ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ-2 ಕಾಮಗಾರಿ: ನಿಗದಿತ ವೇಳೆಗೆ ಪೂರ್ಣ ನಿರೀಕ್ಷೆ

|
Google Oneindia Kannada News

ಬೆಂಗಳೂರು, ಜನವರಿ 18 : ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ನಮ್ಮ ಮೆಟ್ರೋ ಎರಡನೇ ಹಂತದ ಮಾರ್ಗದ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಎತ್ತರಿಸಿದ ಮಾರ್ಗದ 30 ಕಾಂಕ್ರೀಟ್ ಕಂಬಗಳು ಆರೇ ತಿಂಗಳಿನಲ್ಲಿ ಪೂರ್ಣಗೊಂಡಿದೆ.

ಈ ಮಾರ್ಗದಲ್ಲಿ ಒಟ್ಟು 579 ಕಾಂಕ್ರೀಟ್ ಪಿಲ್ಲರ್ ಗಳು ಬರಲಿದ್ದು ಬೈಯಪ್ಪನಹಳ್ಳಿಯಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ ನಿಲ್ದಾಣದವರೆಗೆ ೧೮ ಕಂಬಗಳು ಹಾಗೂ ಅಲ್ಲಿಂದ ವೈಟ್ ಫೀಲ್ಡ್ ವರೆಗೆ 12 ಕಂಬಗಳು ಪೂರ್ಣಗೊಂಡಿದೆ.

ಮೆಟ್ರೋ 2ನೇ ಹಂತ: ಇಐಬಿ 3,950 ಕೋಟಿ ಹೂಡಿಕೆ!ಮೆಟ್ರೋ 2ನೇ ಹಂತ: ಇಐಬಿ 3,950 ಕೋಟಿ ಹೂಡಿಕೆ!

ಬೈಯಪ್ಪನಹಳ್ಳಿಯಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶದವರೆಗಿನ ಕಾಮಗಾರಿಯನ್ನು ರೀಚ್ 1ಎ ಹಾಗೂ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ ನಿಲ್ದಾಣದಿಂದ ವೈಟ್ ಫೀಲ್ಡ್ ವರೆಗಿನ ಕಾಮಗಾರಿಯನ್ನು ರೀಚ್ 1ಬಿ ಎಂದು ವಿಂಗಡಿಸಲಾಗಿದೆ. ಈ ಎರಡೂ ಪ್ಯಾಕೇಜ್ ಗಳನ್ನೂ ಐಟಿಡಿ ಸಿಮೆಂಟೇಷನ್ ಇಂಡಿಯಾ ಕಂಪನಿಗೆ ವಹಿಸಲಾಗಿದೆ.

Metro phase-2: 30 poles completes of reach one

ಈ ಮಾರ್ಗದಲ್ಲಿ ಒಟ್ಟು 2,600 ಕಡೆ ತಳಪಾಯ ನಿರ್ಮಿಸಬೇಕಿದ್ದು, ಈ ಪೈಕಿ 1,100 ಕಡೆ ಇದರ ಕೆಲಸ ಮುಗಿದಿದೆ. 220 ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರ ಬಾಕಿ: ಮೆಟ್ರೋ ಕಾಮಗಾರಿಗಾಗಿ ಕುಂದಲಹಳ್ಳಿ ನಿಲ್ದಾಣದಿಂದ ಸತ್ಯಸಾಯಿ ಆಸ್ಪತ್ರೆ ನಿಲ್ದಾಣದವರೆಗೆ ಸುಮಾರು3 ಕಿ.ಮೀ ನಷ್ಟು ದೂರ220ವ್ಯಾಟ್ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಿ ಅಲ್ಲಿ ನೆಲದಡಿಯಲ್ಲಿ ಕೇಬಲ್ ಅಳವಡಿಸಬೇಕಿದೆ. ಈ ಸಲುವಾಗಿ ಕೆಪಿಟಿಸಿಯಲ್ಲಿ ಮೆಟ್ರೋ ನಿಗಮ 64 ಕೋಟಿ ರೂ ಪಾವತಿಸಿದೆ.

ಸ್ಥಳಾಂತರ ಕಾರ್ಯ ಆಗದ ಕಾರಣ ಈ ಪ್ರದೇಶದಲ್ಲಿ ಮಾತ್ರ ಇನ್ನೂ ಕಾಮಗಾರಿ ಆರಂಭವಾಗಿಲ್ಲ. 2017 ರ ಜೂನ್ ನಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ಕಾಮಗಾರಿ ಪೂರ್ಣಗೊಳಿಸಲು 27 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆ ಪ್ರಕಾರ 2020ರ ಒಳಗೆ ಎಲ್ಲ ಕೆಲಸಗಳು ಪೂರ್ಣಗೊಳ್ಳಬೇಕಿದೆ. ಕಾಮಗಾರಿ ವೇಗವನ್ನು ಗಮನಿಸಿದರೆ ಗಡುವಿನ ಒಳಗೆ ಮಾರ್ಗವು ಸಿದ್ಧವಾಗಲಿದೆ.

English summary
Out of 579, around 30 poles construction has been completed of reach one in second phase of Namma Metro project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X