ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ದಿನ ಮೆಟ್ರೋ ಸ್ಥಗಿತ: ನಿಲ್ದಾಣಗಳಿಗೆ ಉಚಿತ ಬಿಎಂಟಿಸಿ ಬಸ್ ಸೇವೆ

|
Google Oneindia Kannada News

Recommended Video

ಎರಡು ದಿನ ಮೆಟ್ರೋ ಸ್ಥಗಿತ: ನಿಲ್ದಾಣಗಳಿಗೆ ಉಚಿತ ಬಿಎಂಟಿಸಿ ಬಸ್ ಸೇವೆ..! | Oneindia Kannada

ಬೆಂಗಳೂರು, ಡಿಸೆಂಬರ್ 14: ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ 155 ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಡಿ22-23ರವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದ್ದು ಮೆಟ್ರೋ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.

ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮಾರ್ಗದ ಟ್ರಿನಿಟಿ ವೃತ್ತದ ಬಳಿ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಂಜಿ ರಸ್ತೆಯಿಂದ ಇಂದಿರಾನಗರದವರೆಗೆ ಮೆಟ್ರೋ ಸಂಚಾರ ಎರಡು ದಿನ ಸ್ಥಗಿತಗೊಳ್ಳಲಿದೆ.

ಟ್ರಿನಿಟಿ ವೃತ್ತದ ಬಳಿ 155ನೇ ಪಿಲ್ಲರ್‌ನಲ್ಲಿ ಬಿರುಕು ಬಿಟ್ಟಿದೆ, ಅದರಿಂದ ಮೆಟ್ರೋಗೆ ಅಪಾಯವಾಗುತ್ತದೆ ಎಂಬ ವದಂತಿಗಳು ಹರಿದಾಡಿತ್ತು, ಅದ್ಯಾವುದಕ್ಕೂ ಕಿವಿಗೊಡಬೇಡಿ, ಸೆಗ್ಮೆಂಟ್, ಪಿಲ್ಲರ್ ಸಮಸ್ಯೆ ಎಂದು ಹೇಳಲಾಗಿದೆ.

ಪಿಲ್ಲರ್‌ನಲ್ಲಿ ಗ್ಯಾಪ್ ಇರುವುದೇ ಹಾಗೆ, 2 ಸೆಗ್ಮೆಂಟ್ ನಡುವೆ ಗ್ಯಾಪ್ ಇಲ್ಲವೆಂದರೆ ಸಮಸ್ಯೆಯಾಗುತ್ತದೆ, ಮೆಟ್ರೋ ವೇಗವನ್ನು ಕಡಿಮೆ ಮಾಡಿರುವುದು ಯಾವುದೋ ಅಪಾಯವಾಗುತ್ತೆ ಎಂದಲ್ಲ ತಪಾಸಣೆ ನಡೆಸುತ್ತಿದ್ದ ಕಾರಣ , ಮೆಟ್ರೋ ವೇಗವನ್ನು ಕಡಿಮೆ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಆ ಸಂದರ್ಭದಲ್ಲಿ ಎಂಜಿ ರಸ್ತೆಯಿಂದ ಇಂದಿರಾನಗರದವರೆಗೆ ಬಿಎಂಟಿಸಿ ಉಚಿತ ಸೇವೆ ಬಿಎಂಆರ್‌ಸಿಎಲ್ ಕಲ್ಪಿಸಿಕೊಡಲಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಜಯ್ ಸೇಠ್ ತಿಳಿಸಿದ್ದಾರೆ.

MG road to Indiranagar Metro service will shutdown

ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಕೆಲವು ಪರಿಶೀಲನೆ ನಡೆಯಲಿರುವ ಕಾರಣ ಈ ನಿಲ್ದಾಣಗಳಲ್ಲಿ ಅಲ್ಟ್ರಾ ಸೋನಿಕ್ ಟೆಸ್ಟ್ ನಡೆಯುತ್ತಿದೆ, ನಾಲ್ಕೈದು ದಿನಗಳಲ್ಲಿ ಆಕ್ಷನ್ ಪ್ಲಾನ್ ತಯಾರಾಗಲಿದೆ ಎಂದು ಅವರು ತಿಳಿಸಿದ್ದಾರೆ.

English summary
BMRCL MD Ajay seth announced that there will be no Metro service on December 22-23 from MG Road to Indiranagar. So BMTC will provide free service to metro stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X