ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಚಿರಂಜೀವಿ, ಖುಷ್ಬು, ಸಿಧು!

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಬಹುಭಾಷಾ ನಟ, ನಟಿಯರನ್ನು ಪ್ರಚಾರಕ್ಕೆ ಕರೆತರಲು ವೇದಿಕೆ ಸಿದ್ಧಗೊಳ್ಳುತ್ತಿದೆ.

ಏಪ್ರಿಲ್ 18ರಿಂದ ಬಿಜೆಪಿ ರಣ ಕಹಳೆ, ಸ್ಟಾರ್ ಪ್ರಚಾರಕರು ಸಿದ್ಧ

ತಮಿಳು ನಾಯಕ ನಟಿ ಖುಷ್ಬು, ಮೆಗಾಸ್ಟಾರ್ ಚಿರಂಜೀವಿ, ಪಂಜಾಬ್ ನ ನಿವೃತ್ತ ಕ್ರಿಕೇಟ್ ಆಟಗಾರ ನವಜೋತ್ ಸಿಂಗ್ ಸಿಧುರಿಂದ ಪ್ರಚಾರ ಕಾರ್ಯ ನಡೆಯಲಿದೆ. ಪ್ರಿಯಾಂಕಾ ಗಾಂಧಿಯವರನ್ನು ಕೂಡ ಪ್ರಚಾರಕ್ಕೆ ಕರೆ ತರುವ ಪ್ರಯತ್ನಗಳು ನಡೆಯುತ್ತಿದೆ.

ಹೆಂಗಿತ್ತು ಚಿರಂಜೀವಿ ಜನಪ್ರಿಯತೆ:ಈಗ ಏನಾಗಿ ಹೋಯಿತು

ಈಗಾಗಲೇ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಐಸಿಸಿಗೆ ಈ ಕುರಿತು ಪ್ರಸ್ತಾವಣೆ ಸಲ್ಲಿಸಿದ್ದಾರೆ. ಹೈಕಮಾಂಡ್ ಒಪ್ಪಿಗೆ ದೊರೆತರೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಿಯಾಂಕ ಗಾಂಧಿ ಪ್ರಚಾರ ಕೈಗೊಳ್ಳಲಿದ್ದಾರೆ.

Mega star Chiranjeevi will campaign for congress

ರಾಜ್ಯದ ವಿವಿಧ ಭಾಗಗಳಲ್ಲಿ ಬಹುಭಾಷಾ ನಟಿಯರು ಪ್ರಚಾರ ಕೈಗೊಳ್ಳಲಿದ್ದಾರೆ. ಬೆಂಗಳೂರಿನ ಕೊಳಗೇರಿ ಪ್ರದೇಶದಲ್ಲಿ ನಟಿ ಖುಷ್ಬು ಪ್ರಚಾರ ಮಾಡಿದರೆ, ಚಿಕ್ಕಬಳ್ಳಾಪುರ, ಕೋಲಾರ, ಮುಳುಬಾಗಿಲು , ದೊಡ್ಡ ಬಳ್ಳಾಪುರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಇವರುಗಳಿಗೆ ನಟಿ ಭಾವನಾ, ಮಾಲಾಶ್ರೀ, ಜಯಮಾಲಾ, ನಟರಾದ ಶಶಿಕುಮಾರ್, ಸಾಧುಕೋಕಿಲ, ಉಮಾಶ್ರೀ, ರಮ್ಯಾ ಪ್ರಚಾರ ಮಾಡಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ನಟ ಸುದೀಪ್ ಕೂಡ ಪ್ರಚಾರ ಮಾಡುವ ಸಾಧ್ಯತೆ ಇದೆ. ಈಗಾಗಲೇ ಹಲವರು ನಟರನ್ನು ಸಂಪರ್ಕಿಸಿ ಪ್ರಚಾರದ ಬಗ್ಗೆ ಡಿ.ಕೆ. ಶಿವಕುಮಾರ್ ಚರ್ಚಿಸಿದ್ದಾರೆ ಎನ್ನಲಾಗಿದೆ.

ಸದ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ನಂತರ ಸ್ಟಾರ್ ಪ್ರಚಾರಕರ ವೇಳಾ ಪಟ್ಟಿ ಕೂಡ ಸಿದ್ಧಗೊಳ್ಳಲಿದೆ. ಚುನಾವಣಾ ಪ್ರಚಾರ ಕಾರ್ಯ ಚಟುವಟಿಕೆಗಳ ಆರಂಭ ಕುರಿತು ಡಿಕೆ ಶಿವಕುಮಾರ್ ಏ.17ರಂದು ಸಭೆ ಕರೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tollywood megha star Chiranjeevi will camoaign for congress party in Kolar, chikkaballapur and other border district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ