ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಇಲ್ಲ: ವಿಜಯ್ ಗೋಯಲ್

|
Google Oneindia Kannada News

ಬೆಂಗಳೂರು, ಜನವರಿ 19 : ನಗರ ಪ್ರದೇಶದಲ್ಲಿನ ಟ್ರಾಫಿಕ್ ದಟ್ಟಣೆ ಪರಿಹರಿಸಲು ನಮ್ಮ ಮೆಟ್ರೋ ವಿಸ್ತರಣೆಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಮೆಟ್ರೋ ರೈಲಿನ ಟಿಕೆಟ್ ದರ ಏರಿಸದಂತೆ ಬಿಎಂಆರ್ ಸಿಲೆ್ ಗೆ ಸೂಚಿಸಿದ್ದೇವೆ ಎಂದು ಕೇಂದ್ರದ ಸಾಂಖ್ಯಿಕ ಸಚಿವ ವಿಜಯ್ ಗೋಯಲ್ ತಿಳಿಸಿದ್ದಾರೆ.

ನಮ್ಮ ಮೆಟ್ರೋ ನಿಗಮದ ಪ್ರಗತಿಪರಿಶೀಲನೆ ನಡೆಸಿ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರದ ಸರ್ಕಾರದ 81,988ಕೋಟಿ ರೂ.ಗಳ ಅನುದಾನದಡಿಯಿರುವ ರಾಜ್ಯದ 44 ಯೋಜನೆ ಯೋಜನೆಗಳ ಪೈಕಿ ನಮ್ಮ ಮೆಟ್ರೋ ಯೋಜನೆ ಕೂಡ ಒಂದಾಗಿದೆ. 2 ನೇ ಹಂತದ ಕಾಮಗಾರಿಗಳ ಕುರಿತು ನಿಗಮದ ಎಂಡಿ ಮಹೇಂದ್ರ ಜೈನ್, ನಿರ್ದೇಶಕರಾದ ಎನ್.ಎಂ. ಧೋಖೆ,ವಿಜಯ್ ಕುಮಾರ್ ಧಿರ್ ಅವರಿಂದ ಮಾಹಿತಿ ಕಲೆ ಹಾಕಿದರು.

ನಮ್ಮ ಮೆಟ್ರೋ: ಮೊಬೈಲ್ ವ್ಯಾಲೆಟ್ ಬಳಕೆಗೂ ಅವಕಾಶನಮ್ಮ ಮೆಟ್ರೋ: ಮೊಬೈಲ್ ವ್ಯಾಲೆಟ್ ಬಳಕೆಗೂ ಅವಕಾಶ

ಗಡುವು ಮುಂದಕ್ಕೆ: ನಮ್ಮ ಮೆಟ್ರೋ 2 ನೇ ಹಂತ 2020 ಕ್ಕೆ ಸಂಚಾರಪುಕ್ತಗೊಳಿಸಲು ಬಿಎಂಆರ್ ಸಿಎಲ್ ಗೆ ರಾಜ್ಯ ಸರ್ಕಾರ ಗಡುವು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹಲವು ಕಾರ್ಯಕ್ರಮಗಳಲ್ಲಿ ಈ ಕುರಿತು ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ, 2021ಮಾರ್ಚ್ ವೇಳೆಗೆ ನಮ್ಮ ಮೆಟ್ರೋ 2 ನೇ ಹಂತ ಪೂರ್ಣಗೊಳ್ಳಲಿದೆ ಎಂದರು.

Metro fare won't increase: Vijay Goel

ನಮ್ಮ ಮೆಟ್ರೋ ಯೋಜನೆಗಳು ವಿಳಂವಿಲ್ಲದೆ ಜನರ ಸೇವೆಗೆ ಮುಕ್ತಗೊಳ್ಳಬೇಕು. ಈ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಗಡುವಿನೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

English summary
Union minister for state of statistics and planning Vijay Goel stated that he had given instructions to BMRCL not to increase metro fare since the extension of metro service is essential for secongest the traffic in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X