ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ

|
Google Oneindia Kannada News

ಬೆಂಗಳೂರು, ಮಾ. 1 : ಶುಕ್ರವಾರ ಸಂಪಿಗೆ ರಸ್ತೆಯಿಂದ ಪೀಣ್ಯವರೆಗಿನ ನಮ್ಮ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಿದ್ದ ಬಿಎಂಆರ್ ಸಿಎಲ್ ಶನಿವಾರ ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಶಾಕ್ ನೀಡಿದೆ. ಹೌದು ಎಂಜಿ ರೋಡ್-ಬೈಯಪ್ಪನಹಳ್ಳಿ ನಡುವಿನ ಮಾರ್ಗದಲ್ಲಿನ ಪ್ರಯಾಣದವರನ್ನು 2 ರೂ. ಹೆಚ್ಚಿಸಲಾಗಿದೆ.

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದ್ದು, ಶನಿವಾರದಿಂದಲೇ ನೂತನ ದರ ಜಾರಿಗೆ ಬಂದಿದೆ. ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಇದ್ದ 15 ರೂ. ಪ್ರಯಾಣ ದರವನ್ನು 17 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಎಂಜಿ ರಸ್ತೆಯಿಂದ ಪ್ರತಿ ನಿಲ್ದಾಣಕ್ಕೆ ತೆರಳುವ ದರವನ್ನು ಪರಿಷ್ಕರಣೆ ಮಾಡಲಾಗಿದೆ. [ನಮ್ಮ ಮೆಟ್ರೋಗೆ ಎರಡು ವರ್ಷದ ಸಂಭ್ರಮ]

MG Road and Baiyapannahalli

ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಡುವಿನ ನಮ್ಮ ಮೆಟ್ರೋ ಸಂಚಾರ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಈ ಮಾರ್ಗದಲ್ಲಿ ಕನಿಷ್ಠ 10 ಮತ್ತು ಗರಿಷ್ಠ 15 ರೂ. ಪ್ರಯಾಣ ದರವಿತ್ತು. ಎರಡು ವರ್ಷಗಳಲ್ಲಿ ಈ ಮಾರ್ಗದಲ್ಲಿನ ಪ್ರಯಾಣ ದರವನ್ನು ಹೆಚ್ಚಳ ಮಾಡಿರಲಿಲ್ಲ. ಸದ್ಯ ರೀಚ್ 3 ಮತ್ತು 3ಎ ಜೊತೆಗೆ ಈ ಮಾರ್ಗದ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. [ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳ]

ರೀಚ್ 3 ಮತ್ತು 3ಎನ ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಸಂಚರಿಸುವ 'ಹಸಿರು ಬಣ್ಣ'ದ ನಮ್ಮ ಮೆಟ್ರೋ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಮಾರ್ಚ್ 1ರ ಶನಿವಾರ ಬೆಳಗ್ಗೆಯಿಂದ ಮಾರ್ಗದಲ್ಲಿ ಮೆಟ್ರೋ ಪ್ರಯಾಣ ಆರಂಭವಾಗಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಸಚಿವ ರೋಷನ್ ಬೇಗ್, ರಾಮಲಿಂಗಾ ರೆಡ್ಡಿ ರೈಲಿಗೆ ಹಸಿರು ನಿಶಾನೆ ತೋರಿದರು. ಈ ಮಾರ್ಗದ ಪ್ರಯಾಣದರ 23 ರೂ. ಎಂದು ನಿಗದಿಗೊಳಿಸಲಾಗಿದೆ. [ಸಂಪಿಗೆ ರಸ್ತೆ-ಪೀಣ್ಯ ರೈಲಿನ ಬಗ್ಗೆ ಓದಿ]

ಶುಕ್ರವಾರ ರೀಚ್ 3 ಮತ್ತು 3ಎ ಮಾರ್ಗಕ್ಕೆ ಚಾಲನೆ ನೀಡಿದ ನಂತರ ಬಿಎಂಆರ್ ಸಿಎಲ್ ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಡುವಿನ ಪ್ರಯಾಣದರವನ್ನು ಪರಿಷ್ಕರಣೆ ಮಾಡಿದ್ದು, ಶನಿವಾರದಿಂದಲೇ ನೂತನ ದರ ಜಾರಿಗೆ ಬಂದಿದೆ. ನೂತನ ದರ ಪಟ್ಟಿ ಹೀಗಿದೆ

* ಎಂಜಿ ರಸ್ತೆ ಬೈಯಪ್ಪನಹಳ್ಳಿ - 17 ರೂ.
* ಎಂಜಿ ರಸ್ತೆ-ಇಂದಿರಾನಗರ - 14 ರೂ.
* ಎಂಜಿ ರಸ್ತೆ-ಹುಲಸೂರು -13 ರೂ.
* ಎಂಜಿ ರಸ್ತೆ- ಎಸ್ ವಿ ರಸ್ತೆ - 16 ರೂ.

English summary
Bangalore Metro Rail Corporation Limited (BMRCL) hiked the Metro rail fare between MG Road and Baiyapannahalli Rs 2. New fare will be effect form Saturday, March 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X