಾಕೇಟ್‌ನಲ್ಲಿ ಮಾರಾಟವಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BBMP which is struggling with solid waste management in the city, has suggested to Karnataka milk Federation, to find alternative to the plastic packaging of its Nandini milk pouches.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ