ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಎಸ್ಕಲೇಟರ್ ಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 06 : ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಎಸ್ಕಲೇಟರ್‌ಗಳನ್ನು ಅಳವಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಧರಿಸಿದೆ.

ಫೆ.14ಕ್ಕೆ ನಮ್ಮ ಮೆಟ್ರೋಗೆ ಮೂರು ಬೋಗಿಗಳು ಹಸ್ತಾಂತರಫೆ.14ಕ್ಕೆ ನಮ್ಮ ಮೆಟ್ರೋಗೆ ಮೂರು ಬೋಗಿಗಳು ಹಸ್ತಾಂತರ

ಅದರ ಭಾಗವಾಗಿ ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಇಳಿಯುವ ಎಸ್ಕಲೇಟರ್‌ ಅನ್ನು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಸೋಮವಾರ ಉದ್ಘಾಟಿಸಿದರು. ಅನೇಕ ಮೆಟ್ರೊ ನಿಲ್ದಾಣಗಳಲ್ಲಿ ಮೇಲಕ್ಕೆ ಹತ್ತಲು ಮಾತ್ರ ಎಸ್ಕಲೇಟರ್‌ ಸೌಲಭ್ಯ ಇದೆ. ಇಳಿಯುವುದಕ್ಕೆ ಈ ಸೌಕರ್ಯ ಇಲ್ಲ. ಶೀಘ್ರವೇ ಈ ಸೌಕರ್ಯವನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

Metro will get two way escalators Soon

ಪ್ರೇಮಿಗಳ ದಿನದಂದು ನಮ್ಮ ಮೆಟ್ರೋಗೆ ಬಿಇಎಂಎಲ್ ನಿಂದ ಮೂರು ಬೋಗಿಗಳು ಹಸ್ತಾಂತರವಾಗಲಿದೆ. 1,421 ಕೋಟಿ ರೂ. ವೆಚ್ಚದಲ್ಲಿ 150 ಬೋಗಿಗಳನ್ನು ಖರೀದಿಸಲು ಬಿಎಂಆರ್ಸಿಲ್ ಮತ್ತು ಬಿಇಎಂಎಲ್ ಒಪ್ಪಂದ ಮಾಡಿಕೊಂಡಿದೆ. ಜನವರಿ ಅಂತ್ಯದಲ್ಲಿ ಮೂರು ಬೋಗಿಗಳನ್ನು ನೀಡುವುದಾಗಿ ಬಿಎಂಆರ್ ಸಿ ಎಲ್ ಗೆ ಬಿಇಎಂಎಲ್ ತಿಳಿಸಿತ್ತು. ಆದರೆ ಹಲವು ಕಾರಣಗಳಿಂದ ಹಸ್ತಾಂತರಿಸುವ ದಿನವನ್ನು ಮುಂದೂಡಲಾಗಿತ್ತು. ಫೆ.14 ರಂದು ಮೂರು ಬೋಗಿಗಳನ್ನು ನೀಡಲು ಸಿದ್ಧತೆ ನಡೆಸಿದೆ.

English summary
Mr Mahendra Jain, MD BMRCL inauguated an escalator at Mysuru road metro station, Additional escalators at other stations will soon follow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X