ಅನುಚಿತ ಎಂಓಜಿ ಅಳವಡಿಕೆ ಆರೋಪ: ವಾಟ್ಸಾಪ್ ಗೆ ಲೀಗಲ್ ನೋಟಿಸ್

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 27 : ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ಮೆಸೆಂಜರ್ ನಲ್ಲಿ ಮಧ್ಯದ ಬೆರಳು ತೋರುವ ಎಂಓಜಿ ಅಶ್ಲೀಲ ಹಾಗೂ ನಿಂದನಾರ್ಹವಾಗಿದೆ ಎಂದು ದೆಹಲಿ ಮೂಲದ ವಕೀಲರೊಬ್ಬರು ವಾಟ್ಸಾಪ್ ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿದ್ದಾರೆ.

ಡಿಸೆಂಬರ್ 31ರಿಂದ ಈ ಫೋನ್ ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ!

ಕಾನೂನು ಬಾಹಿರ ಹಾಗೂ ನಿಂದನಾರ್ಹವಾದ ಮಧ್ಯದ ಬೆರಳು ತೋರಿಸುವ ಎಂಓಜಿ(emoji)ಯನ್ನು ವಾಟ್ಸಾಪ್ ನಿಂದ ತೆಗೆದು ಹಾಕಬೇಕು ಎಂದು 15 ದಿನಗಳ ಕಾಲಾವಕಾಶ ಕೋರಿ ದೆಹಲಿ ಮೂಲದ ಗುರ್ಮೀತ್ ಸಿಂಗ್ ಎಂಬ ನ್ಯಾಯವಾಧಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.

Middle finger emoji: WhatsApp gets legal notice

ಕಾನೂನು ಪ್ರಕಾರ ಐರ್ ಲ್ಯಾಂಡ್ ದೇಶದಲ್ಲಿ ಮಧ್ಯದ ಬೆರಳು ತೋರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂಬುದನ್ನು ಲೀಗಲ್ ನೋಟಿಸ್ ನಲ್ಲಿ ಉಲ್ಲೇಖಿಸಿರುವ ಗುರ್ಮೀತ್ ಸಿಂಗ್ ಮಧ್ಯದ ಬೆರಳು ತೋರಿಸಿರುವ ಎಂಒಜಿ ಬಳಕೆಯಿಂದ ವ್ಯಕ್ತಿಗೆ ನಿಂದನೆ ಹಾಗೂ ಮಾನಸಿಕ ಹಿಂಸೆಯಾಗುತ್ತದೆ. ಹಾಗಾಗಿ ಐಪಿಸಿ ಸೆಕ್ಷನ್ 354 ಹಾಗೂ509 ರ ಅಡಿಯಲ್ಲಿ ಮಧ್ಯದ ಬೆರಳಿನ ಎಂಓಜಿ ಕಾನೂನು ಬಾಹಿರವಾಗಿದೆ ಎಂದು ತಿಳಿವಳಿಕೆ ನೀಡಿದ್ದಾರೆ.

ಅಲ್ಲದೆ ಒಂದು ವೇಳೆ ಮಧ್ಯದ ಬೆರಳು ತೋರುವ ಎಂ ಓಜಿ ತೆಗೆದು ಹಾಕಿದರೆ ಕ್ರಿಮಿನಲ್ ಅಥವಾ ಸಿವಿಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 2014 ರಲ್ಲಿ ಯುನಿಕೋಡ್ 7.0 ಭಾಗವಾಗಿ ಮಧ್ಯದ ಬೆರಳು ತೋರುವ emoji ಯನ್ನು ವಾಟ್ಸ್ ಆಫ್ ಎಂಓಜಿ ಗಳಲ್ಲಿ ಸೇರ್ಪಡೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A middle finger emoji WhatsApp has prompted a Delhi lawyer, Gurmeet Singh, to send a legal notice to the internet messaging service app woned by Facebook. The middle finger is considered as a rude or insulting gesture.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ