ಬಿಎಂಆರ್ ಸಿಎಲ್ ನಿಂದ ಹೊಸ ಮೆಟ್ರೋ ಭವನ ನಿರ್ಮಾಣಕ್ಕೆ ಸಿದ್ಧತೆ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 06 : ಸ್ವಾಮಿ ವಿವೇಕಾನಂದ ನಿಲ್ದಾಣದ ಬಳಿ ತಮ್ಮ ಕಾರ್ಪೊರೇಟ್ ಕಚೇರಿಯನ್ನು ನಿರ್ಮಿಸಲು ಬಿಎಂಆರ್ ಸಿ ಎಲ್ ಮುಂದಾಗಿದೆ.

ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಹತ್ತಿರವಿರುವುದರಿಂದ ತಮ್ಮ ಕಾರ್ಪೊರೇಟ್ ಕಚೇರಿಯನ್ನು ಅಲ್ಲಿ ನಿರ್ಮಿಸಲು ಮುಂದಾಗಿದೆಬಿಎಂಆರ್ ಸಿ ಎಲ್ , ಬೈಯಪ್ಪನಹಳ್ಳಿ ಸನಿಹ ದಲ್ಲಿನ ಸ್ವಾಮಿ ವಿವೇಕಾನಂದ(ಎಸ್ ವಿ ರೋಡ್) ನಿಲ್ದಾಣದ ಬಳಿ ಕಾರ್ಪೊರೇಟ್ ಕಚೇರಿಯನ್ನು ನಿರ್ಮಿಸಲು ಮುಂದಾಗಿದೆ.

ಮೆಟ್ರೋ ಎರಡನೇ ಹಂತದ ಕಾಮಗಾರಿಯಲ್ಲಿ ಎರಡೂ ನಕ್ಷೆಗೂ ಅಪಸ್ವರ

ಮೆಟ್ರೋ ಕಚೇರಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಮಂದಿ ನೌಕರರಿದ್ದಾರೆ ಹಾಗಾಗಿ ತಮ್ಮದೇ ಆದ ಪ್ರತ್ಯೇಕ ಕಟ್ಟಡವನ್ನು ಸ್ಥಾಪಿಸ ಹೊರಟಿದೆ. ಅದ್ಯಕ್ಕೆ ಬಿಎಂಆರ್ ಎಲ್ ಮುಖ್ಯ ಕಚೇರಿ ಶಾಂತಿನಗರದಲ್ಲಿರುವ ಟಿಟಿಎಂಸಿಯ ಮೂರು ಹಾಗೂ ನಾಲ್ಕನೇ ಅಂತಸ್ಥಿನಲ್ಲಿದೆ. 20 ಸಾವಿರ ಚದರಡಿ ಜಾಗಕ್ಕಾಗಿ ಪ್ರತಿ ತಿಂಗಳು 10ಲಕ್ಷ ರೂ. ಪಾವತಿಸಲಾಗುತ್ತಿದೆ.

Metro Bhavan will comes up in SV Road

ಕಾವೇರಿ ಭವನ, ಖನಿಜ ಭವನ ಮಾದರಿಯಲ್ಲಿ ಮೆಟ್ರೋ ಭವನ ಎಂದು ಹೆಸರಿಡಲಾಗುತ್ತಿದೆ. 10 ಅಂತಸ್ತಿನಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಶಾಂತಿನಗರದಲ್ಲಿ ಸೀಮಿತ ಸ್ಥಳಾವಕಾಶವಿದೆ. ನಿಗಮ ಇನ್ನಷ್ಟು ನಿಲ್ದಾಣಗಳನ್ನು ನಿರ್ಮಿಸಲಿದೆ. ಇನ್ನಷ್ಟು ನಿಲ್ದಾಣಗಳನ್ನು ನಿರ್ಮಿಸಲಿದೆ. ಇನ್ನಷ್ಟು ಯೋಜನೆಗಳು ಕಾರ್ಯಗತವಾಗಬೇಕಿದೆ. ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡದ ಅಗತ್ಯವಿದೆ.

ನಮ್ಮ ಮೆಟ್ರೋ ರೈಲಿನಲ್ಲಿ ಚ್ಯೂಯಿಂಗ್‌ ಗಮ್ ಅಗಿಯುವಂತಿಲ್ಲ!

ಪ್ರಸ್ತಾವಿತ ಮೆಟ್ರೋ ಭವನ ನಿರ್ಮಾಣಕ್ಕಾಗಿ ಬಿಎಂಆರ್ಸಿಎಲ್ ಕಳೆದ ತಿಂಗಳುಯ ನಿರ್ಮಾಣ ತಜ್ಞರಿಂದ ಅರ್ಜಿ ಆಹ್ವಾನಿಸಿತ್ತು. ಬಿಡ್ ಮಾಡಲು ಡಿಸೆಂಬರ್ 8 ಕೊನೆಯ ದಿನವಾಗಿದೆ. ಎಸ್ ವಿ ರಸ್ತೆ ನಿಲ್ದಾಣದಲ್ಲಿ ಈಗಾಗಲೇ ಒಂದು ಎಕರೆ ಭೂಮಿಯನ್ನು ಹೊಂದಿದ್ದೇವೆ. ಬೇರೆ ಕಾರ್ಪೊರೇಟ್ ಕಂಪನಿಗಳಿಗೆ ಜಾಗ ಭೋಗ್ಯಕ್ಕೆ ನೀಡುವ ಮೂಲಕ ಅಗತ್ಯ ಹಣವನ್ನು ಹೊಂದಿಸಲಿದ್ದೇವೆ ಎಂದು ಬಿಎಂಆರ್ ಸಿ ಎಲ್ ನಿಂದ ನಿರ್ಗಮಿಸಲಿರುವ ಎಂಡಿ ಪ್ರದೀಪ್ ಸಿಂಗ್ ಖರೋಲ(ಪ್ರಸ್ತುತ ಏರ್ ಇಂಡಿಯಾ ಸಿಎಂಡಿ) ತಿಳಿಸಿದ್ದಾರೆ.ತಿಳಿಸಿದ್ದಾರೆ.

ಕಾರ್ಪೊರೇಟ್ ಕಚೇರಿ ನಿರ್ಮಾಣಕ್ಕಾಗಿ ಎಸ್ ವಿ ರಸ್ತೆ ನಿಲ್ದಾಣದ ಪಾರ್ಕಿಂಗ್ ಪ್ರದೇಶ ಬಳಕೆಯಾಗುವ ಸಾಧ್ಯತೆ ಇದೆ ಇದರಿಂದ ಪಾರ್ಕಿಂಗ್ ಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BMRCL which has around 500 employees in its corporate office is planning to have an own new building at sri Vivekananda Road near baiyappanahalli.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ