ವಲಸಿಗರೇ ತೊಲಗಿ ಅಭಿಯಾನಕ್ಕೆ ಭರ್ಜರಿ ಬೆಂಬಲ

Written By:
Subscribe to Oneindia Kannada

ಬೆಂಗಳೂರು, ಜೂನ್ 08: IT & BT ಕನ್ನಡಿಗರು ಮತ್ತೊಮ್ಮೆ ಆರಂಭಿಸಿದ ಕನ್ನಡ ಪರ ಆನ್ ಲೈನ್ ಅಭಿಯಾನಕ್ಕೆ ಬುಧವಾರ ಭರ್ಜರಿ ಬೆಂಬಲ ಸಿಕ್ಕಿದೆ. #MigrationSaku ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವಿಟ್ಟರ್ ನಲ್ಲಿ ಬುಧವಾರ ಆರಂಭಿಸಿದ್ದ ಅಭಿಯಾನ ಟ್ರೆಂಡಿಂಗ್ ನಲ್ಲಿತ್ತು.

ಕರ್ನಾಟಕಕ್ಕೆ ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶಿ ಮತ್ತು ಇತರ ಅಕ್ರಮ ವಲಸಿಗರನ್ನು ಹಿಂದಕ್ಕೆ ಕಳಿಸಬೇಕು. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ತಾಣದಲ್ಲಿ ಒತ್ತಾಯ ಕೇಳಿಬಂತು.[#MigrationSaku ಐಟಿ ಹಾಗೂ ಬಿಟಿ ಕನ್ನಡಿಗರಿಂದ ಅಭಿಯಾನ]

kannada

ಬೆಂಗಳೂರು, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ಅನೇಕ ಕಡೆಗೆ ನುಸುಳಿ ಅಕ್ರಮವಾಗಿ ಬಿಡಾರ ಹೂಡಿದ್ದಾರೆ, ಇವರನ್ನು ಹೊರ ಹಾಕದಿದ್ದರೆ ಮುಂದೊಂದು ದಿನ ಕರ್ನಾಟಕ ಮತ್ತೊಂದು ಅಸ್ಸಾಂ, ಮುಂಬೈ ಆಗದೆ ಇರದು, ಹೀಗಾಗಿ ನಮ್ಮೆಲ್ಲ ಕನ್ನಡ ಬಂಧುಗಳು ಇದರ ಜೊತೆ ಸೇರಿ ಸರಕಾರವನ್ನು ಎಚ್ಚರಿಸಬಬೇಕಿದೆ ಎಂಬ ಉದ್ದೇಶದಿಂದ ಅಭಿಯಾನ ಆರಂಭ ಮಾಡಲಾಗಿತ್ತು.[#VenkayyaSakayya ಎಂದ ರೊಚ್ಚಿಗೆದ್ದ ಕನ್ನಡಿಗರು]

kannada

ಮೊದಲು ಬೆಂಗಳೂರು ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡ #MigrationSaku ಹ್ಯಾಶ್ ಟ್ಯಾಗ್ ನಂತರ ದೇಶದ ಮಟ್ಟದಲ್ಲಿಯೂ ಕಾಣಿಸಿಕೊಂಡಿತು. ಕನ್ನಡಿಗರೇ ಅಲ್ಪಸಂಖ್ಯಾತರಾಗಬೇಕಾಗುತ್ತದೆ, ಮಹಿಶಿ ನಂಜುಂಡಪ್ಪ ವರದಿ ಜಾರಿಯಾಗಲಿ ಎಂಬ ಮಾತುಗಳು ಕೇಳಿಬಂದವು.[#BoycottAmazon ಏಕೆ? ಹಿಂದೂ ದೇವರ ಅವಹೇಳನ ಹೇಗಾಯ್ತು?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
#MigrationSaku: IT and BT Kannadigas online campaign on micro blogging site Twitter to stop illegal migration got good response by people. #MigrationSaku tag displayed in top trending on Twitter on 8 June. 2016.
Please Wait while comments are loading...