ಮೆಟ್ರೋ: ಪ್ರತಿ ಕಿ.ಮೀ ಸುರಂಗಕ್ಕೆ 152 ಕೋಟಿ ಹೊರೆ:ಮಾರ್ಗ ಕಡಿತ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಸುರಂಗ ಮಾರ್ಗ ಕಾಮಗಾರಿ ಬಿಎಂಆರ್ ಸಿಎಲ್ ಗೆ ಹೊರೆಯಾಗಿ ಪರಿಣಮಿಸಿದೆ.

ಮೆಟ್ರೋ 1ನೇ ಹಂತಕ್ಕೆ ಹೋಲಿಸಿದರೆ 2 ನೇ ಹಂತದಲ್ಲಿ ಪ್ರತಿ ಕಿ.ಮೀ ಸುರಂಗ ಕಾಮಗಾರಿಗೆ 152 ಕೋಟಿ ರೂ. ಹೆಚ್ಚುವರಿ ಹೊರೆಯಾಗುತ್ತಿದೆ. ಮೆಟ್ರೋ 1 ನೇ ಹಂತದ 42.3 ಕಿ.ಮೀ ಮಾರ್ಗ ನಿರ್ಮಾಣಕ್ಕೆ 13,845 ಕೋಟಿ ರೂ. ವೆಚ್ಚ ಮಾಡಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಇದರಲ್ಲಿ ಕಬ್ಬನ್ ಪಾರ್ಕ್ ನಿಂದ ಮಾಗಡಿ ರಸ್ತೆವರೆಗಿನ 4.8 ಕಿ.ಮೀ ಸುರಂಗ ಮತ್ತು ನಿಲ್ದಾಣ ನಿರ್ಮಾಣಕ್ಕೆ 995.2 ಕೋಟಿ ರೂ. ಮತ್ತು ನ್ಯಾಷನಲ್ ಕಾಲೇಜಿನಿಂದ ಸಂಪಿಗೆ ರಸ್ತೆ 4ಕಿ.ಮೀ ಸುರಂಗಕ್ಕೆ 707.5 ಕೋಟಿ ರೂ ವೆಚ್ಚವಾಗಿತ್ತು.

Metro phase-2 project more costlier than first phase

ಮೆಟ್ರೋ ಎರಡನೇ ಹಂತದಲ್ಲಿ 13ಕಿ.ಮೀ ಸುರಂಗ ಮಾರ್ಗ ನಿರ್ಮಾಣಕ್ಕೆ 5,047.5 ಕೋಟಿ ರೂ. ವೆಚ್ಚವಾಗಲಿದೆ ಎಂದು ನಿಗಮ ಊಹಿಸಿದೆ. ಮೊದಲನೇ ಹಂತದಲ್ಲಿ ಪ್ರತಿ ಕಿ.ಮೀ ಸುರಂಗ ಮಾರ್ಗ ಕಾಮಗಾರಿಗೆ 193 ಕೋಟಿ ರೂ. ವೆಚ್ಚವಾಗಲಿದೆ. ಎರಡನೇ ಹಂತದಲ್ಲಿ ಪ್ರತಿ ಕಿ.ಮೀ ಗೆ 345.7 ಕೋಟಿ ರೂ. ವೆಚ್ಚವಾಗಲಿದೆ. ಈ ಪ್ರಕಾರ 1ಕಿ.ಮೀ ಉದ್ದ ಸುರಂಗ ಮಾರ್ಗ ಕಾಮಗಾರಿಗೆ ನಿಗಮಕ್ಕೆ 152 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

ಮೆಟ್ರೋ ನಿಲ್ದಾಣದಲ್ಲೂ ಇನ್ನುಮುಂದೆ ಶಾಂಪಿಂಗ್ ಮಾಡಬಹುದು!

ಸುರಂ ಮಾರ್ಗ ಕಡಿತ: ಎರಡನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ 13 ಕಿ.ಮೀ ಸುರಂಗ ಮಾರ್ಗ ನಿರ್ಮಾಣಕ್ಕೆ 5,047 ಕೋಟಿ ರೂ. ವೆಚ್ಚವಾಗಬಹುದು ಎಂದು ಊಹಿಸಿದ್ದರೂ, ನಿಗಮದ ಲೆಕ್ಕಾಚಾರ ಟೆಂಡರ್ ಅಂತಿಮಗೊಳಿಸುವ ವೇಳೆ ಉಲ್ಟಾ ಪಲ್ಟಾ ಆಗಿತ್ತು.

13 ಕಿ.ಮೀ ಗೆ ಅತಿ ಕಡಿಮೆ ಬಿಡ್ ಮೊತ್ತವೇ 8 ಸಾವಿರ ಕೋಟಿ ರೂ. ದಾಟಿತ್ತು. ಈ ಕಾರಣಕ್ಕೆ ಪ್ರಸ್ತುತ ಹಳೇ ಟೆಂಡರ್ ಕರೆಯುವ ಸಿದ್ಧತೆಯಲ್ಲಿದೆ. ಡೇರಿ ವೃತ್ತದ ಬದಲಾಗಿ ಎಂ.ಜಿ ರಸ್ತೆಯಿಂದ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದವರೆಗಷ್ಟೇ 3 ಕಿ.ಮೀ ಸುರಂಗ ಮಾರ್ಗ ನಿರ್ಮಾಣಕ್ಕೆ ನಿಗಮ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMRCL was worried that the second phase of Bengaluru metro work estimation goes on Rs.345crore per kilometer which was less than Rs.193 crores in first phase of metro.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ