ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ: ಮೆಟ್ರೋ ನಿಲ್ದಾಣಗಳ ಕೆಲ ದ್ವಾರಗಳು ಬಂದ್

By Nayana
|
Google Oneindia Kannada News

ಬೆಂಗಳೂರು, ಮೇ 11: ನಮ್ಮ ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರದಲ್ಲಿ ಕಾರ್ಯನಿರ್ವಹಿಸುವ ಕೆಲ ಭದ್ರತಾ ಸಿಬ್ಬಂದಿಯನ್ನು ವಿಧಾನಸಭಾ ಚುನಾವಣೆಯ ಕಾರ್ಯಕ್ಕೆ ನೇಮಿಸಿರುವುದರಿಂದ, ಮೆಟ್ರೋ ನಿಲ್ದಾಣಗಳ ಕೆಲದ್ವಾರಗಳನ್ನು ಮುಚ್ಚಲಾಗುತ್ತಿದೆ.

ಮೆಟ್ರೋ ನಿಲ್ದಾಣಗಳಾದ ವಿಧಾನಸೌಧಮ, ಕಬ್ಬನ್‌ಪಾರ್ಕ್ , ಸರ್‌.ಎಂ.ವಿಶ್ವೇಶ್ವರಯ್ಯ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಯನ್ನು ಮೇ 12ರಂದು ನಡೆಯುವ ವಿಧಾನಸಭಾ ಚುನಾವಣಾ ಕಾರ್ಯಕ್ಕೆ ನೇಮಿಸಿರುವುದುರಿಂದ ಕೆಲ ಪ್ರವೇಶದ್ವಾರಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಲಾಗುತ್ತದೆ.

Metro stations doors will be closed on poll day

ದಕ್ಷಿಣ ಕನ್ನಡ : ವೋಟು ಹಾಕುವವರಿಗಾಗಿ ಉಚಿತ ಸರ್ಕಾರಿ ಬಸ್ ಸೇವೆದಕ್ಷಿಣ ಕನ್ನಡ : ವೋಟು ಹಾಕುವವರಿಗಾಗಿ ಉಚಿತ ಸರ್ಕಾರಿ ಬಸ್ ಸೇವೆ

ಮೆಟ್ರೋದ ನಿಲ್ದಾಣಗಳು ಮೂರರಿಂದ ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿವೆ. ಸಿಬ್ಬಂದಿ ಕೊರತೆ ಇರುವಲ್ಲಿ ಒಂದು ಅಥವಾ ಎರಡು ದ್ವಾರಗಳನ್ನು ಮಾತ್ರ ತೆರೆಯಲಾಗುತ್ತದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

English summary
As many security personnel have been deployed to assembly election duty, BMRCL has decided to keep shutdown doors of many metro stations on May 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X