ಆ.12ಕ್ಕೆ ಜೆಡಿಎಸ್ ಕಚೇರಿಯಲ್ಲಿ ಸದಸ್ಯತ್ವ ನೋಂದಣಿ, ಪದಾಧಿಕಾರಿಗಳ ಸಭೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಬೃಹತ್ ಬೆಂಗಳೂರು ಮಹಾನಗರ ವಿದ್ಯಾರ್ಥಿ ಜನತಾದಳ (ಜಾತ್ಯತೀತ) ದಿಂದ ಆಗಸ್ಟ್ ಹನ್ನೆರಡರ ಶನಿವಾರ ಬೆಳಗ್ಗೆ 11ಕ್ಕೆ ಸದಸ್ಯತ್ವ ನೋಂದಣಿ ಹಾಗೂ ನೂತನ ಪದಾಧಿಕಾರಿಗಳ ಸಭೆಯನ್ನು ಬೆಂಗಳೂರಿನ ಜೆಪಿ ಭವನ (ಜೆಡಿಎಸ್ ಕಚೇರಿ)ದಲ್ಲಿ ಆಯೋಜಿಸಲಾಗಿದೆ.

ಎಚ್ ಡಿಕೆ ಆರೋಗ್ಯದಲ್ಲಿ ಏರುಪೇರು, ಸಿಂಗಾಪುರದಲ್ಲಿ ಚಿಕಿತ್ಸೆ

ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ದ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಬೃಹತ್ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಅಧ್ಯಕ್ಷ ಆರ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು.

Membership campaign and office bearers meeting at JDS office, Bengaluru

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಶರವಣ, ರಮೇಶ್ ಬಾಬು, ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ದ ಕಾರ್ಯಾಧ್ಯಕ್ಷ ಆರ್.ವಿ.ಹರೀಶ್, ರಾಜ್ಯ ಜೆಡಿಎಸ್ ಮುಖಂಡರಾದ ಎ.ಪಿ.ರಂಗನಾಥ್, ಟಿ.ಪ್ರಭಾಕರ್, ಎನ್.ರಾಜಣ್ಣ, ಮುಖಂಡರಾದ ಕೆ.ವಿ.ನಾರಾಯಣಸ್ವಾಮಿ, ಬಿ.ಎಚ್.ಚಂದ್ರಶೇಖರ್, ರಮೇಶ್ ಗೌಡ, ಉಪಮೇಯರ್ ಎಂ.ಆನಂದ್ ಮತ್ತಿತರರು ಭಾಗವಹಿಸುವರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Membership campaign and office bearers meeting at JDS office, Bengaluru on Aug 12th, Saturday 11 AM.
Please Wait while comments are loading...