ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲವರ್‌ ಶೋ ಪರಿಣಾಮ: ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿ

By Nayana
|
Google Oneindia Kannada News

Recommended Video

ಫ್ಲವರ್‌ ಶೋಯಿಂದಾಗಿ ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿ | Oneindia Kannada

ಬೆಂಗಳೂರು, ಆಗಸ್ಟ್ 11: ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಪುಷ್ಪ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 11 ಮತ್ತು 12 ಹಾಗೂ ಆಗಸ್ಟ್ 15ರಂದು ಮೆಟ್ರೋ ದರವನ್ನು ಬಿಎಂಆರ್‌ಸಿಲ್ ಹೆಚ್ಚಳ ಮಾಡಿದೆ.

ಪುಷ್ಪ ಪ್ರದರ್ಶನ ವೀಕ್ಷಿಸಲು ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ, ದಟ್ಟಣೆ ಸಮಸ್ಯೆ ಪರಿಹಾರಕ್ಕಾಗಿ ಬಿಎಂಆರ್‌ಸಿಎಲ್‌ ಕಾಗದ ರೂಪದ ಟಿಕೆಟ್‌ ಪರಿಚಯ ಮಾಡಲಿದೆ. ಈ ಮೂರು ದಿನಗಳಂದು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು 30 ರೂ. ನೀಡಿ ಕಾಗದ ರೂಪದ ಟಿಕೆಟ್‌ ಪಡೆದು ಪ್ರಯಾಣಿಸಬೇಕಾಗಿದೆ.

ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ

ಬಿಎಂಆರ್‌ಸಿಎಲ್‌ನ ಈ ನಿರ್ಧಾರದಿಂದ ಹತ್ತಿರದ ಪ್ರಯಾಣಿಕರಿಗೆ ಟಿಕೆಟ್‌ ದರ ಹೊರೆಯಾಗಲಿದೆ. ಆದರೆ ಬೈಯಪ್ಪನಹಳ್ಳಿ ನಾಯಂಡಹಳ್ಳಿ ಹಾಗೂ ನಾಗಸಂದ್ರ ನಿಲ್ದಾಣಗಳಿಂದ ಸಂಚರಿಸುವ ಜನರಿಗೆ ಸಾಮಾನ್ಯ ದಿನಕ್ಕಿಂತ ಕಡಿಮೆ ದರದಲ್ಲಿ ಟಿಕೆಟ್‌ ಲಭ್ಯವಾಗಲಿದೆ.

ತಾಂತ್ರಿಕ ದೋಷ: ಆರ್‌ವಿ ನಿಲ್ದಾಣದಲ್ಲಿ 10 ನಿಮಿಷ ನಿಂತ ಮೆಟ್ರೋ ತಾಂತ್ರಿಕ ದೋಷ: ಆರ್‌ವಿ ನಿಲ್ದಾಣದಲ್ಲಿ 10 ನಿಮಿಷ ನಿಂತ ಮೆಟ್ರೋ

Metro goes costlier on weekend and I-Day

ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಹೋಗಲು 10 ರೂ. ದರವಿದೆ. ಲಾಲ್‌ಬಾಗ್‌ನಿಂದ ಮುಂದಿನ ಒಂದು ನಿಲ್ದಾಣಕ್ಕೆ ಹೋದರೆ ಟೋಕನ್‌ 10ರೂ ಪಾವತಿಸಬೇಕು. ಪುಷ್ಪ ಪ್ರದರ್ಶನಕ್ಕೆ ಬರುವವರು ಸಮೀಪದ ನಿಲ್ದಾಣಗಳಿಗೆ ಹೋಗಲು ಪೇಪ್‌ ಟಿಕೆಟ್‌ ಖರೀದಿಸಿದರೆ ನಷ್ಟ ಹೊಂದಬೇಕಾಗುತ್ತದೆ. ಪೇಪರ್‌ ಟಿಕೆಟ್‌ ಖರೀದಿಗಾಗಿ ಜನರು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವುದು ಈ ಸೌಲಭ್ಯದ ಮತ್ತೊಂದು ಸಮಸ್ಯೆಯಾಗಿದೆ.

English summary
BMRCL has increased metro fare on August 11, 12 and 15 on the occasion of flower show at Lalbagh. All these three days, minimum fare will be Rs.30 from Lalbagh metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X