ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ವ್ಯತ್ಯಯ : ಅರ್ಧದಾರಿಯಲ್ಲೇ ಕೈಕೊಟ್ಟ ಮೆಟ್ರೋ

|
Google Oneindia Kannada News

ಬೆಂಗಳೂರು, ಜನವರಿ 2 : ನಮ್ಮ ಮೆಟ್ರೋಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಮಂಗಳವಾರ ರೈಲು ಸಂಚಾರ ಅರ್ಧಗಂಟೆಗಳ ಕಾಲ ಸ್ಥಗಿತಗೊಂಡಿತ್ತು.

ಹೊಸ ವರ್ಷಾಚರಣೆ ವೇಳೆ 3.25 ಲಕ್ಷ ಪ್ರಯಾಣಿಕರಿಂದ ಮೆಟ್ರೋ ಬಳಕೆಹೊಸ ವರ್ಷಾಚರಣೆ ವೇಳೆ 3.25 ಲಕ್ಷ ಪ್ರಯಾಣಿಕರಿಂದ ಮೆಟ್ರೋ ಬಳಕೆ

ಮೆಟ್ರೋಗೆ ಶರವಾತಿಯಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ಆದ ವ್ಯತ್ಯಯದಿಂದ ಉತ್ತರ, ದಕ್ಷಿಣ ಹಾಗೂ ಪಶ್ಚಿಮ ಮಾರ್ಗಗಳಲ್ಲಿ ರೈಲು ಸಂಚಾರ ಬೆಳಗ್ಗೆ 10.02 ರಿಂದ10.28 ರವರೆಗೆ ಸ್ಥಗಿತಗೊಂಡಿತ್ತು.

Metro service hit due to Electricity outage

ಬೈಯ್ಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆ ಮಧ್ಯೆ 18 ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. ಹಸಿರೂ ಮಾರ್ಗದಲ್ಲೂ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸಿದರು. ವಿದ್ಯುತ್ ವ್ಯತ್ಯಯದಿಂದಾಗಿ ಮಾರ್ಗ ಮಧ್ಯದಲ್ಲೇ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. ರೈಲಿನ ಬೋಗಿಗಳೊಳಗೆ ಎಸಿ ಇಲ್ಲದೆ ಪ್ರಯಾಣಿಕರು ಉಸಿರಾಟ ಸಮಸ್ಯೆ ಎದುರಿಸಿದರು ಎಂಬ ಮಾಹಿತಿ ದೊರೆತಿದೆ.

ತಕ್ಷಣದಲ್ಲಿ ಬಿಎಂಆರ್ ಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ 10.28 ರಿಂದ ಯಥಾಸ್ಥಿತಿಯಲ್ಲಿ ರೈಲುಗಳ ಸಂಚಾರ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Namma Metro service hit around 30 minutes in the Morning due to outage of Electricity on Tuesday. Totla 18 trains has been stopped between Baiyappanahalli and Mysuru road. The service was restored only after 10.28 in the morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X