ಬೆಂಗಳೂರಲ್ಲಿ 5 ಮಳಿಗೆ ತೆರೆಯಲಿದೆ ಮೆಟ್ರೊ ಕ್ಯಾಷ್‌ ಅಂಡ್ ಕ್ಯಾರಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 01 : ಮೆಟ್ರೊ ಕ್ಯಾಷ್‌ ಅಂಡ್ ಕ್ಯಾರಿ ಬೆಂಗಳೂರು ನಗರದಲ್ಲಿ ತನ್ನ 5ನೇ ಮಳಿಗೆಯನ್ನು ಆರಂಭಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ನಗರದಲ್ಲಿ ಇನ್ನೂ 5 ಮಳಿಗೆಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದೆ.

ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ ಜರ್ಮನಿ ಮೂಲದ ಬಹುರಾಷ್ಟ್ರೀಯ ಸಂಸ್ಥೆ. ಈಗಾಗಲೇ ನಗರದಲ್ಲಿ 4 ಮಳಿಗೆಗಳನ್ನು ಹೊಂದಿದ್ದ ಮೆಟ್ರೊ ಗುರುವಾರ ತನ್ನ 5ನೇ ಮಳಿಗೆಯನ್ನು ವೈಟ್‌ಫೀಲ್ಡ್‌ ಐಟಿಪಿಎಲ್‌ ಮುಖ್ಯರಸ್ತೆಯಲ್ಲಿ ಆರಂಭಿಸಿದೆ. ಈ ಮಳಿಗೆಗೆ ಸುಮಾರು 50 ಕೋಟಿ ವೆಚ್ಚ ಮಾಡಿದೆ.

metro

2003ರಲ್ಲಿ ಭಾರತದಲ್ಲಿ ಮೆಟ್ರೊ ತನ್ನ ಉದ್ಯಮವನ್ನು ಆರಂಭಿಸಿತು. ಸದ್ಯದ ಮಟ್ಟಿಗೆ ಬೆಂಗಳೂರು ಮೆಟ್ರೊ ಪಾಲಿಗೆ ಅತೀ ಹೆಚ್ಚು ಆದಾಯ ತಂದುಕೊಡುತ್ತಿರುವ ನಗರ. ಆದ್ದರಿಂದ, ಮುಂದಿನ ದಿನಗಳಲ್ಲಿಯೂ ನಗರದಲ್ಲಿ ಉದ್ಯಮವನ್ನು ವಿಸ್ತರಿಸುವ ಆಲೋಚನೆಯನ್ನು ಅದು ಹೊಂದಿದೆ.

'ಬೆಂಗಳೂರು ನಗರದಲ್ಲಿ 10 ಮೆಟ್ರೊ ಕ್ಯಾಷ್‌ ಅಂಡ್ ಕ್ಯಾರಿ ಮಳಿಗೆ ಆರಂಭಿಸಬೇಕು ಎಂಬುವುದು ನಮ್ಮ ಉದ್ದೇಶ. ಮುಂದಿನ ನಾಲ್ಕು ವರ್ಷಗಳಲ್ಲಿ 5 ಮಳಿಗೆಗಳನ್ನು ಆರಂಭಿಸಲಾಗುತ್ತದೆ' ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಮೆಡಿರಟ್ಟ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಯಶವಂತಪುರ, ಕನಕಪುರ ರಸ್ತೆ, ಹೊಸೂರು ಮುಖ್ಯ ರಸ್ತೆ, ವೈಟ್‌ಫೀಲ್ಡ್‌ ನಲ್ಲಿ ಮೆಟ್ರೊ ಕ್ಯಾಷ್‌ ಅಂಡ್ ಕ್ಯಾರಿ ಮಳಿಗೆಗಳಿವೆ. [ಮೆಟ್ರೊ ವೆಬ್ ಸೈಟ್]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
German wholesale retailer Metro Cash & Carry India plans to open an additional 5 stores in Bengaluru in the next four years. Company has four existing stores in the city and fifth one open at Whitefield on Thursday, June 30, 2016.
Please Wait while comments are loading...